ಬುಖಾರಿ ಸಾದಾತುಗಳಲ್ಲಿ ಪ್ರಮುಖರೂ,ಸಂಘಟನಾ ಚತುರರೂ,ಕಾಸರಗೋಡು ಜಿಲ್ಲೆಯ ಹೃದಯಭಾಗವಾದ ಮಂಜೇಶ್ವರದ ಪೊಸೋಟಿನಲ್ಲಿ ಅಭಿಮಾನವಾಗಿ ತಲೆಯೆತ್ತಿನಿಂತಿರುವ ಮಳ್ಹರ್ ಸಂಸ್ಥೆಯ ರೂವಾರಿಯೂ,ಸಮಸ್ತ ಕೇರಳ ಕೇಂದ್ರ ಮುಶಾವರ ಸದಸ್ಯರೂ ಆಗಿದ್ದ ಸಯ್ಯದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ ಬುಖಾರಿಯವರ ವಿದಾಯಕ್ಕೆ 5 ವರ್ಷ ತುಂಬುತ್ತಿದೆ…
1961 ಸಪ್ಟಂಬರ್ 21 (ಮುಹರ್ರಂ24)ರಂದು ಬುಧವಾರ ಕೋಝಿಕ್ಕೋಡ್ ಜಿಲ್ಲೆಯ ಫರೂಖ್ ಸಮೀಪದ ಕಡಲುಂಡಿ ಎಂಬಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸಂತಾನ ಪರಂಪರೆಯ ಸಯ್ಯದ್ ಅಹ್ಮದುಲ್ ಬುಖಾರಿ ಮತ್ತು ತೃಕರಿಪ್ಪುರ್ ಸಯ್ಯದ್ ಶಾಹುಲ್ ಹಮೀದ್ ತಂಙಳ್ ರ ಪುತ್ರಿ ಸಯ್ಯದತ್ ಫಾತಿಮಾ ಇಂಬಿಚ್ಚಿ ಬೀವಿಯ ಹಿರಿಯ ಪುತ್ರನಾಗಿ ಜನಿಸಿದ ಸಯ್ಯದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ ಬುಖಾರಿ ಬಾಲ್ಯದಲ್ಲೇ ಉತ್ತಮ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದರು.
ತಕ್ವ, ಇಲ್ಮ್,ತಾಳ್ಮ್,ಮುಂತಾದ ಎಲ್ಲಾ ಸತ್ಕರ್ಮದಲ್ಲಿ ಮುಂಚೂನಿಯಲ್ಲಿದ್ದರು.ಚಿಕ್ಕ ವಯಸ್ಸಿನಲ್ಲೇ ಕಲಿಕೆಗೆ ಅತ್ಯಂತ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು.ಧಾರ್ಮಿಕ ವಿದ್ಯೆ ಕಲಿಯುದರಲ್ಲಿ ಎಲ್ಲಿಲ್ಲದ ಅತೀವ ಆಸಕ್ತಿ.ಯಾರನ್ನು ಆಕರ್ಷಿಸಬಲ್ಲ ಸ್ವಭಾವ,ಆದರ್ಶಧೀರತೆ,ನಿರಾಶ್ರಿತರಿಗೆ ಆಶ್ರಯ,ಹಲವಾರು ನಾಯಕರ ಗುರುವರ್ಯ ಹೀಗೆ ಸಾಗುತ್ತಿದೆ ತಂಙಳರ ಗುಣ ವಿಶೇಷತೆಗಳು.
ಮೂರನೇ ವಯಸ್ಸಿನಿಂದ ತಂದೆಯ ನಿಯಂತ್ರಣದಲ್ಲೇ ಬೆಳೆದರು.ಕರುವಾನ್ ತುರುತ್ತಿಯಲ್ಲಿ ಮದ್ರಸದಲ್ಲಿ ಧಾರ್ಮಿಕ ವಿದ್ಯೆ ಕಲಿಯಲು ಆರಂಬಿಸಿದರು.ತಂದೆಯೇ ದರ್ಸಿನ ಮೊದಲ ಗುರು.ಸ್ಕೂಲ್ ಸಂಭದಿತ ವಿಷಯದಲ್ಲಿ ಕ್ಲಾಸ್ ತೆಗೆಯಲು ಅದ್ಯಾಪಕರು ಮನೆಗೆ ಬರುತ್ತಿದ್ದರು.ಬಾಲ್ಯ ಪ್ರಾಯದಿಂದಲೇ ಕೆಡುಕಿನಿಂದ ಮುಕ್ತವಾಗಬೇಕೆಂಬ ಧೃಢ ನಿರ್ಧಾರದೂಂದಿಗೆ ಪ್ರಾಥಮಿಕ ಶಿಕ್ಷಣವನ್ನು ತಂದೆಯೇ ನೀಡಿದ್ದರು.ಅಲ್ಫಿಯ ಮತ್ತು ಫತ್ಹುಲ್ ಮುಈನ್ ಗ್ರಂಥಗಳನ್ನು ತಂದೆಯ ಬಳಿಯಿಂದಲೇ ಕಲಿತುಕೊಂಡರು.ನಂತರ ತಂದೆಯ ಆಪ್ತ ಪಂಡಿತರೂ,ಸೂಪಿವರ್ಯರೂ ಆದ ಕೋಡುಂಬಝ ಬೀರಾನ್ ಮುಸ್ಲಿಯಾರ್ ರವರ ದರ್ಸ್ ಗೆ ಸೇರಿ ಅವರ ಶಿಷ್ಯತ್ವ ವನ್ನು ಸ್ವೀಕರಿಸಿದರು.ಸುಮಾರು ಎಂಟು ವರ್ಷಗಳ ಕಾಲ ಬೀರಾನ್ ಉಸ್ತಾದ್ ರಿಂದ ವಿಧ್ಯಾರ್ಜನೆ.
1983 ರಲ್ಲಿ ತಮಿಳುನಾಡಿನ ಪ್ರತಿಷ್ಠಿತ ವಿಧ್ಯಾಕೇಂದ್ರ ವೆಲ್ಲೂರ್ ಬಾಖಿಯಾತ್ ನಿಂದ ಬಾಖವಿ ಪದವೀದರಾಗಿ ಬಂದರು.19ನೇ ವಯಸ್ಸಿನಲ್ಲಿ ತಾಜುಲ್ ಉಲಮಾರವರ ಸುಪುತ್ರಿ ಹಲೀಮ ಮುತ್ತು ಬೀವಿರವರ ಮಗಳು ಉಮ್ಮುಹಾನಿಯವರೂಂದಿಗೆ ದಾಂಪತ್ಯ ಆರಂಭ.ತಂಞಳರು ಸಯ್ಯದ್ ಅಬ್ದುಲ್ ರಹಿಮಾನ್ ಶಹೀರ್ ಅಲ್ ಬುಖಾರಿ ,ಎಂಬ ಒರ್ವ ಪುತ್ರ ಹಾಗೂ ರಫೀಧ ಬೀವಿ,ಶಮೀಮಾ ಬೀವಿ,ನಶೀಫಾ ಬೀವಿ ಎಂಬ ಮೂರು ಪುತ್ರಿಯವರನ್ನು ಹೊಂದಿದ್ದಾರೆ.
ಇವರೆಲ್ಲರೂ ಬುಖಾರಿ ವಂಶಕ್ಕೆ ಒಳಪಟ್ಟವರು. ಸುಮಾರು ಆರು ಶತಮಾನಗಳ ಹಿಂದೆ ಹಿಜಿರ 800ರಲ್ಲಿ ರಷ್ಯದ ಬುಖಾರದಿಂದ ಭಾರತದ ಕೇರಳದ ಕಣ್ಣೂರ್ ಜಿಲ್ಲೆಯ ವಳಪಟ್ಟಣಂ ಎಂಬಲ್ಲಿಗೆ ಬಂದ ಸಯ್ಯದ್ ಜಲಾಲುದ್ದೀನ್ ಅಲ್ ಬುಖಾರಿ ಎಂಬವರ ಮೂಲಕ ದಕ್ಷಿಣ ಭಾರತದಲ್ಲಿ ಬುಖಾರಿ ಕುಟುಂಬವು ಪರಂಪರೆಯಾಯಿತು.
ತಂದೆಯ ಆಶಿರ್ವಾದ ಭರಿತ ಮಾತು ಹಲವಾರು ಬದಲಾವಣೆಗೆ ನಾಂದಿಯಾಯಿತು.ಬಾಖಿಯಾತ್ ನಿಂದ ಪದವೀದರಾಗಿ ಬಂದನಂತರ ಮಲಪ್ಪುರಂ ಜಿಲ್ಲೆಯ ಪಡಿಕೋಟಪಡಿ ಎಂಬಲ್ಲಿ ಒಂದು ವರ್ಷ ಮತ್ತು ಆಕೋಡ್ ನಲ್ಲಿ ಒಂದು ವರ್ಷ ದರ್ಸ್ ಸೇವೆ ಸಲ್ಲಿಸಿದರು. ನಂತರ ತಾಜುಲ್ ಉಲಮಾ ಉಳ್ಳಾಲ್ ತಂಙಳ್ ಖಾಝಿಯಾಗಿದ್ದ ಪೊಸೋಟ್ ಜುಮಾ ಮಸೀದಿಯಲ್ಲಿ ಸುಧೀರ್ಘ ಕಾಲ ದರ್ಸ್ ನಡೆಸುವ ಮೂಲಕ ಕಡಲುಂಡಿ ಪ್ರದೇಶದವರಾದ ಉಸ್ತಾದರು “ಪೊಸೋಟ್ ತಂಙಳ್ “ಎಂಬ ನವನಾಮದಲ್ಲಿ ಪ್ರಖ್ಯಾತಿ ಹೊಂದಿದರು.
ತಾಜುಲ್ ಉಲಮಾರ ಆಶಿರ್ವಾದ ಮತ್ತು ಜಮಾಅತರ ಸಹಕಾರದೂಂದಿಗೆ ದರ್ಸ್ ಅಭಿವೃದ್ದಿ ಹೊಂದಿತು.ಕೇರಳ ಮತ್ತು ಕರ್ನಾಟಕದ ಹಲವಾರು ವಿಧ್ಯಾರ್ಥಿಗಳು ದರ್ಸ್ ನಲ್ಲಿದ್ದರು.ಪ್ರಸ್ತುತ ದರ್ಸ್ ಮುಂದೆ ಸಾಗುತ್ತಿದ್ದರೂ, ಸ್ವಂತವಾದ ಸಂಸ್ಥೆ ಸ್ಥಾಪಿಸಲು ಮುಂದಾದರು. ಓ.ಕೆ ಉಸ್ತಾದರ ಆಶಿರ್ವಾದದಿಂದ 2000 ಇಸವಿಯಲ್ಲಿ ತಾಜುಲ್ ಉಲಮಾ ತಂಙಳರು ಶಿಲಾನ್ಯಾಸ ಗೈಯ್ಯುವ ಮೂಲಕ 25 ವಿಧ್ಯಾರ್ಥಿಗಳಿಂದ ಆರಂಭಿಸಿದ ಸಂಸ್ಥೆಯು ಇಂದು ವಿವಿಧ ಕ್ಯಾಂಪಸ್ ಗಳಲ್ಲಾಗಿ ಐದು ಸಾವಿರಕ್ಕಿಂತಲೂ ಮಿಕ್ಕ ವಿಧ್ಯಾರ್ಥಿಗಳು ಧಾರ್ಮಿಕ -ಲೌಖಿಕ ಶಿಕ್ಷಣ ಪಡೆಯುತ್ತಿದ್ದಾರೆ.
ಸರ್ವಶಕ್ತನು ಇನ್ನಷ್ಟು ಸಂಸ್ದೆಯನ್ನು ಉನ್ನತಿಗೇರಿಸಲಿ….
ಶೈಖುನಾ ತಂಙಳುಸ್ತಾದರು 2015 ಸೆಪ್ಟಂಬರ್ ನಲ್ಲಿ ನಮ್ಮಿಂದಗಲಿದರು.ಕೋವಿಡ್19 ರ ಪರಿಸ್ಥಿತಿ ಯಲ್ಲಿ ಪ್ರತಿಯೂಂದು ಮನೆಗಳಲ್ಲಿ ಅನುಸ್ಮರಣೆ ನಡೆಸಲು ನಾವು ಸಿದ್ದರಾಗೋಣ….
✍️ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಬಳ್ಳಾರಿ.