janadhvani

Kannada Online News Paper

ಕುಂದಾಪುರ,ಕೋಡಿ: ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ಅನುಸ್ಮರಣಾ ಸಂಗಮ

ಕುಂದಾಪುರ : SYS ಕುಂದಾಪುರ ಸೆಂಟರ್ ಮತ್ತು SYS ಇಸಾಬ ಹಾಗೂ SSF ಕೋಡಿ ಸೆಕ್ಟರ್ ವತಿಯಿಂದ ಮುಹ್ಯುದ್ದೀನ್ ಜುಮಾ ಮಸ್ಜಿದ್ ಅಧೀನದ ಹಯಾತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ಬೃಹತ್ ಅನುಸ್ಮರಣಾ ಸಂಗಮವು ಅ.4 ರಂದು ನಡೆಯಿತು.

ಉಡುಪಿ ಚಿಕ್ಕಮಗಳೂರು ಹಾಸನ ಜಿಲ್ಲೆಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮೊಹಲ್ಲಾಗಳ ಖಾಝಿಯೂ ಉನ್ನತ ವಿದ್ವಾಂಸರೂ ಶಿಕ್ಷಣ ಪ್ರೇಮಿಯೂ ಹರಿಕಾರರೂ ಆಗಿದ್ದ ಬೇಕಲ್ ಉಸ್ತಾದರ ಅಗಲುವಿಕೆಯು ದಕ್ಷಿಣ ಭಾರತದ ಮುಸಲ್ಮಾನರಿಗೆ ತುಂಬಲಾರದ ನಷ್ಟ ಎಂದು ಮುಖ್ಯಪ್ರಭಾಷಣ ನಡೆಸಿದ ಅಶ್ರಫ್ ಸಖಾಫಿ ಕನ್ನಂಗಾರ್ ಸ್ಮರಿಸಿದರು.

ಕಾರ್ಯಕ್ರಮವನ್ನು ಯೂಸುಫ್ ಸಖಾಫಿ ಉಸ್ತಾದ್ ಉದ್ಘಾಟಿಸಿದರು. ಅಬ್ದುರ್ರಹ್ಮಾನ್ ಸಖಾಫಿ ಎಂ ಕೋಡಿ ಅಧ್ಯಕ್ಷತೆ ವಹಿಸಿದರು, ಸಿದ್ದೀಖ್ ಸಖಾಫಿ ಹಂಗಳೂರು, ಹುಸೈನ್ ಕೆ ಎಚ್ ಪಡುಕೆರೆ. ಜಿ ಎಂ ಮುಸ್ತಫಾಕ, ಇಸ್ಮಾಯಿಲ್ ಸಖಾಫಿ ಕೋಟೆ ಕೋಡಿ,. ಮೂದಲಾದ ಉಲಮಾ ಉಮರಾ ನೇತಾರರು ಉಪಸ್ಥಿತರಿದ್ದರು.ಕುಂದಾಪುರ ತಾಲೂಕು. ಮಟ್ಟದ ಹಲವು ಮೂಹಲ್ಲಾಗಳ ಅಧ್ಯಕ್ಷರು ಕಾರ್ಯಕಾರಿ ಸದಸ್ಯರು ಹಾಗೂ ರೇಂಜ್ ಮದ್ರಸಾ ಅಧ್ಯಾಪಕರು ಧರ್ಮ ಗುರುಗಳು ಉಪಸ್ಥಿತರಿದ್ದರು. ಕೊನೆಗೆ ಅಮೀರ್ ಖಾನ್ ಅಹ್ಸನಿ ಧನ್ಯವಾದ ಅರ್ಪಿಸಿದರು.

error: Content is protected !! Not allowed copy content from janadhvani.com