janadhvani

Kannada Online News Paper

ಬೆಳಂದೂರು: SSF ದ್ವಜ ದಿನ ಪ್ರಯುಕ್ತ ಉಚಿತ ಆಯುಷ್ಮಾನ್”ಕಾರ್ಡ್ ಶಿಬಿರ

ಕಡಬ: ತಾಲೂಕಿನ ಬೆಳಂದೂರು ಪಲ್ಲತ್ತಾರು SSF,SYS,KCF, ಹಾಗೂ ಪಲ್ಲತ್ತಾರು ಪ್ರವಾಸಿ ವಾಟ್ಸಾಪ್ ಗ್ರೂಪ್ ಸಹಭಾಗಿತ್ವದಲ್ಲಿ ಭಾರತ ಸರಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಉಚಿತ ಆಯುಷ್ಮಾನ್ ಕಾರ್ಡ್ ಶಿಬಿರ ಮತ್ತು ಕರ್ನಾಟಕ ರಾಜ್ಯ SSF ದ್ವಜ ದಿನ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿ ನೆರವೇರಿತು.ದಿನಾಂಕ 19,09,2020 ರಂದು ಪಲ್ಲತ್ತಾರು ಹಮೀದ್ ನಿವಾಸದಲ್ಲಿಬೆಳಂದೂರು ಪಲ್ಲತ್ತಾರು MJM ಅದ್ಯಕ್ಷರಾದ ಇಬ್ರಾಹಿಂ ಹಾಜಿ ಕೊಡಂಕಿರಿ ಯವರ ಘನ ಅದ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಪಲ್ಲತ್ತಾರು MJM ಬೆಳಂದೂರು ಖತೀಬ್ ಉಸ್ತಾದರಾದ ಮುಸ್ತಾಖ್ ಕಾಮಿಲ್ ಸಖಾಫಿ ದುಆ ನಡೆಸಿ ಆಶಂಸ ಭಾಷಣ ಮಾಡಿದರು.ಕಾರ್ಯಕ್ರಮವನ್ನು ಬೆಳಂದೂರು ಬ್ರಾಂಚ್ SYS ಪ್ರಧಾನ ಕಾರ್ಯದರ್ಶಿ ಯೂಸುಫ್ ಸಖಾಫಿ ದೇವಸ್ಯ ಸ್ವಾಗತಿಸಿದರು, ನಂತರ SSF 31ನೇಯ ದ್ವಜ ದಿನದ ಅಂಗವಾಗಿ SSF ಬೆಳಂದೂರು ಶಾಖಾ ಅದ್ಯಕ್ಷರಾದ ಇಬ್ರಾಹಿಂ ದಫ್ ದ್ವಜಾರೋಹಣಗೈದರು.ನಂತರ ಜಾತಿ, ಧರ್ಮ, ಭೇದವಿಲ್ಲದೆ 170 ಕ್ಕೂ ಹೆಚ್ಚು ಜನರು ಉಚಿತ ಆಯುಷ್ಮಾನ್ ಕಾರ್ಡ್ ಶಿಬಿರದಲ್ಲಿ ಪಾಲ್ಗೊಂಡರು.ವೇದಿಕೆಯಲ್ಲಿ ಸಯ್ಯಿದ್ ಶಮ್ಮಾಶ್ ತಂಙಳ್, ಪಳ್ತತ್ತಾರು ಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸಿದ್ದೀಕ್ ಪಳ್ತತ್ತಾರು, ಜಮಾಅತ್ ಕಾರ್ಯದರ್ಶಿ ಯೂಸುಫ್ ಬನಾರಿ, SSF ಕೂರತ್ ಸೆಕ್ಟರ್ ಬ್ಲಡ್ ಸೈಬೋ ಉಸ್ತುವಾರಿ ರಾಷಿದ್ ದೇವರ ಗುಡ್ಡೆ, ಮುಂತಾದ ಹಲವಾರು ಗಣ್ಯ ವ್ಯಕ್ತಿಗಳು ಉಲಮಾ ಉಮರಾ ಮುಖಂಡರು ಉಪಸ್ಥಿತರಿದ್ದರು.ಜಮಾಅತಿನ ಸರ್ವತೋಮುಖ ಏಳಿಗೆಗಾಗಿ ಎಲ್ಲಾ ಸಂಘಟನೆ ನಾಯಕರು, ಸದಸ್ಯರು, ಹಿತೈಷಿಗಳು ಪ್ರಾಮಾಣಿಕವಾಗಿ ಒಗ್ಗಟ್ಟಿನಿಂದ ತಮ್ಮ ಕೈಲಾದ ಆರ್ಥಿಕ ನೆರವು ಒದಗಿಸುವ ಮೂಲಕ ಅಸಾದ್ಯವಾದದ್ದು ಏನು ಇಲ್ಲ ಎಂಬುದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ, ಈಗಾಗಲೇ ಅನೇಕ ರೀತಿಯ ಜನಪರ ಕಾರ್ಯಗಳಲ್ಲಿ ಸಂಘಟನೆಯು ತನ್ನ ಅಮೂಲ್ಯ ಪಾಲನ್ನು ನಾಡಿಗಾಗಿ ವ್ಯಯಿಸಿದೆ. ಮೊಹಲ್ಲಾದ ಅಭಿವೃದ್ಧಿಯ ಜೊತೆಗೆ ಜಮಾಅತಿಗೆ ಒಳಪಟ್ಟ ಬಡವರು, ನಿರ್ಗತಿಕರು, ಅಸಹಾಯಕರು, ಹಾಗೂ ವಿಧವೆಯರ ಕಲ್ಯಾಣಕ್ಕಾಗಿ ಸಂಘಟನೆ ಸದಾ ಬದ್ಧವಾಗಿದೆ, ಅಲ್ಲದೆ ವಿದೇಶದಲ್ಲಿ ತನ್ನ ಹೊಟ್ಟೆಪಾಡಿಗಾಗಿ ಬಿಡುವಿಲ್ಲದೆ ದುಡಿಯುತ್ತಿರುವ ಅನಿವಾಸಿ ಮಿತ್ರರು ತಾಯ್ನಾಡಿನ ನೋವು ನಲಿವುಗಳಿಗಾಗಿ ಸ್ಪಂದಿಸಲು ನಮ್ಮೊಂದಿಗೆ ಕೈ ಜೋಡಿಸಿದ್ದು ನಿಜಕ್ಕೂ ಶ್ಲಾಘನೀಯ, ಸಂಘಟನೆಯ ಬೆಳವಣಿಗೆಯ ಹಾದಿಯಲ್ಲಿ ನಮ್ಮೊಂದಿಗೆ, ತನು,ಮನ,ಧನಗಳಿಂದ ಸಹಕರಿಸಿ ಬೆನ್ನಲುಬಾಗಿ ನಿಂತ ಎಲ್ಲಾ ನಾಯಕರು, ಕಾರ್ಯಕರ್ತರು, ಆರ್ಥಿಕವಾಗಿ ಬೆಂಬಲ ನೀಡಿದ ಸಾರ್ವಜನಿಕ ಭಾಂಧವರು ಸಲಹೆ ಸೂಚನೆ ನೀಡಿದ ಸಮಾಜದ ಹಿರಿಯರು,ಧಾರ್ಮಿಕ ಮಾರ್ಗದರ್ಶನ ನೀಡಿದ ಉಲಮಾ ನೇತಾರರು ಹೀಗೆ ಎಲ್ಲರನ್ನೂ ಸಂಘಟನೆ ಈ ಸಮಯದಲ್ಲಿ ಸ್ಮರಿಸುತ್ತದೆ, ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲಿ ನಮ್ಮೊಂದಿಗೆ ಸಹಕರಿಸಿ ಆತ್ಮಸ್ಥೈರ್ಯ ತುಂಬಿದ ಎಲ್ಲರಿಗೂ ತಕ್ಕ ಪ್ರತಿಫಲ ನೀಡಲಿ ಎಂದು ಅಂತರಾಳದಿಂದ ಪ್ರಾರ್ಥಿಸುತ್ತಿದ್ದೇವೆ.

error: Content is protected !! Not allowed copy content from janadhvani.com