SSF ಕಲ್ಲಡ್ಕ ಸೆಕ್ಟರ್ ಹಾಗೂ ಇಂಡಿಯನ್ ರೈಡ್ ಕ್ರಾಸ್ ಸೊಸೈಟಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಾಹಬಾಗಿತ್ವದಲ್ಲಿ SSF ದಕ್ಷಿಣ ಕನ್ನಡ ಬ್ಲಡ್ ಸೈಬೋ ಇದರ 185ನೇ ಬೃಹತ್ ರಕ್ತದಾನ ಶಿಬಿರವು ಸೆ.20 ರಂದು ಆದಿತ್ಯವಾರ ಬೆಳಿಗ್ಗೆ 9:00ಕ್ಕೆ ಖುವ್ವತುಲ್ ಇಸ್ಲಾಂ ಮದ್ರಸ ಹಾಲ್ ಬೋಳಂತ್ತೂರು ನಲ್ಲಿ ನಡೆಯಲಿದೆ.
ಇದರ ಅಂಗವಾಗಿ SSF ಕಲ್ಲಡ್ಕ ಸೆಕ್ಟರ್ ವತಿಯಿಂದ ಬ್ಲಡ್ ಕ್ಯಾಂಪ್ ನ ಪೊಸ್ಟರ್ ಹಾಗೂ ಬ್ಯಾನರ್ ಪ್ರದರ್ಶನ ವನ್ನು ಶೈಖುನಾ ಸುರಿಬೈಲ್ ಉಸ್ತಾದ್ ರವರ ಮಖ್ಬರ ಝಿಯಾರತ್ ನೊಂದಿಗೆ ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಲ್ಲಡ್ಕ ಸೆಕ್ಟರ್ ಅಧ್ಯಕ್ಷರಾದ ಮಹಮ್ಮದ್ ಮಜೀದ್ ಕದ್ಕರ್, ದಕ್ಷಿಣ ಕನ್ನಡ ಬ್ಲಡ್ ಸೈಬೋ ಸಂಚಾಲಕರಾದ ಕರೀಂ ಕದ್ಕರ್ ಕಲ್ಲಡ್ಕ ಸೆಕ್ಟರ್ ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಸುರಿಬೈಲ್ ಹಾಗೂ ಕೆ.ಕೆ ಸಿದ್ದೀಕ್ ಸಖಾಪಿ ಮುದರ್ರಿಸ್ ಆಶ್- ಅರಿಯ, ಅಬ್ದುಲ್ ಹಮೀದ್ ಕದ್ಕರ್, ಶಾಫಿ ನಿರ್ಬೈಲ್, ಇಸ್ಮಾಯಿಲ್ ಬೋಳಂತೂರು, ಸಿದ್ದೀಕ್ ಕೆದಿಲ , ಮುಹಮ್ಮದ್ ಕೆದಿಲ ಬಾಗವಹಿಸಿ ಕಾರ್ಯಕ್ರಮಕ್ಕೆ ಎಲ್ಲರ ಸಹಾಯ ಸಹಕಾರವನ್ನು ಕೋರಿದರು.
ವರದಿ: ನೌಶಾದ್ ಕದ್ಕರ್