janadhvani

Kannada Online News Paper

ಬಾಲಕನ ಅಪಹರಣ ಸುಖಾಂತ: ಆರೋಪಿಗಳು ಪೋಲೀಸ್ ಬಲೆಗೆ

ಬೆಳ್ತಂಗಡಿ,ಡಿ.19: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಉಜಿರೆಯ ಬಾಲಕನ ಅಪಹರಣ ಪ್ರಕರಣ ಸುಖಾಂತ ಕಂಡಿದೆ. ಎಂಟು ವರ್ಷದ ಬಾಲಕ ಅನುಭವ್ ಅಪಹರಣ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ಕೋಲಾರದಲ್ಲಿ ಪೋಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಮಂಡ್ಯದ ಗಂಗಾಧರ್, ಎಲೆಕ್ಟ್ರಾನಿಕ್ ಸಿಟಿಯ ಕೋಮಲ್ ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿದೆ. ಬಂಧಿತರನ್ನು ಇಂದು ಬೆಳಿಗ್ಗೆ ಕೋಲಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂರ್ನಹೊಸಳ್ಳಿ ಗ್ರಾಮದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು ಗ್ರಾಮದ ಮಂಜುನಾಥ್ ಎಂಬುವರ ಮನೆಯಲ್ಲಿದ್ದ ಬಾಲಕನನ್ನು ರಕ್ಷಿಸಲಾಗಿದೆ.

ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಸಹಾಯದೊಡನೆ ಮಂಗಳೂರು ಪೋಲೀಸ್ ವಿಶೇಷ ತಂಡ ಈ ಪ್ರಕರಣವನ್ನು ಬೇಧಿಸಿದೆ.

ಘಟನೆ ವಿವರ

ಕಳೆದ ಗುರುವಾರ ಸಂಜೆ ಮನೆಯ ಹೊರಗೆ ರಸ್ತೆ ಬದಿ ಆಡುತ್ತಿದ್ದ ಸ್ಥಳೀಯ ಉದ್ಯಮಿಯ ಪುತ್ರ, ಬಾಲಕ ಅನುಭವ್ ನನ್ನು ಇಂಡಿಕಾ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಅಪಹರಿಸಿದ್ದರು. ಅವರು ಬಾ;ಅಕನ ಪೋಷಕರಿಗೆ ಕರೆ ಮಾಡಿ 17ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಮೊತ್ತವನ್ನು ನಗದು ಅಥವಾ ಚೆಕ್ ಮೂಲಕ ನೀಡದೆ ಬಿಟ್ ಕಾಯಿನ್ ಮೂಲಕ ನೀಡುವಂತೆ ಅಪಹರಣಕಾರರು ಒತ್ತಾಯಿಸಿದ್ದರು.

ಈ ಕುರಿತು ಬಾಲಕನ ಅಜ್ಜ ಎ ಕೆ ಶಿವನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಬಾಲಕನ ಅಪಹರಣ ಪ್ರಕರಣ ಉಜಿರೆ ಮಾತ್ರವಲ್ಲ ದಕ್ಷಿಣ ಕನ್ನಡ ಹಾಗೂ ರಾಜ್ಯಾದ್ಯಂತ ವ್ಯಾಪಕ ಆತಂಕಕ್ಕೆ ಕಾರಣವಾಗಿತ್ತು.

error: Content is protected !! Not allowed copy content from janadhvani.com