janadhvani

Kannada Online News Paper

ಎಸ್ಸೆಸ್ಸೆಫ್ ಮಧ್ಯನಡ್ಕ ಶಾಖೆಯ ವತಿಯಿಂದ ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ ಮಧ್ಯನಡ್ಕ ತ್ವಾಹ ಜಮಾ ಮಸ್ಜಿದ್ ವಠಾರದಲ್ಲಿ ಜಮಾಅತ್ ಅಧ್ಯಕ್ಷರಾದ ಎಂ ಅಬೂಬಕ್ಕರ್ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಮಸೀದಿಯ ಖತೀಬ್ ಉಸ್ತಾದ್ ಕೆ ಬಿ ಅಬ್ದುರ್ರಹ್ಮಾನ್ ಮದನಿಯವರು ದುವಾರ್ಶಿವಚನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಮಾಅತ್ ಜೊತೆ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮಾಸ್ಟರ್ ಸ್ವಾಗತಿಸಿದರು. ಮು‌ಡಿಪು ಸೆಕ್ಟರ್ ಅಧ್ಯಕ್ಷರಾದ ಹುಸೈನ್ ಸಖಾಫಿ ಉಸ್ತಾದರು ಆಯುಷ್ಮಾನ್ ಕಾರ್ಡಿನ ಅನಿವಾರ್ಯತೆ ಮತ್ತು ಯೋಜನೆ ಬಗ್ಗೆ ತಿಳಿಸಿದರು.

ಶಾಖಾ ಅಧ್ಯಕ್ಷರಾದ ಫಯಾಜ್ ಎಂ, ಎಚ್ ಐ ಮದ್ರಸದ ಅಧ್ಯಾಪಕರಾದ ಸಿದ್ದೀಕ್ ಸಅದಿ, ಜಮಾಅತ್ ಕೋಶಾಧಿಕಾರಿ ಇಸ್ಮಾಯೀಲ್ ಎಂ, ಮಧ್ಯನಡ್ಕ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಎಂ, ಸುಲ್ತಾನ್ ಫ್ರೆಂಡ್ಸ್ ಅಧ್ಯಕ್ಷರಾದ ಅಶ್ರಫ್ ಎಂ ಕೆ, ಜಮಾಅತ್ ಉಪಾಧ್ಯಕ್ಷರಾದ ಹಸೈನಾರ್ ಸೀಗೆ, ಹಿರಿಯ ಸದಸ್ಯರಾದ ಇಬ್ರಾಹಿಂ ಸೀಗೆ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಜವಾಝ್ ಎಂ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಊರಿನ ಸರ್ವ ಧರ್ಮಗಳ ಸುಮಾರು 150ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದ ಪ್ರಯೋಜನ ಪಡೆದರು.

✍️ಆಸಿಫ್ ಕೆ ಎಂ ಮಧ್ಯನಡ್ಕ

error: Content is protected !!
%d bloggers like this: