ಬೆಂಗಳೂರು: ಧಾರ್ಮಿಕ ಶಿಕ್ಷಣ ಕೇಂದ್ರಗಳಾಗಿ ಕಾರ್ಯಾಚರಿಸುತ್ತಿರುವ ಮದ್ರಸಗಳನ್ನು ಆಧುನೀಕರಣಗೊಳಿಸುವ ಕೇಂದ್ರ ಸರಕಾರದ ‘ಸ್ಕೀಮ್ ಫಾರ್ ಕ್ವಾಲಿಟಿ ಎಜುಕೇಶನ್ ಇನ್ ಮದ್ರಸಾಸ್( ಎಸ್ ಕ್ಯೂ ಇಎಮ್) ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ರಾಜ್ಯ ಅಲ್ಪಸಂಖ್ಯಾತರ ಇಲಾಖೆಯ ಕಾರ್ಯದರ್ಶಿ ಹಾಗು ನೋಡಲ್ ಅಧಿಕಾರಿ ನೇತೃತ್ವದಲ್ಲಿ ರಾಜ್ಯ ವಖ್ಫ್ ಮಂಡಳಿಯ ಗುಳಿಸ್ತಾನ್ ಶಾದಿ ಮಹಲ್ನಲ್ಲಿ ಮೊದಲ ಸುತ್ತಿನ ಉಲಮಾ ಸಭೆ ಇತ್ತೀಚೆಗೆ ನಡೆಸಲಾಗಿದ್ದು ಭಾಗಶಃ ಯಶಸ್ವಿಯಾಗಿದೆ ಎಂದು ರಾಜ್ಯ ವಖ್ಫ್ ಮಂಡಳಿ ಸದಸ್ಯ ಎನ್.ಕೆ.ಎಂ.ಶಾಫಿ ಸಅದಿ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು 11ನೇ ಹಣಕಾಸು ಯೋಜನೆಯಲ್ಲಿ ಈ ಮದ್ರಸ ಆಧುನಿಕರಣ ಯೋಜನೆಯು ಘೋಷಣೆಯಾಗಿತ್ತು, ಆ ಯೋಜನೆಯು ಈಗ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ವರ್ಗಾವಣೆಗೊಂಡಿರುತ್ತದೆ.
ಔಪಚಾರಿಕ ಶಿಕ್ಷಣ ನೀಡಲು ಸಿದ್ಧವಿರುವ ಸಂಸ್ಥೆಗಳಿಗೆ ಕಟ್ಟಡ, ತರಗತಿ ಕೊಠಡಿ, ಸ್ಮಾರ್ಟ್ ಕ್ಲಾಸ್, ಸೈನ್ಸ್ ಕಿಟ್, ಬುಕ್ ,ಶಿಕ್ಷಕರ ವೇತನ,ಬ್ಯಾಂಕ್ ಗಳಿಗಾಗಿ ಹಣಕಾಸಿನ ನೆರವು ಈ ಯೋಜನೆಯಿಂದ ಲಭ್ಯ ಇದೆ.
ಈ ಮಹತ್ವಪೂರ್ಣ ಯೋಜನೆಯ ಜಾರಿಗಾಗಿ ಪ್ರಥಮ ಹಂತದ ಉಲಮಾ ಸಬೆಯಲ್ಲಿ ಬಿಜಾಪುರ ಮೌಲಾನ ತನ್ವೀರ್ ಹಾಷ್ಮಿ, ಮೌಲಾನಾ ಇಫ್ತಿಕಾರ್ ಖಾಸ್ಮಿ, ಮೌಲಾನ ಶಬೀರ್ ರಝ್ವಿ, ಮೌಲಾನ ಸಅದ್ ಮುಸ್ಲಿಯಾರ್, ಮೌಲಾನಾ ಉಮರ್ ದಾರಿಮಿ, ಮೌಲಾನ ವಹೀದುದ್ದೀನ್ ಉಮ್ರಿ, ಮೌಲಾನ ಅಬ್ದುಲ್ಲ ಕುಂಞಿ, ಮೌಲಾನ ಇಜಾಝ್ ಅಹ್ಮದ್, ಮೌಲಾನ ಶಬೀರ್ ನದ್ವಿ, ರಾಜ್ಯ ವಖ್ಫ್ ಮಂಡಳಿ ಸದಸ್ಯ ಅಝರ್ ಆಬಿದಿ, ವಖ್ಫ್ ಬೋರ್ಡ್ ಸಿಇಒ ಮುಹಮ್ಮದ್ ಯೂಸುಫ್, ನೋಡೆಲ್ ಆಫಿಸರ್ ಅಥಾವುರ್ರಹ್ಮಾನ್ ಮುಂತಾದವರನ್ನು ಸೇರಿಸಿ ಮೊದಲ ಸುತ್ತಿನ ಸಭೆ ನಡೆಸಲಾಗಿದೆ.
ಮುಂದಿನ ಹಂತದ ಸಭೆಯಲ್ಲಿ ಇನ್ನಷ್ಟು ವಿಸ್ತೃತವಾಗಿ ಚರ್ಚಿಸಲಾಗುವುದು ಹಾಗೂ ಈ ಯೋಜನೆಯ ಸದುಪಯೋಗ ಪಡೆಯಲು ಧಾರ್ಮಿಕ ಉನ್ನತ ಶಿಕ್ಷಣ ನೀಡುವ ಆಡಳಿತಮಂಡಳಿಗಳು ಸಿಧ್ದತೆ ಸಿಮಾಡಿಕೊಳ್ಳಬೇಕು ಎಂದು ಶಾಫಿ ಸಅದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
ಅಮಾಯಕರ ಬಂಧನ: ಜ.22 ರಂದು ಬೆಂಗಳೂರು ಬಂದ್- ಮುಸ್ಲಿಂ ಸಂಘಟನೆ ಕರೆ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಹುನಿರೀಕ್ಷಿತ ರೈಲು ಸೇವೆ ಆರಂಭ
ರಸ್ತೆಗಳಿಗೆ ಮುಸ್ಲಿಮರ ಹೆಸರು: ಅನಂತಕುಮಾರ್ ಹೆಗಡೆ ವಿರೋಧ
ಒಂದು ವಾರಗಳ ಲಾಕ್ಡೌನ್ ತೆರವು- ಏನೆಲ್ಲಾ ನಿರ್ಬಂಧ?
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ವಿದ್ಯಾರ್ಥಿನಿ ಉಮ್ಮುಲ್ ಅರ್ವ ತೇರ್ಗಡೆ
ರಸ್ತೆ ಬದಿಯಲ್ಲೇ ಮಡಿದ ಕೋರೋನಾ ಪೀಡಿತ ವ್ಯಕ್ತಿ- ತಲೆಯೆತ್ತಿ ನೋಡದ ಅಧಿಕಾರಿಗಳು