janadhvani

Kannada Online News Paper

ಶಾರ್ಜಾ: ಪ್ರವಾದಿ ಹಾದಿಯಲ್ಲಿ ಗೆಲುವಿದೆ ಎಂಬ ಘೋಷವಾಕ್ಯದಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸುವ ಮೀಲಾದ್ ಸಮಾವೇಶದ ಭಾಗವಾಗಿ ಕೆಸಿಎಫ್ ಶಾರ್ಜಾ ವತಿಯಿಂದ ಅಕ್ಟೋಬರ್ 30ಕ್ಕೆ ಮೀಲಾದುನ್ನೆಬಿ ಕಾರ್ಯಕ್ರಮ ನಡೆಯಲಿದ್ದು, ಇದರ ಸ್ವಾಗತ ಸಮಿತಿಗೆ ಆನ್‍ಲೈನ್ ಮೂಲಕ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಝೋನ್ ಅಧ್ಯಕ್ಷರಾದ ಅಬುಸ್ವಾಲಿಹ್ ಸಖಾಫಿಯವರ ದುವಾಶೀರ್ವಚನ ಹಾಗೂ ಅಧ್ಯಕ್ಷತೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ರಜಬ್ ಮುಹಮ್ಮದ್ ಸ್ವಾಗತ ಭಾಷಣ ಮಾಡಿದರು. ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷ ಅಝೀಝ್ ಸಖಾಫಿ ಕೊಂಡಂಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬುಸ್ವಾಲಿಹ್ ಸಖಾಫಿಯವರ ಅಧ್ಯಕ್ಷ ಭಾಷಣದ ಬಳಿಕ 2020ರ ಮೀಲಾದ್ ಸ್ವಾಗತ ಸಮಿತಿಗೆ ಈ ಕೆಳಗಿನಂತೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಅಧ್ಯಕ್ಷರು: ಝೈನುದ್ದೀನ್ ಹಾಜಿ ಬೆಳ್ಳಾರೆ
ಪ್ರಧಾನ ಕಾರ್ಯದರ್ಶಿ: ಯು.ಟಿ.ನೌಶಾದ್
ಕೋಶಾಧಿಕಾರಿ: ಅಬ್ದುಲ್ ರಝಾಕ್ ಹಾಜಿ ಜಲ್ಲಿ

ಕಾರ್ಯಕ್ರಮ ಸಂಘಟನಾ ಸಮಿತಿ
ಅಧ್ಯಕ್ಷರು: ಇಬ್ರಾಹೀಂ ಸಖಾಫಿ ಕೆದುಂಬಾಡಿ
ಸಂಚಾಲಕರು: ಅಬ್ದುಲ್ ಕರೀಂ ಮುಸ್ಲಿಯಾರ್

ಹಣಕಾಸು ಸಮಿತಿ
ಅಧ್ಯಕ್ಷರು: ಉಸ್ಮಾನ್ ಹಾಜಿ ನಾಪೊಕ್ಲು
ಸಂಚಾಲಕರು: ರಫೀಕ್ ಮುಸ್ಲಿಯಾರ್ ತೆಕ್ಕಾರು
ಉಪಸಂಚಾಲಕರು: ಆದಂ ಮುಸ್ಲಿಯಾರ್, ಅಬ್ದುರ್ರಝಾಕ್ ಹುಮೈದಿ, ಅಬ್ದುರ್ರಶೀದ್ ಮದನಿ, ಅಶ್ರಫ್ ಸತ್ತಿಕಲ್, ಇಸ್ಹಾಕ್ ಕೂರ್ನಡ್ಕ, ಇಕ್ಬಾಲ್ ಮಂಜನಾಡಿ

ಉಪಹಾರ(ಅನ್ನದಾನ) ಸಮಿತಿ
ಅಧ್ಯಕ್ಷರು: ಬಿ.ಟಿ.ಅಶ್ರಫ್ ಲತೀಫಿ
ಸಂಚಾಲಕರು: ಅಸ್ಗರ್ ಅಲಿ

ಪ್ರಕಾಶನ ಸಮಿತಿ
ಅಧ್ಯಕ್ಷರು: ಶೌಕತ್ ಅಲಿ
ಸಂಚಾಲಕರು : ಶಹೀರ್ ಕರಾಯ

ಮಾಧ್ಯಮ ಸಮಿತಿ
ಅಧ್ಯಕ್ಷರು: ತಾಜುದ್ದೀನ್ ಅಮ್ಮುಂಜೆ
ಸಂಚಾಲಕರು: ಸಿರಾಜುದ್ದೀನ್ ಅರಿಯಡ್ಕ

ಅಲ್ಲದೆ ಸಲಹಾ ಸಮಿತಿಗೆ ಅಬುಸ್ವಾಲಿಹ್ ಸಖಾಫಿ, ರಜಬ್ ಮುಹಮ್ಮದ್, ಅಝೀಝ್ ಸಖಾಫಿ ಕೊಂಡಂಗೇರಿ, ಶಾದುಲಿ ಬೆಳಂದೂರು ಇವರನ್ನು ಮೇಲ್ವಿಚಾರಕರಾಗಿ ಆಯ್ಕೆ ಮಾಡಲಾಯಿತು.
ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಸರಾ ಅಭಿನಂದನಾ ಭಾಷಣ ಮಾಡಿದರು. ನೂತನ ಅಧ್ಯಕ್ಷ ಝೈನುದ್ದೀನ್ ಹಾಜಿ ಹಾಗೂ ಪ್ರ.ಕಾರ್ಯದರ್ಶಿ ಯು.ಟಿ.ನೌಶಾದ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಬಿ.ಟಿ.ಅಶ್ರಫ್ ಲತೀಫಿ ಧನ್ಯವಾದ ಸಲ್ಲಿಸಿದರು. ಮೂರು ಸ್ವಲಾತ್‍ನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

error: Content is protected !!
%d bloggers like this: