janadhvani

Kannada Online News Paper

ತ್ಯಾಗ ಬಲಿದಾನದ ಹಿನ್ನೆಲೆ ಇರುವ ಬಕ್ರೀದ್ ಹಬ್ಬವು ಆಗಮಿಸಿದೆ.ಮುಸಲ್ಮಾನರು ಆಚರಿಸುವ ಹಬ್ಬಗಳಲ್ಲಿ ಪ್ರಮುಖ ಹಬ್ಬವಾಗಿದೆ ಬಕ್ರೀದ್.

ಈ ಹಬ್ಬದ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ, ಪೋಷಕರು, ಮಕ್ಕಳು ಹಾಗೂ ಕುಟುಂಬಸ್ತರ ಆಶೀರ್ವಾದ ಪಡೆದು, ಸ್ನೇಹಿತರ, ಕುಟುಂಬಸ್ತರ ಮನೆಗಳಿಗೆ ಭೇಟಿ ನೀಡಿ ಜೊತೆಯಾಗಿ ಬಹಳ ಅರ್ಥಪೂರ್ಣವಾಗಿ ಆಚರಿಸುವ ಹಬ್ಬವಾಗಿದೆ ಬಕ್ರೀದ್.

ತಮ್ಮದೇ ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯಲ್ಲಿ ಸಂಕಷ್ಟದ ಜೀವನ ನಡೆಸುತ್ತಿರುವವರಿಗೆ ಸಹಾಯ ಮಾಡುತ್ತಾ ಅವರೊಂದಿಗೆ ಹಬ್ಬ ಆಚರಿಸುವುದೇ ನಿಜವಾದ ಬಕ್ರೀದ್. ಈ ಸಂದರ್ಭದಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳ, ಲಕ್ಷಾಂತರ ಮುಸಲ್ಮಾನರು ಒಂದೆಡೆ ಸೇರಿ ಹಜ್ ಯಾತ್ರೆಯ ಮೂಲಕ, ಕಅಬಾಲಯದ ಸಮ್ಮುಖದಲ್ಲಿ ಇಹಲೋಕ ಶಾಂತಿ ಹಾಗೂ ಪರಲೋಕ ಶಾಂತಿಗಾಗಿ ಏಕಕಾಲದಲ್ಲಿ ಪ್ರಾರ್ಥನೆ ನಡೆಸುವುದು ಕೂಡ ಮುಸ್ಲಿಂ ಸಮುದಾಯದ ಬಕ್ರೀದ್ ಆಚರಣೆಯ ಪ್ರಮುಖ ಸಂದರ್ಭ ಕೂಡ ಆಗಿದೆ.

ಆದರೆ ಈ ಬಾರಿಯ ಬಕ್ರೀದ್ ಅನೇಕ ವಿಶೇಷತೆಗಳೊಂದಿಗೆ ಆಗಮನವಾಗಿದೆ. Covid19 ಮನುಕುಲವನ್ನೇ ಸಂಕಷ್ಟಕ್ಕೆ ದೂಡಿರುವ ಈ ಸಂಧರ್ಭದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಬಹಳ ದೊಡ್ಡ ಜವಾಬ್ದಾರಿ ಕೂಡ ಇದೆ. ಸರಕಾರ ಹಾಗೂ ಆರೋಗ್ಯ ಇಲಾಖೆಯ ನೀತಿ ನಿಯಮಗಳನ್ನು ಪಾಲಿಸಿ, ಎಲ್ಲರೂ ಸುರಕ್ಷಿತರಾಗಿ ಇರುವ ಹಾಗೆ, ಸರಕಾರದ ಆದೇಶ ಪಾಲಿಸುತ್ತಾ, ಸಾಮೂಹಿಕ ಪ್ರಾರ್ಥನೆಯಲ್ಲಿ ಗೊಂದಲಗಳಿಗೆ ಅವಕಾಶ ಮಾಡಿಕೊಡದೆ, ಸಾಮಾಜಿಕ ಅಂತರ ಪಾಲಿಸಿ ಪ್ರಾರ್ಥನೆ ಸಲ್ಲಿಸುವ, ಹಾಗೂ ಇತರರಿಗೆ ತೊಂದರೆ ಆಗದ ರೀತಿಯಲ್ಲಿ ತಮ್ಮ ತಮ್ಮ ಮನೆಗಳಲ್ಲಿಯೇ ಇದ್ದು ಬಹಳ ಸರಳ ಹಾಗೂ ಎಚ್ಚರಿಕೆಯಿಂದ ಹಾಗೂ ಸಮಾಜಕ್ಕೆ ಮಾದರಿ ಯಾಗಿ, ಬಕ್ರೀದ್ ಆಚರಣೆ ಮಾಡಬೇಕಾದ ಸಂದರ್ಭ ಒದಗಿ ಬಂದಿದೆ.

ಹಾಗೆಯೇ ಈ ಹಬ್ಬದ ಸಂಧರ್ಭದಲ್ಲಿ ISLAMIC ಪರಂಪರೆಯ ಅನುಸಾರವಾಗಿ ಉಲುಹಿಯ್ಯತ್( ಬಲಿ ಸಮರ್ಪಣೆ) ಮಾಡುವ ಸಂಪ್ರದಾಯ ಕೂಡ ಇದೆ…. ಈ ವಿಶೇಷ ಸಂಪ್ರದಾಯಕ್ಕೆ ಇಸ್ಲಾಂ ಚರಿತ್ರೆಯಲ್ಲಿ ಪ್ರಮುಖ ಸ್ಥಾನ ಇದೆ. ಹಾಗೂ ಈ ಬಾರಿಯ ಉಲುಹಿಯ್ಯತ್( ಬಲಿ ಸಮರ್ಪಣೆ) ಸರಕಾರ ಹಾಗೂ ಆರೋಗ್ಯ ಇಲಾಖೆಯ ಶಿಷ್ಟಾಚಾರಗಳನ್ನು ಪಾಲಿಸಿಯೇ ನಡೆಸಬೇಕೆಂದು, ಮುಸ್ಲಿಂ ವಿದ್ವಾಂಸರು, ಸಮಸ್ತ ನೇತಾರರು ಹಾಗೂ ಧಾರ್ಮಿಕ ಮುಖಂಡರುಗಳು ಸಮುದಾಯ ಬಾಂಧವರಲ್ಲಿ ಈಗಾಗಲೇ ಮನವಿ ಮಾಡಿಕೊಂಡಿರುತ್ತಾರೆ ಹಾಗೂ ಅದನ್ನು ಪಾಲಿಸುವ ಜವಾಬ್ದಾರಿ ಕೂಡ ಮುಸ್ಲಿಂ ಸಮುದಾಯದ ಆದ್ಯ ಕರ್ತವ್ಯವಾಗಿದೆ.

ಭಾರತೀಯ ಮುಸಲ್ಮಾನರ 2020 ರ ಪವಿತ್ರ ಹಜ್ ಯಾತ್ರೆಯ ಕನಸು ಭಗ್ನ ಗೊಳಿಸಿದ covid-19

ಮುಸ್ಲಿಂ ಸತ್ಯವಿಶ್ವಾಸಗಳ ಬಹುದೊಡ್ಡ ಕನಸಾಗಿರುವ ಪವಿತ್ರ ಹಜ್ ಯಾತ್ರೆಯ ಮೇಲೆ ಈ ವರ್ಷ ಬಹುದೊಡ್ಡ ಕಾರ್ಮೋಡ ಕವಿದಿದೆ. ಕೊರೊನಾ ಎಂಬ ಮಹಾಮಾರಿ ಇಡೀ ವಿಶ್ವಕ್ಕೆ ಆವರಿಸಿ ಮನುಕುಲವನ್ನು ನಿಬ್ಬೆರಗಾಗಿಸಿದೆ….!

ಪವಿತ್ರ ಹಜ್ ಯಾತ್ರೆಯ ಸಂಪೂರ್ಣ ಆತಿಥ್ಯವಹಿಸುವ ಸೌದಿ ಅರೇಬಿಯಾ ದೇಶ ಹಾಗೂ ಸರಕಾರ, COVID-19 ಮಹಾಮಾರಿಯ ಸಾಮೂಹಿಕ ಹರಡುವಿಕೆಯನ್ನು ತಡೆಯುವ ಸಲುವಾಗಿ ಈ ವರ್ಷದ ಹಜ್ ಯಾತ್ರೆಯನ್ನು ಪ್ರಪಂಚದ ಇತರ ಎಲ್ಲಾ ದೇಶಗಳಿಗೆ ತಡೆ ಹಿಡಿದಿದೆ. ಹಾಗೂ ತನ್ನ ದೇಶದ ನಿರ್ದಿಷ್ಟ ನಾಗರಿಕರಿಗೆ ಹಜ್ ಕರ್ಮದ ಅನುಮತಿ ನೀಡಿದೆ. ಈ ಆದೇಶ ವಿಶ್ವ ಮುಸ್ಲಿಮರಿಗೆ ನುಂಗಲಾರದ ತುತ್ತಾದರೂ ಕೂಡ, ಕೊರೊನ ಮಹಾಮಾರಿಯ ಪರಿಣಾಮದಿಂದ ಆದೇಶ ಸ್ವೀಕರಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ಸತ್ಯ ವಿಶ್ವಾಸಿಗಳಿಗೆ ಬಂದೊದಗಿದೆ.

ಈ ಮೊದಲೇ ವಿಶ್ವದ ಬಹುತೇಕ ರಾಷ್ಟ್ರಗಳು ತಮ್ಮ ದೇಶದ ನಾಗರಿಕರಿಗೆ COVID19 ನಿಯಂತ್ರಣ ಮಾಡುವ ಸಲುವಾಗಿ ಈ ವರ್ಷದ ಹಜ್ ಯಾತ್ರೆಗೆ ತಡೆ ನೀಡಿತ್ತು, ಹಾಗೂ ಪ್ರಮುಖ ಮುಸ್ಲಿಂ ರಾಷ್ಟ್ರಗಳಾಗಿರುವ UAE, ಒಮಾನ್, ಕುವೈತ್, ಬಹರೈನ್, ಈಜಿಪ್ಟ್, ಇಂಡೋನೇಷ್ಯಾ ಹಾಗೂ ಇನ್ನಿತರ ಮುಸ್ಲಿಂ ರಾಷ್ಟ್ರಗಳು ತಮ್ಮ ನಾಗರಿಕರಿಗೆ 2020 ಹಜ್ ಯಾತ್ರೆ ನಿಷೇಧಿಸಿ ಆದೇಶ ಹೊರಡಿಸಿದ್ದು ಹಾಗೂ ಹಜ್ ಯಾತ್ರೆಯಲ್ಲಿ ಪ್ರಮುಖ ಪಾಲು ಪಡೆಯುವ ಭಾರತ ದೇಶದ ಮುಸಲ್ಮಾನರಲ್ಲಿ ಕೂಡ ದುಃಖ ಸಹಜವಾಗಿ ಮಡುಗಟ್ಟಿದೆ.

ISLAMIC ಕ್ಯಾಲೆಂಡರ್ ಪ್ರಕಾರ DHUL HAJJ ತಿಂಗಳಿನಲ್ಲಿಯೇ (ವರ್ಷದ ನಿರ್ದಿಷ್ಟ ತಿಂಗಳು) ಪವಿತ್ರ ಹಜ್ ಪ್ರಕ್ರಿಯೆ ನಿರ್ವಹಿಸಬೇಕಾಗಿರುವ ಹಿನ್ನೆಲೆಯಲ್ಲಿ, ಈ ವರ್ಷದ ಹಜ್ covid-19 ಕಾರಣದಿಂದ ಸೌದಿ ಅರೇಬಿಯಾ ದೇಶ ಹೊರತು ಪಡಿಸಿ, ಭಾರತ ಹಾಗೂ ವಿಶ್ವ ಮುಸ್ಲಿಂರಿಗೆ ಅಸಾಧ್ಯವಾಗಿದೆ. ಹಾಗೂ ಮುಂದಿನ ವರ್ಷದ Dhul hajj ಮಾಸದವರೆಗೆ, ಕನಿಷ್ಠ 1 ವರ್ಷಗಳವರೆಗೂ ಇನ್ನು ಕಾಯಬೇಕಾಗಿದೆ.

ಪವಿತ್ರ ಹಜ್ ಯಾತ್ರೆಯಲ್ಲಿ ಪ್ರಮುಖ ಪಾತ್ರವಹಿಸುವ ಭಾರತೀಯ ಮುಸಲ್ಮಾನರು, ಈಗಾಗಲೇ 3 ಲಕ್ಷಕ್ಕೂ ಅಧಿಕ ಮಂದಿ ಸರಕಾರಿ ಹಾಗೂ ಇನ್ನಿತರ ಸಂಸ್ಥೆ ಗಳಲ್ಲಿ ತಮ್ಮ ಯಾತ್ರೆಯ ರಿಜಿಸ್ಟರ್ ಮಾಡಿ ಹಣ ಪಾವತಿಸಿಯೂ ಕೂಡ ಆಗಿದೆ. ಸೌದಿ ಸರಕಾರವು ವಿಶ್ವದ ಎಲ್ಲಾ ರಾಷ್ಟ್ರಗಳಿಗೆ covid-19 ಕಾರಣದಿಂದ ಹಜ್ ಯಾತ್ರೆಗೆ ನಿರ್ಬಂಧ ವಿಧಿಸಿ ಅಧಿಕೃತ ನಿಲುವು ಪ್ರಕಟಿಸಿದ ಹಿನ್ನೆಲೆಯಲ್ಲಿ, ಸರಕಾರಿ ಸಂಸ್ಥೆಗಳಲ್ಲಿ ಯಾತ್ರೆಯ ಹಣ ಪಾವತಿಸಿದವರಿಗೆ, ಹಣ ವಾಪಸ್ ಮಾಡುವ ಭರವಸೆ ಭಾರತ ಸರಕಾರ ನೀಡಿದೆ. ಪವಿತ್ರ ಹಜ್ ಯಾತ್ರೆ ನಿರ್ವಹಿಸಿ ತಮ್ಮ ಇಹಲೋಕ, ಪರಲೋಕ ಜೀವನ ಪಾವನಗೊಳಿಸ ಬೇಕೆಂಬ ಈ ವರ್ಷದ ಕನಸು ಕನಸಾಗಿಯೇ ಉಳಿದಿದೆ.

ಈ ಕೊರೊನ ಮಹಾಮಾರಿಯು ಆದಷ್ಟು ಬೇಗನೆ ನಿಯಂತ್ರಣಕ್ಕೆ ಬಂದು, ಜನ ಜೀವನ ಸಾಧಾರಣ ಸ್ಥಿತಿಗೆ ತಲುಪಿ, ನಮ್ಮ ನಿಮ್ಮೆಲ್ಲರ ಪವಿತ್ರ ಹಜ್ ಯಾತ್ರೆಯ ಕನಸು ಆದಷ್ಟು ಬೇಗನೆ ನನಸಾಗಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸೋಣ. ಹಾಗೂ covid19 ಮಹಾಮಾರಿ ನಿಯಂತ್ರಣಕ್ಕೆ ಬಂದು ಎಲ್ಲರೂ ಮುಂಚಿನ ಹಾಗೇ ನೆಮ್ಮದಿಯ ಬದುಕು ಸಾಗಿಸಲು ಭಗವಂತ ಅನುಗ್ರಹಿಸಲಿ ಎಂದು, ಹಾಗೂ ನಾಡಿನ ಸಮಸ್ತ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯ ಕೊರುತ್ತಾ,
ಈ ತ್ಯಾಗ ಬಲಿದಾನದ ಹಬ್ಬ ಬಕ್ರೀದ್ ಸಂದರ್ಭದಲ್ಲಿ ಒಟ್ಟಾಗಿ ವಿಶ್ವ ಶಾಂತಿಗಾಗಿ, ಹಾಗೂ covid ಮುಕ್ತ ವಿಶ್ವಕ್ಕಾಗಿ ಪ್ರಾರ್ಥನೆ ನಡೆಸೋಣ.

🖋️ಅಬ್ದುಲ್ ರಜ಼ಾಕ್. ಬಜೆಗುಂಡಿ. Abudhabi.

error: Content is protected !!
%d bloggers like this: