janadhvani

Kannada Online News Paper

ಬಜೆಟ್ 2021: ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಬಜೆಟ್ 2021 ಮಂಡನೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡನೆಯಾಗಲಿದೆ.

ಕೋವಿಡ್-19 ಕಾರಣದಿಂದಾಗಿ ಬಜೆಟ್ ಪ್ರತಿಗಳನ್ನು ಮುದ್ರಿಸದೇ ಇರುವುದಕ್ಕೆ ಕೇಂದ್ರ ಹಣಕಾಸು ಸಚಿವಾಲಯ ತೀರ್ಮಾನಿಸಿದೆ. ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡನೆಯಾಗುತ್ತಿರುವುದು 2021 ರ ಬಜೆಟ್ ಮಂಡನೆಯನ್ನು ಐತಿಹಾಸಿಕವಾಗಿಸುತ್ತಿದೆ.

ಕಾಗದ ರಹಿತ ಬಜೆಟ್ ಮಂಡನೆಗೆ ಸಂಸತ್ ನ ಉಭಯ ಸದನಗಳೂ ಅನುಮೋದನೆ ನೀಡಿವೆ ಎಂದು ಐಎಎನ್ಎಸ್ ವರದಿ ಪ್ರಕಟಿಸಿದೆ. ಬಜೆಟ್ ಪ್ರತಿಯನ್ನು ಕಾಗದದಲ್ಲಿ ಮುದ್ರಿಸುವುದಕ್ಕಾಗಿ ಪ್ರೆಸ್ ನಲ್ಲಿ ಹಲವು ಮಂದಿ 15 ದಿನಗಳ ಕಾಲ ಇರಬೇಕಾಗುತ್ತದೆ. ಆದರೆ ಕೋವಿಡ್-19 ಭಯ ಆವರಿಸಿರುವುದರಿಂದ ಬಜೆಟ್ ಪ್ರತಿಯನ್ನು ಮುದ್ರಿಸದೇ ಇರುವುದಕ್ಕೆ ನಿರ್ಧರಿಸಲಾಗಿದೆ.

ಈ ಬಾರಿಯ ಬಜೆಟ್ ಪ್ರಕ್ರಿಯೆಯಲ್ಲಿ ಹಲವು ಸಂಪ್ರದಾಯಗಳನ್ನು ಬದಿಗಿರಿಸಲಾಗುತ್ತಿದ್ದು, ಬಜೆಟ್ ಗೂ ಮುನ್ನ ನಡೆಯುತ್ತಿದ್ದ ಹಲ್ವಾ ಸಮಾರಂಭವೂ ಈ ಬಾರಿ ನಡೆಯುವ ಸಾಧ್ಯತೆಗಳೂ ಕ್ಷೀಣಿಸಿದೆ.

error: Content is protected !! Not allowed copy content from janadhvani.com