janadhvani

Kannada Online News Paper

ಉಮರಾ ನಾಯಕ ಅಬ್ಬೊನು ಶಾಫಿ ಪಳ್ಳಾದೆ ನಿಧನ- SJM ಸಂತಾಪ

ಧಾರ್ಮಿಕ, ಸಾಮಾಜಿಕ ರಂಗದ ಮುಂಚೂಣಿ ನಾಯಕ, ಸುನ್ನತ್ ಜಮಾಅತ್ತಿನ ಆದರ್ಶ ದೀರ ಸಂಘಟಕ, ಸಮುದಾಯ ಸ್ನೇಹಿ, ಉಲಮಾಗಳು ಮತ್ತು ಸಯ್ಯಿದ್ ಗಳೊಂದಿಗೆ ಅಗಾಧ ಒಡನಾಟ ಹೊಂದಿದ್ದ ಜಾರಿಗೆಬೈಲು ಜಮಾಅತ್ ಅಧ್ಯಕ್ಷರಾದ ಅಬ್ಬೊನು ಶಾಫಿ ಪಳ್ಳಾದೆ ಯವರ ನಿಧನ ವಾರ್ತೆ ಕೇಳಿ ಅತೀವ ದು:ಖವಾಯಿತು.ಅವರ ಅಗಲಿಕೆ ಸುನ್ನೀ ಸಂಘ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ.

ಮೃತರ ಹೆಸರಲ್ಲಿ ಸಾಧ್ಯವಾದಷ್ಟು ಕುರ್ಆನ್ ಪಾರಾಯಣ ಹಾಗೂ ತಹ್ಲೀಲ್ ಹೇಳಿ ಹದ್’ಯಾ ಮಾಡಿ ಅವರ ಮಗ್ಫಿರತ್ ಮರ್ಹಮತ್ತಿಗಾಗಿ ಪ್ರಾರ್ಥಿಸಬೇಕಾಗಿಯೂ,ಮಯ್ಯಿತ್ ನಮಾಜ್ ನಿರ್ವಹಿಸ ಬೇಕಾಗಿಯೂ ಈ ಮೂಲಕ ವಿನಂತಿ.

ಅಲ್ಲಾಹು ಅವರಿಗೆ ಮಗ್ಫಿರತ್ ನೀಡಲಿ. ಅವರು ದೀನಿಗಾಗಿ ಮಾಡಿದ ಕಾರ್ಯ ಚಟುವಟಿಕೆ ಮತ್ತು ತ್ಯಾಗ ವನ್ನು ಅಲ್ಲಾಹು ಸ್ವೀಕರಿಸಿ ಅನುಗ್ರಹಿಸಲಿ. ಆಮೀನ್

ಆತೂರ್ ಸಅದ್ ಮುಸ್ಲಿಯಾರ್
ಅಧ್ಯಕ್ಷರು, ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯ ಸಮಿತಿ.

error: Content is protected !! Not allowed copy content from janadhvani.com