ಹಾವೇರಿ:ಉತ್ತರ ಕರ್ನಾಟಕದ ಶೈಕ್ಷಣಿಕ ಪ್ರಗತಿಗಾಗಿ ಸ್ಥಾಪಿತವಾದ ಮುಈನುಸ್ಸುನ್ನ ಮೋರಲ್ ಅಕಾಡೆಮಿ ಹಾವೇರಿಯ ವಾರ್ಷಿಕ ಮಹಾಸಭೆಯು 2020 ಸೆಪ್ಟೆಂಬರ್ 12 ಕ್ಕೆ ಮುಈನುಸ್ಸುನ್ನ ದಾರುಲ್ ಉಲೂಂ ರಹ್ಮಾನಿಯ್ಯ ಕ್ಯಾಂಪಸ್ ದಾವಣಗೆರೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ ರವರ ಅದ್ಯಕ್ಷತೆಯಲ್ಲಿ ನಡೆಯಿತು. ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಎಂ ಮುಸ್ತಫಾ ನಈಮಿ ಲೆಕ್ಕ ಪತ್ರ ಮಂಡಿಸಿ ವರದಿ ವಾಚಿಸಿದರು.
ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಅಧ್ಯಕ್ಷರಾಗಿ ಶಹೀರ್ ಅಬ್ದುರ್ರಹ್ಮಾನ್ ಅಲ್ ಬುಖಾರಿ, ಪ್ರ.ಕಾರ್ಯದರ್ಶಿಯಾಗಿ ಕೆ.ಎಂ ಮುಸ್ತಫಾ ನಈಮಿ ಹಿಮಮಿ, ಕೋಶಾಧಿಕಾರಿಯಾಗಿ ಡಾ ಶೇಖ್ ಬಾವ ಮಂಗಳೂರು ಪುನರಾಯ್ಕೆಯಾದರು.
ಉಪಾಧ್ಯಕ್ಷರಾಗಿ ಸಯ್ಯಿದ್ ಮುನೀರುಲ್ ಅಹ್ದಲ್ ಮುಹಿಮ್ಮಾತ್ ,ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮತ್ತು ಮುಹ್ಸಿನ್ ರಿಫಾಈ ಹಾವೇರಿ,
ಕಾರ್ಯದರ್ಶಿಗಳಾಗಿ ಸಯ್ಯಿದ್ ಅತ್ಹರ್ ಸಖಾಫಿ ಸವಣೂರು,ಫಾರೂಕ್ ಮುಸ್ಲಿಯಾರ್ ದಾವಣಗೆರೆ, ಹಂಝ ಸಅದಿ ಅಲ್ಅಫ್ಳಲಿ, ಕೆ.ಕೆ ಅಶ್ರಫ್ ಸಖಾಫಿ ಮತ್ತು ಸಿದ್ದೀಖ್ ಸಖಾಫಿ ಕಾಯಾರ್ ರವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಕೆ.ಕೆ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ, ಮುಸ್ತಫಾ ಸಅದಿ ಉಜಿರೆ, ಇಸ್ಮಾಯಿಲ್ ಮುಸ್ಲಿಯಾರ್ ಲುಕ್ಮಾನಿಯಾ, ಯಾಸೀನ್ ಸಖಾಫಿ ಅಡ್ಡೂರು,ಜೈ ಅಬ್ದುರ್ರಹ್ಮಾನ್ ದಾವಣಗೆರೆ, ಅಲ್ತಾಫ್ ಸವಣೂರು, ಮುಕ್ತಾರ್ ರಝ್ವಿ ಹತ್ತಿಮತ್ತೂರು ರವರನ್ನು ಆಯ್ಕೆಮಾಡಲಾಯಿತು.