ದೋಹಾ: ಕತಾರ್ ಏರ್ವೇಸ್ ಹೊಸ ಟಿಕೆಟ್ ದರವನ್ನು ಪ್ರಕಟಿಸಿದೆ. ಎಕಾನಮಿ ಮತ್ತು ಬಿಸಿನೆಸ್ ಕ್ಲಾಸ್‌ಗಳಿಗೆ ಆರು ವಿಭಿನ್ನ ದರಗಳನ್ನು ಪರಿಚಯಿಸಲಾಗಿದೆ. ಹೆಚ್ಚು ಆನಂದದಾಯಕ ಮತ್ತು ಅನುಕೂಲಕರ ವಿಮಾನ ಪ್ರಯಾಣವನ್ನು ಒದಗಿಸುವ ಉದ್ದೇಶದಿಂದ ಕತಾರ್ ಏರ್ವೇಸ್ ಹೊಸ ಟಿಕೆಟ್ ದರವನ್ನು ಘೋಷಿಸಿದೆ.
ಬಿಸಿನೆಸ್ ಕ್ಲಾಸ್‌ನಲ್ಲಿ ಕ್ಲಾಸಿಕ್, ಕಂಫರ್ಟ್ ಮತ್ತು ಎಲೈಟ್ ಎಂಬ ಮೂರು ವಿಧದ ದರಗಳು ಹಾಗೂ ಎಕಾನಮಿ ಕ್ಲಾಸ್‌ನಲ್ಲಿ ಕ್ಲಾಸಿಕ್, ಕನ್ವೀನಿಯನ್ಸ್ ಮತ್ತು ಕಂಫರ್ಟ್ ಎಂಬ ಮೂರು ವಿಧ ಟಿಕೆಟ್ ದರಗಳಿವೆ.
ಪ್ರತಿ ಟಿಕೆಟ್‌ನಲ್ಲಿ ವಿಭಿನ್ನ ಸೇವೆಗಳು ಮತ್ತು ಸೌಲಭ್ಯಗಳಿವೆ. ಎಕಾನಮಿ ಯಲ್ಲಿ ಕಂಫರ್ಟ್ ಟಿಕೆಟ್ ಕಾಯ್ದಿರಿಸುವವರಿಗೆ ತಮ್ಮ ಇಚ್ಛೆಯಂತೆ ಆಸನವನ್ನು ಆಯ್ಕೆ ಮಾಡಲು ಅವಕಾಶವಿದೆ. ಬಿಸಿನೆಸ್ ಎಲೈಟ್ ಫ್ಯಾಮಿಲಿ ಟಿಕೆಟ್ ಆಗಿದ್ದರೆ, ಪ್ರಯಾಣದ ದಿನಾಂಕವನ್ನು ಅನುಕೂಲವಾಗುವಂತೆ ಬದಲಾಯಿಸಬಹುದಾಗಿದೆ. ಈ ಟಿಕೆಟ್ ಹೊಂದಿರುವವರಿಗೆ ಯಾವುದೇ ಶುಲ್ಕವಿಲ್ಲದೆ ತಮ್ಮ ಹಣವನ್ನು ಮರಳಿ ಪಡೆಯಲು ಅವಕಾಶವಿದೆ.ಪ್ರತಿ ಟಿಕೆಟ್‌ನಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಕತಾರ್ ಏರ್‌ವೇಸ್ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ಎಕಾನಮಿ ವರ್ಗದಲ್ಲಿ ತಾವು ಕಾಯ್ದಿರಿಸಿದ ಶುಲ್ಕದಿಂದ ಹೆಚ್ಚಿನ ಶುಲ್ಕಕ್ಕೆ ಬದಲಾಯಿಸಿದಾಗ ಐದು ಕಿಲೋ ಹೆಚ್ಚುವರಿ ಲಗೇಜ್ ಉಚಿತವಾಗಿ ಪಡೆಯುತ್ತೀರಿ. ನೇರವಾಗಿ ಬುಕ್ ಮಾಡುವವರಿಗೆ ವಿಶೇಷ ಪ್ರಯೋಜನಗಳನ್ನು ಸಹ ಘೋಷಿಸಲಾಗಿದೆ. ಕತಾರ್ ಡ್ಯೂಟಿ ಫ್ರೀ ಮಳಿಗೆಗಳಲ್ಲಿ 40% ರಿಯಾಯಿತಿ ಲಭಿಸಲಿದೆ. ಹೊಸ ದರಗಳು ಸೋಮವಾರದಿಂದಲೇ ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ