janadhvani

Kannada Online News Paper

ದುಬೈನಲ್ಲಿ ಸಿಲುಕಿದ್ದ ಸೌದಿ ಪ್ರಯಾಣಿಕರಿಗೆ ಆಸರೆಯಾದ ಕೆಸಿಎಫ್

ದುಬೈ: ಕೋವಿಡ್-19 ಕಾರಣದಿಂದ ಸೌದಿ ಅರೇಬಿಯಾ ತಲುಪಲು ಅಸಾಧ್ಯವಾದ ಕಾರಣ ಯುಎಇ ಮೂಲಕ ಹೋಗಲು ದುಬೈ ತಲುಪಿದ್ದ ಹಲವಾರು ಭಾರತೀಯರನ್ನು ಕೆಸಿಎಫ್ ಯುಎಇ ತಂಡವು ಎರಡು ಬಸ್ ವ್ಯವಸ್ಥೆಗೊಳಿಸಿ ದಮ್ಮಾಮ್ ಮತ್ತು ರಿಯಾದ್ ಗೆ ತಲುಪಿಸಿಕೊಡುವಲ್ಲಿ ಯಶಸ್ವಿಯಾಗಿದೆ.

ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು, ಕೆಸಿಎಫ್ ದುಬೈ ನಾರ್ತ್ ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿನಗರ ಸೇರಿದಂತೆ ಹಲವು ನಾಯಕರು ನೇತೃತ್ವ ನೀಡಿದ್ದರು.

ಅನಿವಾಸಿ ಭಾರತೀಯರ ಸಂಕಷ್ಟಗಳಿಗೆ ಮಿಡಿಯುವ ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇಯು ಕೋವಿಡ್-19 ಸಂದರ್ಭದಲ್ಲಿ ಹತ್ತರಷ್ಟು ಚಾರ್ಟರ್ ವಿಮಾನ ವ್ಯವಸ್ಥೆಗೊಳಿಸುವ ಮೂಲಕ ಸಂಕಷ್ಟಕ್ಕೊಳಗಾದ ಎರಡು ಸಾವಿರದಷ್ಟು ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ತಲುಪಿಸಿಕೊಡುವಲ್ಲಿ ಯಶಸ್ವಿಯಾಗಿತ್ತು.

ಗಲ್ಫ್ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ಅನಿವಾಸಿ ಕನ್ನಡಿಗರ ಭರವಸೆಯ ಬೆಳಕಾಗಿ ಕೆಸಿಎಫ್ ಕಾರ್ಯಾಚರಿಸುತ್ತಿದ್ದು ಸಾಮಾಜಿಕ ಶೈಕ್ಷಣಿಕ ಸಾಮುದಾಯಿಕ ಕಾರ್ಯಯೋಜನೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಕೆಸಿಎಫ್ ಉತ್ತಮವಾದ ಸಂಘಟನಾ ನೆಟ್ವರ್ಕ್ ಹೊಂದಿದ್ದು ಯುಎಇಯ ಎಲ್ಲಾ ಎಮಿರೇಟ್ಸ್ ಗಳಲ್ಲೂ 24/7 ಕಾರ್ಯಕರ್ತರು ಸಹಾಯಕ್ಕೆ ಸಜ್ಜಾಗಿದ್ದಾರೆ.

error: Content is protected !! Not allowed copy content from janadhvani.com