ಚಿಕ್ಕಮಗಳೂರು: ಜಿಲ್ಲಾ ಕರ್ನಾಟಕ ಮುಸ್ಲಿಂ ಜಮಾತ್ ಜಿಲ್ಲಾಧ್ಯಕ್ಷ ಹಾಜಿ ಮೊಹಮ್ಮದ್ ಶಾಹಿದ್ ರಜ್ವಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸುನ್ನಿ ಸಂಘಟನೆಗಳ ಸಭೆಯನ್ನು ಕರೆದು ಮುಂಬರುವ ಶನಿವಾರ ಮೊಹರಂ ಕಡೆ ದಿನವಾದ ಅಶೂರ ಆಚರಣೆ ಇರುವುದರಿಂದ ಮುಸ್ಲಿಂ ಬಾಂಧವರು ಕೋರೋನ ಸಂಧರ್ಭದಲ್ಲಿ ಸರಳವಾಗಿ ಹಾಗು ಶ್ರದ್ಧಾಪೂರ್ವಕವಾಗಿ ಆಚರಿಸಲು ಮನವಿ ಮಾಡಲಾಯಿತು.
ಇಸ್ಲಾಮಿನ ಪ್ರತಿಷ್ಠಿತ ಹಬ್ಬವಾಗಿರುವ ಆಶೂರ ಮೊಹರಂ ಮಾಸದ 10 ನೇ ತಾರೀಖು ಇಮಾಮ್ ಹುಸೈನ್ ರವರು ತಮ್ಮ ಸಹಿತ ತಮ್ಮ ಕುಟುಂಬವನ್ನೇ ತ್ಯಾಗ ಬಲಿದಾನ ಮಾಡಿದ ದಿವಸ ಈ ದಿನದಂದು ಉಪವಾಸ ಮಾಡುವ ಮೂಲಕ ಶ್ರದ್ದೆ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ ಇದನ್ನು ಹೊರತು ಇಸ್ಲಾಂನಲ್ಲಿ ಇಲ್ಲ ಸಲ್ಲದ ಸಂಪ್ರದಾಯಗಳಲ್ಲಿ ತೊಡಗುವುದು ಘೋರ ಅಪರಾಧ ಮತ್ತು ಅಗೌರವ ಈ ಕುರಿತು ಮಸೀದಿಗಳ ಇಮಾಮರು ಶರಿಯತ್ ನಲ್ಲಿ ಇರುವ ಕಾರ್ಯಚಟುವಟಿಕೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಜಮಾತ್ ರಾಜ್ಯ ಸದಸ್ಯರಾದ ಯೂಸುಫ್ ಹಾಜಿ, ಆರಿಫ್ ಅಲಿ ಖಾನ್, ಮನ್ಸೂರ್ ಅಹಮದ್, ಇನ್ನಿತರೆ ಧಾರ್ಮಿಕ ಮುಖಂಡರು ಉಪಸ್ಥತರಿದ್ದರು ಎಂದು ಚಿಕ್ಕಮಗಳೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರು ಹಾಗು ಪ್ರಧಾನ ಕಾರ್ಯದರ್ಶಿಯು ಆದ ಹಾಜಿ ಫೈರೋಜ್ ಅಹಮದ್ ರಜ್ವಿ ರವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ