janadhvani

Kannada Online News Paper

N.C.ರೋಡ್ ಬ್ರಾಂಚ್ SჄS ನಿಂದ ಬಡ ಹೆಣ್ಣಿನ ವಿವಾಹಕ್ಕೆ ಧನ ಸಹಾಯ

ಸುನ್ನೀ ಯುವಜನ ಸಂಘ SჄS NC ರೋಡ್ ಬ್ರಾಂಚ್ ವತಿಯಿಂದ ಬಡ ಕುಟುಂಬದ ಹೆಣ್ಣಿನ ವಿವಾಹಕ್ಕೆ ಸಂಪೂರ್ಣ ಸಹಕಾರ ನೀಡಲಾಗಿದೆ.
ಮದುವೆ ದಿನದ ಊಟೋಪಚಾರ ಮತ್ತಿತರ ಎಲ್ಲಾ ರೀತಿಯ ನೆರವು ನೀಡಿ ಶ್ಲಾಘನೀಯ ಸೇವೆ ಸಲ್ಲಿಸಿದೆ.

SSF NC ರೋಡ್ ಶಾಖೆಯ ಕಾರ್ಯಕರ್ತರು ಸ್ವಯಂ ಸೇವಕರಾಗಿ ಸಹಕರಿಸಿದರು.ಮದುವೆ ಮನೆಗೆ SჄS NC ರೋಡ್ ಬ್ರಾಂಚ್ ಅಧ್ಯಕ್ಷ ಫಾರೂಖ್ ಬೊಟ್ಟಿಕಂಡ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ನಾರಂಕೋಡಿ ಕೋಶಾಧಿಕಾರಿ ಇಬ್ರಾಹಿಂ ಖಂಡಿಗ ಉಪಾಧ್ಯಕ್ಷ ಖಾದರ್ ಕೆ.ಪಿ.ಬೈಲ್ ಕಾರ್ಯದರ್ಶಿ ಹಮೀದ್ ಮಜಲ್ ಕೋಡಿ ಬೇಟಿ ನೀಡಿದರು.