janadhvani

Kannada Online News Paper

ಮಕ್ಕಳ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ ಮಹತ್ತರವಾದದ್ದು – ಅಬೂಶಝ

ಪ್ರತಿಯೊಂದು ಮಕ್ಕಳ ಬೆಳವಣಿಗೆಗಳಲ್ಲಿ ಹೆತ್ತವರ ಪಾತ್ರ ಮಹತ್ತರವಾದದ್ದು, ಮನೆಯ ಪರಿಸರ ಮಕ್ಕಳಿಗೆ ಪೂರಕವಾಗಿರುವಂತೆ ಹೆತ್ತವರು ನೋಡಿಕೊಳ್ಳಬೇಕು.
ಹಾಗಾದರೆ ಮಾತ್ರ ಮಕ್ಕಳು ಸಮಾಜದ ಪ್ರತಿಭೆಗಳಾಗಿ ಹೊರಹೊಮ್ಮಲು ಸಾಧ್ಯವೆಂದು ಮೈದಾನಿಮೂಲೆ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ರಝಾಕ್ ಕಾಸಿಮಿ ( ಅಬೂಶಝ ) ಅಭಿಪ್ರಾಯಪಟ್ಟರು.
ಮೈದಾನಿಮೂಲೆ ದಖೀರತುಲ್ ಉಖ್ರಾ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿಯಿಂದ ಮದ್ರಸಾ ವಿದ್ಯಾರ್ಥಿಗಳ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮೈದಾನಿಮೂಲೆ ಮಸೀದಿಯ ಅಧ್ಯಕ್ಷ ಯೂಸುಫ್ ಹಾಜಿ ಕೈಕಾರ, ಕಾರ್ಯದರ್ಶಿ ಮಹಮ್ಮದ್ ಕೆ.ಎ, ಕೋಶಾಧಿಕಾರಿ ಇಬ್ರಾಹಿಂ ನೀರ್ಪಾಡಿ, ಯಂಗ್‌ಮೆನ್ಸ್ ನ ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ಉಜ್ರೋಡಿ, ಸದರ್ ಮುಅಲ್ಲಿಂ ಇರ್ಫಾನ್ ಹಿಮಮಿ, ಅಬ್ದುಲ್ ರಝಾಕ್ ಮುಸ್ಲಿಯಾರ್, ಉದ್ಯಮಿ ಮಹಮ್ಮದ್ ಕೆ.ಪಿ, ಕೆಸಿಎಫ್ ನಾಯಕ ಅಶ್ರಫ್ ಸಖಾಫಿ, ಮಸೀದಿಯ ಪದಾಧಿಕಾರಿಗಳಾದ ಹಂಝ ಉಜ್ರೋಡಿ, ಇಬ್ರಾಹಿಂ ಬಾಳಯ, ಯಂಗ್‌ಮೆನ್ಸ್ ಪದಾಧಿಕಾರಿಗಳಾದ ಮುನೀರ್ ನೀರ್ಪಾಡಿ, ಸ‌ಅದ್ ಮೈದಾನಿಮೂಲೆ, ಆಶಿಕ್ ಸಿ.ಹೆಚ್ ಸಹಿತ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಾರಿಸ್ ಅಡ್ಕ ಸ್ವಾಗತಿಸಿ, ಸಾದಿಕ್ ನೀರ್ಪಾಡಿ ಧನ್ಯವಾದ ಸಲ್ಲಿಸಿದರು.

error: Content is protected !! Not allowed copy content from janadhvani.com