ಮಂಗಳೂರು:ಆ 19 ಎಸ್ಕೆಎಸ್ಸೆಸ್ಸೆಫ್ ವಿಖಾಯ ರಕ್ತದಾನಿ ಬಳಗ ದ.ಕ ಜಿಲ್ಲಾ ವತಿಯಿಂದ ಜಿಲ್ಲೆಯಾದ್ಯಂತ ನಡೆಸುತ್ತಿರುವ ರಕ್ತದಾನ ಅಭಿಯಾನದ ಉದ್ಘಾಟನೆಯು ಇಂದು ವಳಚ್ಚಿಲ್ ದರ್ಗಾ ಶರೀಫ್ ವಠಾರದಲ್ಲಿ ನಡೆಯಿತು. ಸ್ಥಳೀಯ ವಳಚ್ಚಿಲ್ ಜುಮ್ಮಾ ಮಸೀದಿ ಖತೀಬರಾದ ಕುಕ್ಕಿಲ ಅಬ್ದುಲ್ ಖಾದಿರ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷರಾದ ಸಯ್ಯಿದ್ ಅಮೀರ್ ತಂಙಳ್ ದುವಾ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆಗಸ್ಟ್19 ರಿಂದ ಅಕ್ಟೋಬರ್ 02ರ ವಿಖಾಯ ಡೇ ವರೆಗೆ ಜಿಲ್ಲೆಯಾದ್ಯಂತ ಈ ಅಭಿಯಾನ ನಡೆಯಲಿದೆ. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ (ರಿ ) ದ.ಕ ಜಿಲ್ಲಾ ಸಹಭಾಗಿತ್ವದಲ್ಲಿ ಜಿಲ್ಲೆಯ 12 ವಲಯಗಳಲ್ಲಿ 20ಕ್ಕಿಂತಲೂ ಅಧಿಕ ರಕ್ತದಾನ ಶಿಬಿರಗಳ ಮೂಲಕ ಸುಮಾರು 2,500ಕ್ಕಿಂತಲೂ ಅಧಿಕ ಯುನಿಟ್ ರಕ್ತವನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ವಿಖಾಯ ಜಿಲ್ಲಾ ಅಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ತಾಲೂಕು ತಹಶೀಲ್ದಾರ್ ಶ್ರೀ ಗುರುಪ್ರಸಾದ್ ಮಾತನಾಡಿ ಎಸ್ಕೆಎಸ್ಸೆಸ್ಸೆಫ್ ನ ಕಾರ್ಯಕ್ರಮವನ್ನು ಕೊಂಡಾಡಿದರು. ಯುವಕರು ಇಂತಹ ಸಮಾಜಸೇವೆಗಳಿಗೆ ಮುಂದಾಗಬೇಕು. ರಕ್ತದಾನವು ಅತೀ ಶ್ರೇಷ್ಟ ದಾನ ಎಂದು ತಿಳಿಸಿದರು.
ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಮೌಲನಾ ಅನೀಸ್ ಕೌಸರಿ ಮುಖ್ಯ ಭಾಷಣಗೈದರು. ಎಸ್ಕೆಎಸ್ಸೆಸ್ಸೆಫ್ ಒಂದು ಧಾರ್ಮಿಕ ಸಂಘಟನೆಯಾಗಿದ್ದರೂ ತನ್ನ ಸಮಾಜಮುಖೀ ಕಾರ್ಯಕ್ರಮಗಳಿಂದ ಇಂದು ಸಮಾಜದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಕಾರ್ಯಕರ್ತರ ಅವಿಶ್ರಾಂತ ಪರಿಶ್ರಮ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಲಭಿಸುತ್ತಿರುವುದು ಸಂತೋಷದಾಯಕವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಇಸ್ಮಾಯಿಲ್ ಯಮಾನಿ, ವಿಖಾಯ ಜಿಲ್ಲಾ ಉಸ್ತುವಾರಿ ಇಸಾಕ್ ಹಾಜಿ ತೋಡಾರು ಜಿಲ್ಲಾ ಉಪಾಧ್ಯಕ್ಷ ಸಿದ್ಧೀಕ್ ಅಬ್ದುಲ್ ಖಾದರ್ ಬಂಟ್ವಾಳ, ದ.ಕ ಜಿಲ್ಲಾ ವಿಖಾಯ ಚಯರ್ಮ್ಯಾನ್ ಸೈಯ್ಯಿದ್ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಜನರಲ್ ಕನ್ವೀನರ್ ಆಸಿಫ್ ಕಬಕ, ಜಿಲ್ಲಾ ವಿಖಾಯ ಕೋ ಆರ್ಡಿನೇಟರ್ ಮುಸ್ತಫ ಕಟ್ಟದಪಡ್ಪು, ಜಿಲ್ಲಾ ವಿಖಾಯ ರಕ್ತದಾನಿ ಬಳಗದ ಉಸ್ತುವಾರಿ ತಾಜುದ್ದೀನ್ ಟರ್ಲಿ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಜನಾಬ್ ಮಹಮ್ಮದ್ ಮೋನು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಮಂಗಳೂರು ವಲಯ ವಿಖಾಯ ಚಯರ್ಮ್ಯಾನ್ ಅಪ್ಸರ್ ಬಾಷ ಕುದ್ರೋಳಿ ಸ್ವಾಗತಿಸಿದರು, ಅಲ್ಮಾಝ್ ಮಲಿಕ್ ಕಾರ್ಯಕ್ರಮ ನಿರೂಪಿಸಿದರು ಹಾರೀಸ್ ಕುದ್ರೋಳಿ ವಂದಿಸಿದರು.
ಇದೇ ಸಂದರ್ಭದಲ್ಲಿ ವಿಖಾಯ ತುರ್ತು ಕಾರ್ಯ ನಿರ್ವಹಣಾ ಪಡೆಗೆ ಸುರಕ್ಷಾ ಸಾಮಾಗ್ರಿಗಳನ್ನು ವಿಖಾಯ ಮೇಲ್ವಿಚಾರಕ ಇಸ್ಹಾಕ್ ಹಾಜಿ ಹಸ್ತಾಂತರಿಸಿದರು. ವಿಖಾಯ ಜಿಲ್ಲಾ ಸಮಿತಿ ಸದಸ್ಯರಿಗೆ ಗುತುತಿನ ಚೀಟಿಗಳನ್ನೂ ವಿತರಿಸಲಾಯಿತು.