janadhvani

Kannada Online News Paper

ತತ್ವ ಕ್ರಾಂತಿಯ ಹೊಸ ಭಾಷ್ಯ – ಎಸ್ಸೆಸ್ಸೆಫ್ ಯೌವ್ವನದ ಯಶಸ್ಸು, ನಲ್ಮೆಯ ನಾಳೆಗೆ, ನೆಮ್ಮದಿಯ ಬಾಳಿಗೆ ಎಸ್ಸೆಸ್ಸೆಫ್

ಒಳಿತನ್ನು ಭೋದಿಸುವ, ಒಳಿತಿಗೆ ಆಹ್ವಾನಿಸುವ, ಕೆಡುಕನ್ನು ವಿರೋದಿಸುವ ಒಂದು ಸಮೂಹ ನಿಮ್ಮಲ್ಲಿರಲಿ, ಅವರಾಗಿದ್ದಾರೆ ವಿಜಯಶಾಲಿಗಳು :- ಕುರ್ಆನ್

ಹೌದು ಪವಿತ್ರ ಕುರ್ಆನಿನ ಈ ಮಾತನ್ನು ಮೂಲ ಘೋಷಾ ವಾಕ್ಯವನ್ನಾಗಿಟ್ಟು ಕೊಂಡು ಹಲವಿಧ ಭಾಷೆ ವೇಷ, ಸಂಸ್ಕೃತಿಗಳ ಸಂಗಮ ಭೂಮಿಯಾದ ಕರುನಾಡಿನ ನೆಲದಲ್ಲಿ ಕಳೆದ 31 (1989 ) ವರ್ಷಗಳ ಮುಂಚೆ, ಉಲಮಾ ಉಮರಾ ನಾಯಕತ್ವದಲ್ಲಿ ಯುವ ಜನರ ಸ್ಪೂರ್ತಿಯ ಸೆಲೆ, ಧಾರ್ಮಿಕತೆಯ ನೆಲೆ SSF ಗೆ ಚಾಲನೆ ನೀಡಲಾಯಿತು.
SSF ತನ್ನ 31 ವರ್ಷಗಳ ಸುದೀರ್ಘವಾದ ಜೈತ್ರಯಾತ್ರೆಯಲ್ಲಿ ಯುವ ಸಮೂಹವನ್ನು ಒಳಿತಿನೆಡೆಗೆ ಮುನ್ನಡೆಸುತ್ತಾ ಸಾಗಿ ಬಂದಿದೆ.

ಯುವ ಸಮೂಹ ಗಾಂಜಾ, ಮದ್ಯಪಾನ, ಧೂಮಪಾನಕ್ಕೆ ಬಲಿಯಾಗುತ್ತಿರುವ ಅತ್ಯಾಧುನಿಕತೆಯ ಈ ಕಾಲದಲ್ಲಿ ನೈತಿಕ ಜಾಗೃತಿ, ಧಾರ್ಮಿಕ ಕ್ರಾಂತಿ, ಎಂಬ ಸುಂದರ ಸಂದೇಶಗಳನ್ನು ಮುಂದಿಟ್ಟು ಯುವ ಸಮೂಹ ಅನೈತಿಕತೆಯ ಹಾದಿ ಹಿಡಿಯದಂತೆ ಅವರಲ್ಲಿ ನೈತಿಕತೆ ತುಂಬಿ ಧಾರ್ಮಿಕತೆಯ ಚೌಕಟ್ಟಿನಲ್ಲಿ ನೆಲೆ ನಿಲ್ಲುವಂತೆ ಮಾಡುವಲ್ಲಿ SSF ಯಶಸ್ವಿಯಾಗಿದೆ, ಕಾರಣ SSF ಗೆ ನೇತೃತ್ವ ನೀಡುತ್ತಿರುವವರು ತಾಜುಲ್ ಉಲಮಾ ಉಳ್ಳಾಲ ತಂಙಳ್, ಎ.ಪಿ ಉಸ್ತಾದ್, ಸಿ.ಎಂ ವಲಿಯುಲ್ಲಾಹ್, ಅಲಿ ಕುಂಞ ಉಸ್ತಾದ್, ಈಕೆ ಉಸ್ತಾದ್, ಎಂ.ಎ ಉಸ್ತಾದ್, ಕೂರಾ ತಂಙಳ್ ರಂತಹ ಉನ್ನತ ಉಧ್ಧಾಮ ಉಲಮಾ, ಸಾದಾತುಗಳು, ಧೀರ ಧೀಮಂತ, ಸಾತ್ವಿತ ತಾತ್ವಿಕ ಪರಂಪರೆಯ ನಾಯಕತ್ವದಲ್ಲಿ ಪಳಗಿದ SSF ನ ಯುವ ಸಮೂಹ, ಒಮ್ಮೆಯೂ ಅವರ ಮಾತು ತಪ್ಪಿ ನಡೆಯಲಾರರು, ಅನೈತಿಕ, ಅಧಾರ್ಮಿಕತೆಯ ಹಾದಿಯಲ್ಲಿ ಸಾಗಲಾರರು, ಆ ಕಾರಣದಿಂದಲೇ ಕರ್ನಾಟಕ SSF ನ 31 ವರ್ಷಗಳ ಇತಿಹಾಸದಲ್ಲಿ ಒಬ್ಬನೆ ಒಬ್ಬ SSF ನ ಕಾರ್ಯಕರ್ತನನ್ನು ಚಿಕ್ಕ ಕೇಸಿನಲ್ಲಿಯೂ ಬಂಧಿಸಲ್ಪಟಿಲ್ಲ.

ಧಾರ್ಮಿಕತೆಯ ಗಂಧ ಗಾಳಿ ಇಲ್ಲದ ಉತ್ತರ ಕರ್ನಾಟಕದಲ್ಲಿ ಇಹ್ಸಾನ್ ಎಂಬ ವಿಂಗನ್ನು ರಚಿಸಿ ಆ ಪ್ರದೇಶಗಳಲ್ಲಿ ಧಾರ್ಮಿಕತೆಯ ಕುಳಿರ್ಗಾಳಿಯನ್ನು ಬೀಸಿ ಧಾರ್ಮಿಕ ಕ್ರಾಂತಿಯ ಅಲೆಯನ್ನೆಬ್ಬಿಸಿ ಅಲ್ಲಿಯೂ ಧಾರ್ಮಿಕತೆ ಅಚ್ಚ ಹಸಿರಾಗಿ ನಳನಳಿಸುವಂತೆ ಮಾಡಿದ ರಾಜ್ಯದ ಅತೀ ದೊಡ್ಡ ವಿಧ್ಯಾರ್ಥಿ ಸಂಘಟನೆ SSF
ನಾಯಿ ಕೊಡೆಯಂತೆ ಅಲ್ಲಲ್ಲಿ ಮೊಳಕೆಯೊಡೆದ ಸಲಪಿ, ವಹ್ಹಾಬಿಸಂ ಎಂಬ ನವೀನವಾದಗಳನ್ನು ಸಂವಾದ ಮುಖಾ ಮುಖಿ ಸಂಘಟಿಸಿ ಆದರ್ಶ ಎಂಬ ವಜ್ರಾಯುಧದ ಮೂಲಕ ಮೊಳಕೆಯಲ್ಲೆ ಚಿವುಟಿ ಹಾಕಿ ನೈಜ ಅಹ್ಲುಸ್ಸುನ್ನದ ಸತ್ಪಥವನ್ನು ಜನರಿಗೆ ತೋರಿಸಿ ಕೊಟ್ಟಿದೆ,
SSF ಅಂದಿನಿಂದ ಇಂದಿನ ತನಕ ಶಾಂತಿಯನ್ನೇ ಸಾರುತ್ತಾ ಬಂದಿದೆ

ವಿಶ್ವ ಶಾಂತಿಗೆ ಧರ್ಮ ಕ್ರಾಂತಿ ಎಂಬ ಸುಂದರ ಸಂದೇಶವನ್ನಿಟ್ಟು ತನ್ನ ದಶವಾರ್ಷಿಕ ಸಮ್ಮೇಳನವನ್ನು ಆಚರಿಸಿತು, ಒಂದೊಮ್ಮೆ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂಬ ವಾದ ಉಂಟಾದಾಗ ಕಾಶ್ಮೀರ ಭಾರತದ ಭಾಗ, ಅದನ್ನು ಬಿಟ್ಟು ಕೊಡಲಾರೆವು ಎಂದು ಕರ್ನಾಟಕದ ಮುಕ್ಕು ಮೂಲೆಗಳಲ್ಲಿಯೂ ಜಾಗೃತಿ ಜಾಥವನ್ನು ನಡೆಸಿ ದೇಶ ಪ್ರೇಮ ಮೆರೆದ ಸಂಘಟನೆಯಾಗಿದೆ, ಕೇವಲ ಧಾರ್ಮಿಕತೆಗೆ ಮಾತ್ರ ಸೀಮಿತವಾಗದೆ ಸಾಮಾಜಿಕವಾಗಿಯೂ, ನೈತಿಕವಾಗಿಯೂ ಕಾರ್ಯಾಚರಿಸುತ್ತಿದೆ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು, ಎಲ್ಲಾ ಸಮೂಹದ ಜನರಿಗೂ ಸಾಂತ್ವನ ಕಾರ್ಯಗಳನ್ನು ಮಾಡುವಲ್ಲಿ SSF ಮುಂಚೂಣಿಯಲ್ಲಿದೆ.

ಇತ್ತೀಚೆಗೆ ಕೇರಳದಲ್ಲಿ ನಡೆದ ಬೀಕರ ಪ್ರಳಯದಲ್ಲಿ ನಿರಾಶ್ರಿತರಾದ ಜನರಿಗೆ ಕರ್ನಾಟಕ ರಾಜ್ಯ SSF ಹಲವು ವಿಧದಲ್ಲಿ ಸಹಾಯಾಸ್ತವನ್ನು ಚಾಚಿ ಸಾಂತ್ವನವನ್ನು ನೀಡಿದೆ,(ಅದರ ಭಾಗವಾಗಿ ನಿರಾಶ್ರಿತರಾದ ವಿಧ್ಯಾರ್ಥಿಗಳಿಗೆ ಒಂದು ಲಕ್ಷ ಪುಸ್ತಕ ವಿತರಣೆಯನ್ನು ಮಾಡಿದೆ) ಮತ್ತು ಸಕಾಲಿಕವಾಗಿ ಸಮೂಹ, ಸಮುದಾಯಕ್ಕೆ ಸಮಸ್ಯೆಗಳುಂಟಾದಾಗ ಯಾರ ಸಹಾಯವೂ ಇಲ್ಲದೆ ನೀತಿ ನಿಯಮಗಳ ಚೌಕಟ್ಟಿನೊಳಗೆ ಶಾಂತಿಯುತವಾಗಿ ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ…‌‌‌‌
ಸಮಾಜಕ್ಕೆ ಮಹಾ ಮಾರಿಯಾಗಿ ಅಂಟಿ ಕೊಂಡಿರುವ ವರದಕ್ಷಿಣೆ ಎಂಬ ಪಿಡುಗಿನ ವಿರುದ್ದ SSF ಗುಡುಗಿದೆ, ತನ್ನ ಬೆಳ್ಳಿ ಹಬ್ಬದ ಸಂದರ್ಭದಲ್ಲಿ 25 ಸಾವಿರ ಕಾರ್ಯಕರ್ತರು ವರದಕ್ಷಿಣೆ ರಹಿತ ಮದುವೆ ಆಗುವಂತೆ ಪ್ರತೀಜ್ಞೆ ಮಾಡಿಸಿ ಬಡ ಹೆಣ್ಣು ಮಕ್ಕಳನ್ನು ಮದುವೆ ಆಗುವಂತೆ ಪ್ರೋತ್ಸಾಹ ನೀಡಿದೆ.

ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಕಾರ್ಯಕರ್ತರಲ್ಲಿ ಧಾರ್ಮಿಕತೆ ತುಂಬಿ ತುಳುಕುವಂತಹ ಕ್ಯಾಂಪ್, ಆತ್ಮೀಯ ಸಂಗಮ, ತರಗತಿ, ತರಬೇತಿಗಳನ್ನು SSF ಸದಸ್ಯರಿಗೆ ನೀಡಿದೆ, ಸಾದಾರಣ ಜನರ ನಡುವೆ ಬದುಕುವ ಒಬ್ಬ SSF ನ ಸದಸ್ಯ ಅವರೆಲ್ಲರಿಗೂ ಮಾದರಿಯಾಗಿ ಬದುಕಬಲ್ಲನು, ತನ್ನ ಗೆಳೆಯರೊಂದಿಗೆ ಎಲ್ಲಿಗಾದರೂ ಪ್ರಯಾಣ ಮಾಡುವಾಗ, ಪ್ರಯಾಣದ ನಡುವೆ ಸ್ನೇಹಿತರೆಲ್ಲಾ ತಿಂಡಿಯ ಹೋಟೆಲ್ ಹುಡುಕುವಾಗ ಅದರಲ್ಲಿರುವ SSF ನ ಕಾರ್ಯಕರ್ತ ನಮಾಝಿಗಾಗಿ ಮಸೀದಿಯನ್ನು ಹುಡುಕುತ್ತಾನೆ, ಅವನ ಚಿಂತೆ ಯಾವಾಗಲೂ ಧಾರ್ಮಿಕತೆಯಾಗಿರುತ್ತದೆ.

ಮತ್ತು SSF ನ ಕಾರ್ಯಕರ್ತನೊಬ್ಬ ಅಥವ ಅವನ ಸಂಬಂಧಿಕರು ಮರಣ ಹೊಂದಿದರೆ,, ಆ ಮರಣ ಹೊಂದಿದವರ ಪಾಪ ಮೋಚನೆ, ಪರಲೋಕ ವಿಜಯಕ್ಕಾಗಿ SSF ನ ಎಲ್ಲಾ ಶಾಖೆಗಳಲ್ಲಿಯೂ ತಹ್ಲೀಲ್, ಅನುಸ್ಮರಣಾ ಸಭೆಗಳನ್ನು ಮಾಡಲಾಗುತ್ತದೆ, ಊರಿನಲ್ಲಿ ಯಾರಾದರೂ ಮರಣ ಹೊಂದಿದರೆ ಅವರ ಮನೆಗೆ ಹೋಗಿ ತಹ್ಲೀಲ್, ಖತಮುಲ್ ಕುರ್ಆನ್ ಏರ್ಪಡಿಸಲಾಗುತ್ತದೆ. ಈ ರೀತಿಯಾಗಿ ತನ್ನ 31 ವರ್ಷಗಳ ಪಯಣದಲ್ಲಿ ತನ್ನ ಕಾರ್ಯಕರ್ತರು ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಮುಂದುವರಿಯುವಂತೆ ಮಾಡಿದೆ, ಒಬ್ಬನ ಜೀವನದಲ್ಲಿ ಅವನ ಯಶಸ್ಸಿಗೆ ಬೇಕಾದ ಎಲ್ಲವನ್ನೂ SSF ನೀಡಿದೆ…..
SSF ಕರುನಾಡಿನಲ್ಲಿ ಕಾರ್ಯಾಚರಿಸುವಾಗ ನಿರಂತರವಾಗಿ ಆರೋಪ, ಆಕ್ಷೇಪಗಳನ್ನು ಕೇಳ ಬೇಕಾಯಿತು, ಆದರೆ ಅದನ್ಯಾವುದನ್ನು ಲಕ್ಕಿಸದೆ ಆದರ್ಶ ಎಂಬ ದಿಟ್ಟಾಯುಧದಿಂದ ಅದೆಲ್ಲವನ್ನು ಎದುರಿಸುತ್ತಾ ಬಂದಿದೆ.

SSF ಬೆಂಕಿಯಲ್ಲಿ ಉಂಟಾದ ಹೂವು, ಅದು ಬಿಸಿಲಿಗೆ ಬಾಡದು.

ಓ ಸಹೋದರರೇ, ಧಾರ್ಮಿಕತೆ ಮಾಯವಾಗುತ್ತಿದೆ
ಅಧಾರ್ಮಿಕತೆ ಮಿಂಚುತ್ತಿದೆ,
ನೈತಿಕತೆ ಕಳೆಗುಂದುತ್ತಿದೆ..‌
ಅನೈತಿಕತೆ ತಾಂಡವಾಡುತ್ತಿದೆ,
ಅನಾಚರ, ವ್ಯಭಿಚಾರ ರರಾಜಿಸುತ್ತಿದೆ,, ಇದೆಲ್ಲವನ್ನು ಮೆಟ್ಟಿನಿಂತು ಯಶಸ್ಸಿನ ಜೀವನ ನಡೆಸಿ ಸಜ್ಜನ, ಸತ್ಪಥದಲ್ಲಿ ಮುನ್ನಡೆಯಲು SSF ನೊಂದಿಗೆ ಕೈ ಜೋಡಿಸಿ…
ಸರ್ವರಿಗೂ ಕರ್ನಾಟಕ ರಾಜ್ಯ SSF ನ 31 ನೇ ಹುಟ್ಟು ಹಬ್ಬದ ಶುಭಾಶಯಗಳು.

ಲೇಖನ – ಕೆ ಎಂ ಇರ್ಷಾದ್ ಪಕ್ಷಿಕೆರೆ

error: Content is protected !! Not allowed copy content from janadhvani.com