ಚಿಕ್ಕಮಗಳೂರು: ಜಿಲ್ಲಾ ಸಮಿತಿಯ ಕೆಂದ್ರ ಕಛೇರಿ ಜಾಮಿಯಾ ಕಂಜುಲ್ ಈಮಾನ್ ನಲ್ಲಿ 74 ನೇ ಸಾತಂತ್ರ ದಿನಾಚರಣೆ ಯನ್ನು ಹಮ್ಮಿಕೊಳ್ಳಲಾಗಿತ್ತು ಬೆಳಗ್ಗೆ 9.30ಕ್ಕೆ ಸಂಸ್ಥೆಯ ಜಿಲ್ಲಾ ಅಧ್ಯಕ್ಷರು ಆದ ಹಾಜೀ ಮೊಹಮ್ಮದ್ ಶಾಹಿದ್ ರಜ್ವಿ ರವರು ಧ್ವಾರೋಹಣವನ್ನು ನೆರವೇರಿಸಿದರು ನಂತರ ನೆರೆದಿದ್ದ ಸರ್ವಧರ್ಮ ಮುಖಂಡರು ಮತ್ತು ಸಾರ್ವಜನಿಕರು ರಾಷ್ಟ್ರಗೀತೆ ಹಾಡಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಯಾದ ಹಾಜಿ ಫೈರೋಜ್ ಅಹಮದ್ ರಜ್ವೀ ರವರು ಸ್ವಾಗತ ಭಾಷಣ ಮಾಡಿದರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ J.E.S ಶಾಲೆಯ ಪ್ರಾಂಶುಪಾಲರಾದ ಶ್ರೀ ನಂದಕುಮಾರ್ ರವರು ಸ್ವತಂತ್ರ ಪೂರ್ವದ ಇತಿಹಾಸ ಮತ್ತು ಸ್ವಾತಂತ್ರ ಸಂಗ್ರಾಮದಲ್ಲಿ ಮಾಡಿದ ಆನೇಕ ಹೋರಾಟಗಾರರನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದರು ಹಾಗು ರಾಜ್ಯ ಸಮಿತಿಯ ನಾಯಕರಾದ ಕೆ ಎಂ ಸಿದ್ದೀಕ್ ಮೊಂಟುಗೋಳಿ ಯವರು ಬ್ರಿಟಿಷರನ್ನು ಭಾರತದಿಂದ ಓಡಿಸಲು ಶ್ರಮಿಸಿದ ನಾಯಕರನ್ನು ಸ್ಮರಿಸಿ ಸ್ವತಂತ್ರ ಸಂಗ್ರಾಮದಲ್ಲಿ ಮುಸ್ಲಿಂ ನಾಯಕರ ಹಾಗೂ ಮುಸ್ಲಿಂ ಧರ್ಮಗುರುಗಳು ತ್ಯಾಗ ಮತ್ತು ಬಲಿದಾನಗಳನ್ನು ವಿವರಿಸಿದರು.
ಈ ಸಂಧರ್ಭದಲ್ಲಿ ಸುನ್ನೀ ವಿದ್ವಾಂಸರಾದ ಮೌಲಾನ ಮೊಹಮ್ಮದ್ ಯೂಸೂಫ್, ಮೌಲಾನಾ ಫೇಸಿ ಉರ್ ರೆಹಮಾನ್, ಮೌಲಾನಾ ಜುಲ್ಫಿಕರ್, ಹಫೀಝ್ ಇರ್ಶಾದ್ ರಝಾ ರವರು ನೆರೆದಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ದೇಶಪ್ರೇಮದ ಬಗ್ಗೆ ಅರಿವು ಮೂಡಿಸಿದರು ಈ ಕಾರ್ಯಕ್ರಮದಲ್ಲಿ ಮುಖಂಡರಾದ ಎ.ಯೂಸೂಫ್ ಹಾಜಿ,ಆರಿಫ್ ಅಲಿ ಖಾನ್,ಅಖ್ತರ್ ಹುಸೈನ್,ಜಂಶೀಧ್ ಖಾನ್, ಹಾಗು ವಿವಿಧ ಸುನ್ನೀ ಸಂಘಟನೆಗಳ ಪದಾಧಿಕಾರಿಗಳು ಉಲಮಾಗಳು ಮತ್ತು ಇನ್ನಿತರೆ ಧಾರ್ಮಿಕ ಮುಖಂಡರು ಉಪ್ಥಿತರಿದ್ದರು ಎಂದು ಪ್ರಧಾನ ಕಾರ್ಯದರ್ಶಿ ಹಾಜಿ ಫೈರೋಜ್ ಅಹಮದ್ ರಜ್ವೀ ರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ