janadhvani

Kannada Online News Paper

ಎಸ್ಸೆಸ್ಸೆಫ್ ಸಂಘಟನೆಯನ್ನು ಹಳ್ಳಿಗಲ್ಲಿಗಳಲ್ಲೂ ಕಟ್ಟಿ ಬೆಳೆಸಿ- ಕನಕಗಿರಿ ಶಾಸಕ

ಕೊಪ್ಪಳ : ನಾಡಿನಲ್ಲಿ ಸೌಹಾರ್ದತೆಯ ಸಂದೇಶವನ್ನು ಸಾರುವ ಎಸ್ಸೆಸ್ಸೆಫ್ ಸಂಘಟನೆಯನ್ನು ಹಳ್ಳಿಗಲ್ಲಿಗಳಲ್ಲೂ ಕಟ್ಟಿ ಬೆಳೆಸಬೇಕಾಗಿದೆ ಎಂದು ಕನಕಗಿರಿ ಶಾಸಕ ಬಸವರಾಜ ದಡೆಸುಗೂರು ಹೇಳಿದರು.

ಎಸ್ಸೆಸ್ಸೆಫ್ ಕೊಪ್ಪಳ ಜಿಲ್ಲಾ ಸಮಿತಿ ಧ್ವಜದಿನ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನಡೆಸಿ ಮಾತನಾಡುತ್ತಿದ್ದರು.
ಇಲ್ಲಿನ ಪ್ರತಿಯೊಂದು ಹಳ್ಳಿಗಳಲ್ಲೂ ಸರ್ವಧರ್ಮೀಯರಿಗೂ ಉತ್ತಮ ಸಂದೇಶವನ್ನು ನೀಡುತ್ತಾ ಎಸ್ಸೆಸ್ಸೆಫ್ ಮುಂದೆ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಈ ಸಂಘಟನೆಯನ್ನು ಬೆಳೆಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಎಸ್ಸೆಸ್ಸೆಫ್ ಈ ನಾಡಿಗೆ ನೀಡಿದ ಕೊಡುಗೆಗಳು ಹಾಗೂ ಮೂವತ್ತು ವರ್ಷಗಳ ಚಳವಳಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವಿಶ್ವನಾಥ ರೆಡ್ಡಿ ಹೊಸಮನಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಸವರಾಜಪ್ಪ ಹಳೆಮನಿ, ತಾಲೂಕು ಪಂಚಾಯತ್ ಸದಸ್ಯ ಪ್ರಕಾಶ್ ಭಾವಿ, ಖ್ಯಾತ ಸಾಹಿತಿ, ಚಿಂತಕ ಬರಹಗಾರ ಡಾ. ಸಿಎಂ ಹನೀಫ್ ಅಮ್ಜದಿ ಬೆಳ್ಳಾರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಸ್ಲಿಂ ಜಮಾಅತ್ ರಾಜ್ಯ ನಾಯಕ ಎಂಡಿಎಸ್ ಮೆಹಬೂಬ್ ಮುಲ್ಲಾ, ಎಸ್ಸೆಸ್ಸೆಫ್ ರಾಜ್ಯ ಡೆಪ್ಯುಟಿ ಅಧ್ಯಕ್ಷ ಮೌಲಾನಾ ಗುಲಾಂ ಹುಸೈನ್ ನೂರಿ, SYS ಜಿಲ್ಲಾಧ್ಯಕ್ಷ ಮೌಲಾನಾ ನಝೀರ್ ಅಹ್ಮದ್, ಹಾಫಿಝ್ ಅನಸ್ ನೆಲ್ಯಾಡಿ, ಹಾಫಿಝ್ ಸಲೀಂ ಗಂಗಾವತಿ ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಿದರು.

ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಮೆಹಬೂಬ್ ಬಸಾಪಟ್ಟಣ ಅಧ್ಯಕ್ಷತೆ ವಹಿಸಿದರು, ಅಬೂಬಕ್ಕರ್ ಸಿದ್ದೀಕ್ ಸಖಾಫಿ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com