ರಿಯಾದ್: ಮಸೀದಿಗಳಲ್ಲಿ ಸಂಪೂರ್ಣ ಸ್ಥಳೀಯ ಇಮಾಮ್‌ಗಳನ್ನು ನೇಮಿಸಲು ಸೌದಿ ಅರೇಬಿಯಾ ತಯಾರಿ ನಡೆಸುತ್ತಿದೆ. ಶಾಪಿಂಗ್ ಮಾಲ್‌ಗಳಲ್ಲಿನ ಮಸೀದಿಗಳಲ್ಲೂ ಇದೇ ನಿಯಮವನ್ನು ಜಾರಿಗೊಳಿಸಲಾಗುವುದು.ಈ ಕ್ರಮವು ಮಸೀದಿಯಲ್ಲಿನ ಉಪನ್ಯಾಸ ಮತ್ತು ನೋಟಿಸ್ ವಿತರಣೆಯನ್ನು ನಿಯಂತ್ರಿಸಿ ಭದ್ರತೆಯನ್ನು ಕಾಪಾಡುವ ಭಾಗವಾಗಿದೆ.
ಸೌದಿಯ ವಿವಿಧ ಭಾಗಗಳಲ್ಲಿನ ಹೆಚ್ಚಿನ ಮಸೀದಿಗಳಲ್ಲಿ ಸ್ಥಳೀಯ ಇಮಾಮರಿದ್ದಾರೆ. ಆದರೆ ಕೆಲವು ಶಾಪಿಂಗ್ ಮಾಲ್‌ಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದ ಮಸೀದಿಗಳಲ್ಲಿ ಇಮಾಮ್‌ಗಳಾಗಿ ವಿದೇಶಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಭದ್ರತೆಯ ಉದ್ದೇಶದಿಂದ ಸ್ಥಳೀಯರನ್ನು ನೇಮಕ ಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಮತ್ತು ಪುರಸಭೆಗಳ ಸಚಿವಾಲಯವು ಯೋಜನೆಯನ್ನು ಸಿದ್ಧಪಡಿಸುತ್ತದೆ.
ಪ್ರಸ್ತುತ , ಪ್ರತಿ ಶುಕ್ರವಾರ ಮಸೀದಿಗಳಲ್ಲಿ ನಡೆಯುವ ಖುತುಬಗಳ ವಿಷಯವನ್ನು ಏಕೀಕರಿಸಲಾಗಿತ್ತು. ಇಮಾಮ್‌ಗಳು ಈ ವಿಷಯಗಳ ಬಗ್ಗೆ ಮಾತ್ರ ಬೋಧನೆ ನೀಡಬೇಕು. ಇದರ ಮೇಲ್ವಿಚಾರಣೆಗಾಗಿ ರೆಕಾರ್ಡಿಂಗ್ ವ್ಯವಸ್ಥೆಯೂ ಇದೆ. ಉಗ್ರ ಸ್ವರೂಪದ ಪ್ರವಚನ ಸಂಭವಿಸದಂತೆ ತಡೆಯಲು ಇಂತಹ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಪವಿತ್ರ ಖುರ್ಆನ್ ಹೊರತುಪಡಿಸಿ ಇತರ ಕೃತಿಗಳನ್ನು ದೇಶಾದ್ಯಂತ ಮಸೀದಿಗಳಲ್ಲಿ ಇಡುವುದನ್ನು ನಿಯಂತ್ರಿಸಲಾಗಿದೆ. ರಾಷ್ಟ್ರೀಯ ಭದ್ರತೆಯ ಭಾಗವಾಗಿ, ಶುಕ್ರವಾರದ ಖುತುಬ ನಂತರದ ವಿವಿಧ ಉಪನ್ಯಾಸ ಮತ್ತು ನೋಟಿಸ್ ವಿತರಣೆಯನ್ನು ನಿಯಂತ್ರಿಸಲಾಗಿದೆ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ