janadhvani

Kannada Online News Paper

ಖ್ಯಾತ ಚಿಂತಕ ಇಂಜಿನಿಯರ್ ಎಸ್ ಅಬ್ದುರ್ರಹ್ಮಾನ್ ನಿಧನ

ಮಂಗಳೂರು: ರಾಜ್ಯದ ಪ್ರಮುಖ ಸುನ್ನೀ ನಾಯಕರಾಗಿದ್ದ‌ ಪ್ರೊಫೆಸರ್|ಡಾಕ್ಟರ್| ಎಸ್.ಅಬ್ದುಲ್ ರಹ್ಮಾನ್ (ಇಂಜಿನಿಯರ್) ತಲೆಕ್ಕಿ (61) ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಇಂದು (ಆಗಸ್ಟ್ 17 ಸೋಮವಾರ 9pm) ದೇರಳಕಟ್ಟೆ ಕಣಚೂರು ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾರೆ.

ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಹಾಗೂ ಸುನ್ನೀ ಯುವಜನ ಸಂಘ (SYS) ಗಳ ರಾಜ್ಯ ‌ಪ್ರಧಾನ‌ ಕಾರ್ಯದರ್ಶಿಯಾಗಿ ಸುನ್ನತ್ ಜಮಾಅತಿನ ಬೆಳವಣಿಗೆಗೆ ಗಣನೀಯ ಸೇವೆ ಸಲ್ಲಿಸಿದ ಅವರುಪ್ರಮುಖ ಬಹುಭಾಷಾ ವಾಗ್ಮಿ, ಬರಹಗಾರ ಮತ್ತು ಚಿಂತಕರಾಗಿ ಪ್ರಶಸ್ತರಾಗಿದ್ದರು.
Islam and Science ಇಂಗ್ಲಿಷ್ ಪತ್ರಿಕೆಯನ್ನು ನಡೆಸುತ್ತಿದ್ದರು

B.E., M.Tech., PhD. ಪದವೀಧರರಾದ ಅವರು ಪಿ.ಎ.ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಪ್ರೊಫೆಸರ್ ಮತ್ತು HOD (ECE) ಆಗಿದ್ದರು. ಯೇನೆಪೋಯಾ ಯುನಿವರ್ಸಿಟಿಯ ‌ಅಸಿಸ್ಟೆಂಟ್ ರಿಜಿಸ್ಟ್ರಾರ್ ಹಾಗೂ ಬ್ಯಾರೀಸ್ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರಸ್ತುತ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿದ್ದ ಅವರ ಅಕಾಲಿಕ ಅಗಲಿಕೆಯು ತುಂಬಲಾರದ ನಷ್ಟವಾಗಿದ್ದು, ಸುನ್ನೀ ಸಂಘ ಸಂಸ್ಥೆಗಳ ನಾಯಕರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಅವರು ಪತ್ನಿ,ಆರು ಹೆಣ್ಣು ,ಎರಡು ಗಂಡು ಮಕ್ಕಳು, ಬಂಧು- ಬಳಗ,ಶಿಷ್ಯಂದಿರು ಮತ್ತು ಅಪಾರ ಅಭಿಮಾನಿ ವೃಂದವನ್ನು ಅಗಲಿದ್ದಾರೆ.

error: Content is protected !! Not allowed copy content from janadhvani.com