ಮಾಸ್ಕೋ, ಆ9: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟಿಕ್‌ಟಾಕ್ ಆ್ಯಪ್ ನಿಷೇಧಿಸಲು ಮುಂದಾದ ಬೆನ್ನಲ್ಲೇ ತಮ್ಮ ಕಾರ್ಯಾಚರಣೆಯ ವಹಿವಾಟುಗಳನ್ನು ಅಮೆರಿಕ ಕಂಪನಿಗೆ ಮಾರಾಟ ಮಾಡಲು ಟಿಕ್‌ಟಾಕ್ ಮುಂದಾಗಿದ್ದು, ಟ್ವಿಟರ್ ಮತ್ತು ಮೈಕ್ರೋಸಾಫ್ಟ್ ಈ ಸಂಬಂಧ ರೇಸ್‌ನಲ್ಲಿವೆ ಎಂದು ತಿಳಿದುಬಂದಿದೆ.
ಟ್ವಿಟರ್ ಮತ್ತು ಟಿಕ್‌ಟಾಕ್ ಸಂಸ್ಥೆಗಳ ಸಂಭಾವನೀಯ ವಿಲೀನದ ಕುರಿತು ಹಲವು ವಾರಗಳಿಂದ ಚರ್ಚೆಗಳು ನಡೆಯುತ್ತಿವೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಟ್ವಿಟರ್ ಮತ್ತು ಚೀನಾ ಮೂಲದ ಟಿಕ್‌ಟಾಕ್ ಕಂಪನಿಯ ಮಾಲೀಕ ಸಂಸ್ಥೆ ಬೈಟ್ ಡ್ಯಾನ್ಸ್ ಲಿ. ವಿಲೀನದ ಸಂಬಂಧ ಪ್ರಾಥಮಿಕ ಮಾತುಕತೆ ನಡೆಸಿವೆ. ಮೈಕ್ರೋಸಾಫ್ಟ್ ಕಂಪನಿಗಿಂತ ಅತ್ಯಂತ ಚಿಕ್ಕದಾಗಿರುವ ಟ್ವಿಟರ್ ಈ ಪಾಲುದಾರಿಕೆಗೆ ಹೆಚ್ಚಿನ ಮೊತ್ತ ಪಾವತಿಸಬೇಕಾಗುತ್ತದೆ ಎನ್ನಲಾಗುತ್ತಿದೆ.