janadhvani

Kannada Online News Paper

ಬದ್ರಿಯಾ ಜುಮಾ ಮಸೀದಿ ಕಲ್ಮಿಂಜ: ಸ್ವಾತಂತ್ರ್ಯೋತ್ಸವ ದಿನಾಚರಣೆ

ಮಂಜನಾಡಿ: ಭಾರತ ದೇಶದ 74ನೇ ಸ್ವಾತಂತ್ರ್ಯವನ್ನು ಕಲ್ಮಿಂಜ ಬದ್ರಿಯಾ ಜುಮಾ ಮಸೀದಿ ವತಿಯಿಂದ ಆಚರಿಸಲಾಯಿತು.

ಮಸೀದಿ ಅಧ್ಯಕ್ಷರಾದ ಖಾಲಿದ್ ಮದನಿಯವರು ಧ್ವಜಾರೋಹಣಗೈದರು. ಸ್ಥಳೀಯ ಖತೀಬರಾದ ರಹೀಮ್ ಸಖಾಫಿ ಚಿಪ್ಪಾರ್ ದುಃಆಗೈದರು, ಅಬೂಬಕ್ಕರ್ ಅಮಾನಿಯವರು ಕಾರ್ಯಕ್ರಮವನ್ನು ಉಧ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಜಮಾಅತ್ ಕಾರ್ಯಕ್ರಮದರ್ಶಿಗಳಾದ ಇಲ್ಯಾಸ್ ಪೂಡಲ್, ಅಬ್ಬಾಸ್ ಮದಕ ಮತ್ತು ಕೋಶಾಧಿಕಾರಿಯಾದ ಹಮೀದ್ ಅಕ್ಕರೆ ಹಾಗೂ ಊರಿನ ಹಿರಿಯ ಕಿರಿಯರು ಉಪಸ್ಥಿತರಿದ್ದರು.