janadhvani

Kannada Online News Paper

ದ.ಕ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಿಂದ ಉಲಮಾ ನಿಂದನೆ- ಟ್ವೀಟಿಗರಿಂದ ಆಕ್ರೋಶ

ಮಂಗಳೂರು: ಕರ್ನಾಟಕ ರಾಜ್ಯ ಉಲಮಾ ಒಕ್ಕೂಟದ ಕಾರ್ಯದರ್ಶಿಯಾಗಿರುವ ನೂರಾರು ಶಿಷ್ಯವೃಂದವನ್ನು ಹೊಂದಿರುವ ಮೌಲಾನಾ ತೋಕೆ ಮುಹ್ಯಿದ್ದೀನ್ ಕಾಮಿಲ್ ಸಖಾಫಿಯವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ನಿಲುವುಗಳನ್ನು ವೈಯಕ್ತಿಕ ಅಭಿಪ್ರಾಯವಾಗಿ ಪ್ರಶ್ನಿಸಿದ್ದರು.

ದೇಶಾದ್ಯಂತ ಕಾಂಗ್ರೆಸ್ ತನ್ನ ಜಾತ್ಯಾತೀತ ನಿಲುವುಗಳಲ್ಲಿ ಇತ್ತೀಚೆಗೆ ವ್ಯತಿರಿಕ್ತ ರೀತಿಯ ಹೆಜ್ಜೆಗಳನ್ನು ಇರಿಸುವ ಮೂಲಕ ಹಲವಾರು ಜನರಲ್ಲಿ ನೋವಿನ ಪರಿಸ್ಥಿತಿಯನ್ನು ನಿರ್ಮಿಸಿತ್ತು. ಹಲವಾರು ಪ್ರಗತಿಪರರು, ಧಾರ್ಮಿಕ ನಾಯಕರು ಇದನ್ನು ಪ್ರಶ್ನಿಸಿದ್ದು ರಾಷ್ಟ್ರ ಮಟ್ಟದಲ್ಲೂ ವಾರ್ತೆಯಾದ ವಿಚಾರವಾಗಿದೆ.

ಇದೇ ಸಂದರ್ಭ ದ.ಕ ಜಿಲ್ಲೆಯ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಅಶ್ರಫ್ ಎಂಬ ವ್ಯಕ್ತಿ ತೋಕೆ ಕಾಮಿಲ್ ಸಖಾಪಿಯವರಿಗೆ ಬೆದರಿಕೆಯ ರೀತಿ ವೈಯಕ್ತಿಕ ಅವಹೇಳನ ಮಾಡುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು.

ಟ್ವೀಟಿಗರು ಈ ವಿಚಾರವನ್ನು ಕೆದಕಿದ್ದು, #ResighnDKcongressSevadalPresident ಎಂಬ ಹ್ಯಾಷ್ ಟ್ಯಾಗ್ ಮೂಲಕ ಸೇವಾದಳ ಅಧ್ಯಕ್ಷನ ಬೆಂಡೆತ್ತಿದ್ದು, ಸಾವಿರಾರು ಟ್ವೀಟ್ ಗಳು ಮುಖಂಡನ ರಾಜಿನಾಮೆ ಪಡೆಯುವಂತೆ ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಿದೆ.

ಜೊತೆಗೆ ಹ್ಯಾಷ್ ಟ್ಯಾಗ್ ಕೂಡ ರಾಜಿನಾಮೆ ಪದವನ್ನು ತಪ್ಪಾಗಿ ಬರೆದು, ಅವನ್ನು ಅರ್ಥೈಸುವ ಸಾಮರ್ಥ್ಯ ಸೇವಾದಳಕ್ಕಿಲ್ಲ ಎಂಬಂತ ಟ್ವೀಟ್ ಗಳು ರವಾನಿಸಿ ಟ್ರೋಲ್ ಮಾಡುವ ರೀತಿ ಎಲ್ಲಾ ಟ್ವೀಟಿಗರು ಬಳಸಿದ್ದು ಕಂಡುಬಂತು.

ಜಿಲ್ಲೆಯಲ್ಲಿ ಭಾರೀ ರಾಜಕೀಯ ಚರ್ಚೆಗಳು ಪ್ರಾರಂಭವಾಗಿದ್ದು,ಪ್ರಸ್ತುತ ಆಂದೋಲನ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಲಿದೆ ಎಂಬ ವಿಚಾರ ವ್ಯಾಪಕವಾಗಿ ಕೇಳಿ ಬರುತ್ತಿದೆ. ಒಬ್ಬ ಮುಖಂಡನ ಬೇಜವಾಬ್ದಾರಿತನದ ವರ್ತನೆಗೆ ಪಕ್ಷ ಜವಾಬ್ದಾರಿಯಲ್ಲ ಎಂಬ ಸಮರ್ಥನೆಯು ಜಿಲ್ಲಾ ಕಾಂಗ್ರೆಸ್ ನ ಅಧಿಕೃತ ವಕ್ತಾರರಲ್ಲಿ ಹಲವರು ಸಮಜಾಯಿಷಿ ನೀಡುವ ಪ್ರಯತ್ನ ಮಾಡುತ್ತಿದ್ದಾರೆ.

error: Content is protected !! Not allowed copy content from janadhvani.com