ಮುಈನುಸುನ್ನಾ ವಿದ್ಯಾಸಂಸ್ಥೆ ಹಾವೇರಿ ಯಲ್ಲಿ ಮುಈನುಸುನ್ನಾ ಓವರ್ ಸೀಸ್ ಕೌನ್ಸಿಲ್ ಸಹಭಾಗಿತ್ವದಲ್ಲಿ,ಇದೇ ಬರುವ ಡಿ13ರಂದು ನಡೆಯಲಿರುವ ಗೌಸುಲ್ ವರ ಕಾನ್ಫರೆನ್ಸ್ ನಲ್ಲಿ
ಅಂತಾರಾಷ್ಟ್ರೀಯ ಖ್ಯಾತಿಯ ಭಾಷಣಗಾರ ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡಲಿದ್ದಾರೆ.
ಮುಈನುಸುನ್ನಾ ವಿದ್ಯಾಸಂಸ್ಥೆಯ ಅಧ್ಯಕ್ಷ ರಾದ ಸಯ್ಯಿದ್ ಶಹೀರ್ ಅಲ್‌ಬುಖಾರಿ ಪೋಸೋಟ್ ಇವರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಈನುಸುನ್ನಾ ಓವರ್ಸಿಸ್ ಕೌನ್ಸಿಲ್ ಅಕ್ಷರಾದ ಸಯ್ಯಿದ್ ಮುಹಮ್ಮದ್ ಉಚ್ಚಿಲ್ ತಂಙಳ್ ಅಧ್ಯಕ್ಷ ತೆ ವಹಿಸಲಿದ್ದಾರೆ.
ಮುಈನುಸುನ್ನಾ ಪ್ರಧಾನ ಕಾರ್ಯದರ್ಶಿ ಕೆ.ಎಂ ಮುಸ್ತಫಾ ನಈಮಿ ಪ್ರಾಸ್ತಾವಿಕ ಭಾಷಣ ನಡೆಸಲಿದ್ದು,ಕೆ.ಸಿಎಫ್ INC ಅಧ್ಯಕ್ಷ ರಾದ ಅಲ್ ಹಾಜ್ ಶೇಖ್ ಬಾವ ಅಬುಧಾಬಿ ಉದ್ಘಾಟಿಸಲಿದ್ದಾರೆ.
ಸಯ್ಯಿದ್ ಮುನೀರ್ ಅಲ್ಅಹ್ದಲ್, ಸಯ್ಯಿದ್ ತ್ವಾಹ ಹಾಮಿದ್ ರಿಫಾಯಿ ,ಕೆ.ಎಂ ಅಬೂಬಕ್ಕರ್ ಸಿದ್ದೀಕ್ , ಸಯ್ಯಿದ್ ಅತ್ಹರ್ ಸಖಾಫಿ ಸವಣೂರು ಭಾಷಣ ಮಾಡಲಿದ್ದಾರೆ. ಮುಈನುಸುನ್ನಾ ಸೌದಿ, ಯುಎಇ, ಒಮಾನ್, ಬಹ್ರೈನ್, ಕುವೈತ್ , ಕತ್ತರ್ ಸೇರಿದ ವಿವಿಧ ಘಟಕಗಳ ನಾಯಕರು ಹಾಗು ಹಿತೈಷಿಗಳು ಭಾಗವಹಿಸಲಿದ್ದು ಆನ್ಲೈನ್ ಪ್ರಸಾರ ನಡೆಯಲಿದೆ ಎಂದು ಮುಈನುಸುನ್ನಾ ಓವರ್ಸಿಸ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಕಮಾಲುದ್ದೀನ್ ಅಂಬ್ಬಮೊಗರ್ ಶಾರ್ಜಾ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದರು.