ಚಿತ್ರದುರ್ಗ : ಬಿಜಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ “ಕುಕ್ಕೆ ಶ್ರೀ” ಹೆಸರಿನ ಖಾಸಗಿ ಬಸ್ಸೊಂದಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮ 5 ಮಂದಿ ಸಜೀವ ದಹನಗೊಂಡಿದ್ದು 27 ಮಂದಿಗೆ ಗಾಯಗಳಾಗಿರುವ ಬಗ್ಗೆ ಹಿರಿಯೂರಿನ ಹೆದ್ದಾರಿಯಲ್ಲಿ ವರದಿಯಾಗಿದೆ.
32 ಮಂದಿಯಿಂದ ಪ್ರಯಾಣಿಕರು ಚಾಲಕ ಮತ್ತು ಸಹಾಯಕನನ್ನು ಒಳಗೊಂಡಿದ್ದ ಈ ನತದೃಷ್ಟ ಬಸ್ ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಚರಿಸುತ್ತಿತ್ತು. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.