janadhvani

Kannada Online News Paper

ಮಂಗಳೂರು, ಡಿ 24 : –ಖಾಸಗಿ ವಿಮಾನಯಾನ ಸಂಸ್ಥೆ ‘ಗೋಏರ್’ ಮುಂಬೈ ಮತ್ತು ಮಂಗಳೂರು ನಡುವೆ ತನ್ನ ದೈನಂದಿನ ವಿಮಾನ ಸೇವೆಗಳನ್ನು ಆರಂಭಿಸಿರುವುದಾಗಿ ಗುರುವಾರ ಪ್ರಕಟಿಸಿದೆ.

ಅತ್ಯಾಧುನಿಕ ಏರ್‌ಬಸ್ 320 ನಿಯೋ ವಿಮಾನ ಮುಂಬೈ ಮತ್ತು ಮಂಗಳೂರು ನಡುವೆ ದೈನಂದಿನ ಹಾರಾಟ ನಡೆಸಲಿದೆ. ಶೀಘ್ರ ಮತ್ತು ಅನುಕೂಲಕರ ಸಂಪರ್ಕವನ್ನು ಕಲ್ಪಿಸುವ ವೇಳಾಪಟ್ಟಿಯನ್ನು ಸಂಸ್ಥೆ ಹೊಂದಿದೆ.

‘ಗೋಏರ್ ‘ವಿಮಾನ ಜಿ- 8 0338 ಮಂಗಳೂರಿನಿಂದ ಬೆಳಿಗ್ಗೆ 9.30 ಗಂಟೆಗೆ ಹೊರಟು 11 ಗಂಟೆಗೆ ಮುಂಬೈ ತಲುಪಲಿದೆ. ವಾಪಸ್‍ ಮಾರ್ಗದಲ್ಲಿ ಜಿ- 8 0335 ವಿಮಾನ ಮುಂಬೈಯಿಂದ ಸಂಜೆ 7.40 ಗಂಟೆಗೆ ಹೊರಟು ರಾತ್ರಿ 9 ಗಂಟೆಗೆ ಮಂಗಳೂರಿನಲ್ಲಿ ಇಳಿಯಲಿದೆ.