janadhvani

Kannada Online News Paper

ರಸ್ತೆಗಳಿಗೆ ಮುಸ್ಲಿಮರ ಹೆಸರು: ಅನಂತಕುಮಾರ್‌ ಹೆಗಡೆ ವಿರೋಧ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪಾದರಾಯನಪುರ ವಾರ್ಡ್‌ನ ಮುಖ್ಯ ರಸ್ತೆ, ಅಡ್ಡ ರಸ್ತೆಗಳಿಗೆ ಮುಸಲ್ಮಾನ್‌ ವ್ಯಕ್ತಿಗಳ ಹೆಸರು ಇಡದಂತೆ ಉತ್ತರ ಕನ್ನಡ (ಕೆನರಾ)ಅನಂತಕುಮಾರ್‌ ಹೆಗಡೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ, ಪಾದರಾಯನಪುರ ವಾರ್ಡ್‌ ನಲ್ಲಿ ಕೇವಲ ಮುಸಲ್ಮಾನರ ಹೆಸರು ಶಿಫಾರಸ್ಸು ಮಾಡಿ
ಸಮಾಜ ಸೇವಕರ ಹೆಸರಿನಲ್ಲಿ ಕೋಮು ವೈಭವೀಕರಣ ಸರಿಯಲ್ಲ. ಬಿಬಿಎಂಪಿಯ ಈ ನಿರ್ಧಾರದಿಂದ ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ. ಬಿಬಿಎಂಪಿ ಮಾದರಿಯಲ್ಲಿ ಬಹು ಸಂಖ್ಯಾತ ಬಾಹುಳ್ಯವುಳ್ಳ ನಗರ ಸಭೆ, ಪುರಸಭೆಗಳು ಇದೇ
ರೀತಿ ತೀರ್ಮಾನ ತೆಗೆದುಕೊಂಡರೆ ಪರಿಸ್ಥಿತಿ ಊಹಿಸಲು ಕಷ್ಟವಾಗಲಿದೆ.

ಬಿಬಿಎಂಪಿ ನಿರ್ಧಾರ ಬೇಜವಾಬ್ದಾರಿ ತನದ ಪರಮಾವಧಿಯಾಗಿದ್ದು, ಹಾಗೇನಾದರೂ ರಸ್ತೆಗಳಿಗೆ ಹೆಸರನ್ನು ಇಡಲೇಬೇಕಾದ ಅನಿವಾರ್ಯತೆ ಇದ್ದರೆ, ಸ್ವಾತಂತ್ರ್ಯ ಯೋಧರ, ರಾಷ್ಟ್ರ ಕಂಡ ಮಹಾನ್‌ ವ್ಯಕ್ತಿಗಳ, ದೇಶಕ್ಕಾಗಿ ಹೋರಾಡಿದ ಸೈನಿಕರ ಹೆಸರು
ಇಡುವಂತೆ ಸಲಹೆ ನೀಡಿದ್ದಾರೆ.

error: Content is protected !! Not allowed copy content from janadhvani.com