ಕಾಸರಗೋಡು |ಕಾಞಂಗಾಡ್ ಕಲ್ಲುರಾವಿಯಲ್ಲಿ ಎಸ್ವೈಎಸ್ ಕಾರ್ಯಕರ್ತ ಅಬ್ದುರಹ್ಮಾನ್ ಔಫ್ ರನ್ನು ಇರಿದು ಕೊಲೆಗೈದ ಎಲ್ಲ ಮುಸ್ಲಿಂ ಲೀಗ್ ಗೂಂಡಾಗಳು ಪೋಲೀಸ್ ಕಸ್ಟಡಿಗೆ.
ಮುಖ್ಯ ಆರೋಪಿಗಳಾದ ಯೂತ್ ಲೀಗ್ ಕಾಞಂಗಾಡ್ ಮುನ್ಸಿಪಲ್ ಕಾರ್ಯದರ್ಶಿ ಇರ್ಷಾದ್, ಎಂಎಸ್ಎಫ್ ಕಾಞಂಗಾಡ್ ಮುನ್ಸಿಪಲ್ ಅಧ್ಯಕ್ಷ ಹಸನ್, ಯೂತ್ ಲೀಗ್ ಕಾರ್ಯಕರ್ತರಾದ ಆಶಿರ್ ಮತ್ತು ಇಶಾಕ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರ ಬಂಧನವನ್ನು ಇಂದು ದಾಖಲಿಸಲಾಗುವುದು. ಈ ಪ್ರಕರಣದಲ್ಲಿ ಇಸ್ಹಾಖ್ ಹೊರತುಪಡಿಸಿ ಮೂವರು ಆರೋಪಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘರ್ಷಣೆಯ ಸಂದರ್ಭದಲ್ಲಿ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಇರ್ಷಾದ್ ನನ್ನು ನಿನ್ನೆ ರಾತ್ರಿ ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದರು. ಸಂಘರ್ಷದಲ್ಲಿ ಆತನಿಗೆ ಗಮನಾರ್ಹವಾದ ಗಾಯಗಳಿಲ್ಲ ಮತ್ತು ಅದರ ಬಗ್ಗೆ ಪ್ರಚಾರವು ಸುಳ್ಳು ಎಂದು ಅದು ಬಯಲಾಗಿದೆ. ಕಾಞಂಗಾಡ್ ಡಿವೈಎಸ್ಪಿ ಕಚೇರಿಯಲ್ಲಿ ಪೋಲೀಸ್ ತನಿಖೆ ವೇಳೆ, ಅಬ್ದುರಹ್ಮಾನ್ ರನ್ನು ಇರಿದವನು ನಾನೇ ಎಂದು ಇರ್ಷಾದ್ ತಪ್ಪೊಪ್ಪಿಕೊಂಡಿದ್ದಾನೆ. ಆ ಸಮಯದಲ್ಲಿ ಹಸನ್ ಮತ್ತು ಆಶೀರ್ ಜೊತೆಗಿದ್ದರು ಎಂದು ಇಸ್ಹಾಕ್ ಸಾಕ್ಷ್ಯ ನುಡಿದಿದ್ದಾನೆ.
ಮರಣೋತ್ತರ ವರದಿಯು, ಅಬ್ದುರ್ರಹ್ಮಾನ್ ಅವರ ಎದೆಯ ಬಲಭಾಗದಲ್ಲಿ ಎಂಟು ಇಂಚು ಆಳದಲ್ಲಿ ಇರಿದಿದ್ದು,ಇದು ಎದೆಗೆ ಮಾತ್ರವಲ್ಲದೆ ಶ್ವಾಸಕೋಶಕ್ಕೂ ತಗುಲಿದೆ ಎಂದು ಹೇಳುತ್ತದೆ.
ಬುಧವಾರ ರಾತ್ರಿ ಸುಮಾರು 10.30 ರ ಸುಮಾರಿಗೆ ಕಲ್ಲುರಾವಿ ಹಳೆಯ ಬೀಚ್ಗೆ ಬೈಕ್ನಲ್ಲಿ ಬರುತ್ತಿದ್ದ ಅಬ್ದುರಹ್ಮಾನ್ ಔಫ್ ಮತ್ತು ಶುಹೈಬ್ ಮೇಲೆ ಯೂತ್ ಲೀಗ್ ಕಾರ್ಯಕರ್ತರಾದ ಇರ್ಷಾದ್ ಮತ್ತು ಅವರ ಗ್ಯಾಂಗ್ ಹಲ್ಲೆ ನಡೆಸಿದೆ. ದಾಳಿಯ ವೇಳೆ ಗಾಯಗೊಂಡಿದ್ದ ಶುಹೈಬ್ ಆರೋಪಿಗಳನ್ನು ಗುರುತಿಸಿದ್ದಾರೆ.
ಕಾಞಂಗಾಡ್ ಪುರಸಭೆಯ 35 ನೇ ವಾರ್ಡ್ನಲ್ಲಿ ಎಲ್ಡಿಎಫ್ ಜಯಭೇರಿಯು ಲೀಗ್ ಗೂಂಡಾಗಳನ್ನು ಕೆರಳಿಸಿದೆ. ವಿಜೇತ ಎಲ್ಡಿಎಫ್ ಅಭ್ಯರ್ಥಿ ಸೇರಿದಂತೆ ಗುಂಪು ಸಂಭ್ರಮಿಸುತ್ತಿದ್ದಾಗ ಯೂತ್ ಲೀಗ್ ಸದಸ್ಯರಿಂದ ಕಲ್ಲು ತೂರಾಟ ನಡೆಯಿತು. ನಂತರದ ದಿನಗಳಲ್ಲಿ ಔಫ್ ರನ್ನು ಇರಿದು ಕೊಲ್ಲಲಾಯಿತು.ಏತನ್ಮಧ್ಯೆ, ಔಫ್ ಹತ್ಯೆಯನ್ನು ಖಂಡಿಸಿ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗಳು ಮುಂದುವರೆದಿದೆ.
ರಾಜಕೀಯ ಸೋಲುಗಳನ್ನು ಕೊಲೆ ರಾಜಕಾರಣದೊಂದಿಗೆ ಎದುರಿಸುತ್ತಿರುವ ಮುಸ್ಲಿಂ ಲೀಗ್ ಕಾರ್ಯಕರ್ತರನ್ನು ಹದ್ದು ಬಸ್ತಿನಲ್ಲಿಡಲು ಲೀಗ್ ನಾಯಕತ್ವ ಸಿದ್ಧವಾಗಬೇಕಿದೆ.ಪ್ರಜಾಪ್ರಭುತ್ವ ಸಮಾಜಕ್ಕೆ ಸವಾಲಾಗಿ ಮುಸ್ಲಿಂ ಲೀಗ್ ಪರಿಣಮಿಸಿದೆ.ಚುನಾವಣೆಯ ಸೋಲನ್ನು ಮರೆಮಾಚಲು ಲೀಗ್ ಅನುಸರಿಸುತ್ತಿರುವ ತಲವಾರು ರಾಜಕಾರಣವು ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ. ಮುಸ್ಲಿಂ ಲೀಗ್ನ ಈ ಕ್ರೂರ ಕ್ರಮವನ್ನು ತಿರಸ್ಕರಿಸಲು ಎಲ್ಲಾ ಪ್ರಜಾಪ್ರಭುತ್ವವಾದಿಗಳು ಸಿದ್ಧರಾಗಿರಬೇಕು ಎಂದು ಎಸ್ವೈಎಸ್ ಸೇರಿದಂತೆ ವಿವಿಧ ಸಂಘಟನೆಗಳು ಒತ್ತಾಯಿಸಿದೆ.