janadhvani

Kannada Online News Paper

ಜೀಲಾನಿ ದಿನ ಹಾಗೂ ಸಮಸ್ತದ ಅಗಲಿದ ಚೇತನಗಳ ಅನುಸ್ಮರಣಾ ಸಮಾರಂಭ

SIC ಸೌದಿ ಅರೇಬಿಯಾ ಕೊಡಗು ವತಿಯಿಂದ ಎಸ್.ಕೆ .ಎಸ್ ಎಸ್.ಎಫ್ ಜಿಸಿಸಿ ಕೊಡಗು ಸಮಿತಿಯ ಸಹಯೋಗದೊಂದಿಗೆ ಜೀಲಾನಿ ದಿನ ಹಾಗೂ ಸಮಸ್ತದ ಅಗಲಿದ ಚೇತನಗಳ ಅನುಸ್ಮರಣಾ ಸಮಾರಂಭ ಸೌದಿ ಅರೇಬಿಯಾದ ರಿಯಾದ್ ಅಲ್ ಮಾಸ್ ಹೋಟೆಲಿನಲ್ಲಿ ನಡೆಯಿತು.

ಮುಖ್ಯ ಭಾಷಣಗಾರರಾಗಿ ಉಸ್ತಾದ್ ಕೋಯ ವಾಫಿ ವಯನಾಡ್ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಸ್.ಎಫ್ ಸೌದಿ ಅರೇಬಿಯಾ ಕೊಡಗು ಅಧ್ಯಕ್ಷರಾದ ಝೈನುದ್ದೀನ್ ಉಸ್ತಾದ್ ವಹಿಸಿದ್ದರು. SIC ರಿಯಾದ್ ಸಮಿತಿಯ ಅಧ್ಯಕ್ಷರಾದ ಸೈದಲವಿ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

SIC ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಜೊತೆ ಕಾರ್ಯದರ್ಶಿ ಅಸ್ಲಮ್ ಉಸ್ತಾದ್, ಸಂಘಟನಾ ಕಾರ್ಯದರ್ಶಿ ಝುಬೈರ್ ಹುದವಿ, SIC ಸೌದಿ ಉಪಾಧ್ಯಕ್ಷರಾದ ಅಬುಬಕರ್ ಫೈಝಿ ವೆಳ್ಳಿ ಲ,SIC ಕರ್ನಾಟಕ ಅಧ್ಯಕ್ಷರಾದ ಬಶೀರ್ ಅರಂಬೂರ್, ಸಿದ್ದೀಕ್ ಬಾಖವಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಹಿತ ನುಡಿಗಳನ್ನಾಡಿದರು.

ಅಬ್ದುಲ್ ಗಫೂರ್ ರಿಯಾದ್ ಕಾರ್ಯಕ್ರಮದಲ್ಲಿ ಗೀತೆಯನ್ನು ಹಾಡಿ ಎಲ್ಲರ ಗಮನ ಸೆಳೆದರು.
ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಹಾಗೂ SIC ಸೌದಿ ಅರೇಬಿಯಾ ಕೊಡಗು ಸಮಿತಿಯ ಹಲವು ನಾಯಕರುಗಳು ಹಾಗೂ ಸದಸ್ಯರುಗಳು ಝೂಮ್ ಆನ್ಲೈನ್ನಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ SIC ಸಮಿತಿಯ ನೇತಾರರು ಹಾಗೂ ಎಸ್.ಕೆ.ಎಸ್.ಎಸ್.ಎಫ್ ಸೌದಿ ಅರೇಬಿಯಾ ಕೊಡಗು ಸದಸ್ಯರುಗಳು ಭಾಗವಹಿಸಿದ್ದರು.
ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಕೋಶಾಧಿಕಾರಿ ಅಬ್ದುಲ್ ರಝಾಕ್ ಫೈಝಿ ಸ್ವಾಗತಿಸಿ, ಅಶ್ರಫ್ ಎಮ್ಮೆಮಾಡು ವಂದಿಸಿದರು.

error: Content is protected !! Not allowed copy content from janadhvani.com