janadhvani

Kannada Online News Paper

ತ್ವಾಯಿಫ್ ಫೈಟರ್ಸ್ ಸ್ಪೋರ್ಟ್ಸ್ ಕ್ಲಬ್ ಗೆ ನೂತನ ಪದಾಧಿಕಾರಿಗಳ ಆಯ್ಕೆ

ಸೌದಿ ಅರೇಬಿಯಾದ ತ್ವಾಯಿಫ್ ನಲ್ಲಿ ಸುಮಾರು ಏಳು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ತ್ವಾಯಿಫ್ ಫೈಟರ್ಸ್ ಸ್ಪೋರ್ಟ್ಸ್ ಕ್ಲಬ್ ಇದಕ್ಕೆ 2020 – 21 ರ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಈ ಸ್ಪೋರ್ಟ್ಸ್ ಕ್ಲಬ್ ನಲ್ಲಿ‌ ಕೇವಲ ಕ್ರೀಡೆ ಮಾತ್ರವಲ್ಲದೇ ದೇಶ ವಿದೇಶದಲ್ಲಿ ಕಷ್ಟಪಡುತ್ತಿರುವವರಿಗೆ ಸಹಾಯವನ್ನೂ ನೀಡಲಾಗುತ್ತಿದೆ. ಯಾವುದೇ ಪದಾಧಿಕಾರಿಗಳಿಲ್ಲದೇ ಕಾರ್ಯಾಚರಿಸುತ್ತಿದ್ದ ಕ್ಲಬ್ ಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕು ಎಂದು ಸದಸ್ಯರುಗಳ ಕೋರಿಕೆಯ ಮೇರೆಗೆ ಮೊತ್ತ ಮೊದಲಾಗಿ ಈ ವರ್ಷ ನೂತನವಾಗಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

2020 – 21ರ ಸಾಲಿನ ನೂತನ ಪದಾಧಿಕಾರಿಗಳು:-
ವ್ಯವಸ್ಥಾಪಕರು: ಅಲ್ತಾಫ್ ಗುರುಪುರ
ನಾಯಕ: ಸಲೀಂ ಪಲ್ಲಕುದಲ್
ಉಪ ನಾಯಕ: ಸಲೀಂ ಸೂರಿಂಜೆ
ತರಬೇತುದಾರ: ರಶೀದ್ ವಲಚ್ಚಿಲ್
ಕನ್ವೀನರ್: ರಝ್ಝಾಕ್ ಕೊಡಂಗಾಯಿ
ಐಕನ್ ಪ್ಲೇಯರ್: ನೌಫಲ್ ಬೆಂಗರೆ
ಕಾರ್ಯಕಾರಿ ಸಮಿತಿ ಸದಸ್ಯರು:-
ಅಝ್ವೀರ್ ಬಡಕಬೈಲು
ಅಚ್ಚು ಬಂದಿಯೋಡ್
ರಿಯಾಝ್ ಉಳ್ಳಾಲ
ನಿಶಾದ್ ಕುಲಾಯಿ
ಫವಾಝ್ ಬಾಯಾರ್

error: Content is protected !! Not allowed copy content from janadhvani.com