janadhvani

Kannada Online News Paper

ಬಕ್ರೀದ್ ಆಚರಣೆಗೆ ಸಹಕರಿಸಿದ ಪೊಲೀಸ್ ಇಲಾಖೆಗೆ ಅಭಿನಂದನೆ

ಚಿಕ್ಕಮಗಳೂರು, ಜು.1: ಇಂದು ನಡೆದ ಬಕ್ರೀದ್ ಹಬ್ಬಾಚರಣೆಗೆ ಸಂಪೂರ್ಣ ಸಹಕಾರ ನೀಡಿದ ಪೊಲೀಸ್ ಇಲಾಖೆಗೆ ವಿಶೇಷವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೀ ಅಕ್ಷಯ್ ಮಚಿಂದ್ರ ರವರಿಗೆ ಜಾಮಿಯಾ ಅರೇಬಿಯಾ ಕಂಜುಲ್ ಇಮಾನ್ ಸಂಸ್ಥೆಯ ಅಧ್ಯಕ್ಷರು ಹಾಗು ಕರ್ನಾಟಕ ಮುಸ್ಲಿಂ ಜಮಾತ್ ಜಿಲ್ಲಾ ಅಧ್ಯಕ್ಷರು ಆದ ಹಾಜಿ ಮುಹಮ್ಮದ್ ಶಾಹಿದ್ ರವರು ಧನ್ಯವಾದ ಅರ್ಪಿಸಿದರು.

ಬಕ್ರೀದ್ ಆಚರಣೆಗೆ ಸಂಬಂಧಿಸಿದಂತೆ ಶನಿವಾರ ಬೆಳಿಗ್ಗೆ 7.30 ಕ್ಕೆ ಮತ್ತು 8.00 ಕ್ಕೆ ನಗರದ ಜಾಮಿಯಾ ಕಂಜುಲ್ ಇಮಾನ್ ಸಂಸ್ಥೆಯ ಅಧೀನದಲ್ಲಿರುವ ಸಲಾಂ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಸಂಪೂರ್ಣ ಸಹಕಾರ ಹಾಗು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿ ಮುಕ್ತ ಪ್ರಾರ್ಥನೆಗೆ ಶಾಂತಿ ಹಾಗು ಸುವ್ಯವಸ್ಥೆಯಿಂದ ಅನುವು ಮಾಡಿಕೊಡುವ ಮೂಲಕ ಮುಸ್ಲಿಂ ಬಾಂಧವರಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಶ್ರೀ ಅಕ್ಷಯ್ ಮಾಚಿಂದ್ರ ರವರಿಗೆ ಚಿಕ್ಕಮಗಳೂರು ಸುನ್ನಿ ಸಂಘ ಸಂಸ್ಥೆಗಳು ಸಹ ಅಭಿನಂದನೆಗಳನ್ನು ಸಲ್ಲಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಸರ್ವಧರ್ಮ ಪ್ರೇಮಿ ಅಧಿಕಾರಿಯಾಗಿ ಎಲ್ಲ ಧರ್ಮದವರ ಪ್ರೀತಿ ಗಿಟ್ಟಿಸಿಕೊಂಡಿರುವ ಎಸ್ ಪಿ ರವರು ನಮ್ಮ ಜಿಲ್ಲೆಯಲ್ಲಿ ಸದಾ ಕಾಲ ಇರಬೇಕೆಂದು ಬಯಸುವುದಾಗಿ ಪ್ರಧಾನ ಕಾರ್ಯದರ್ಶಿ ಹಾಜಿ ಫೈರೋಜ್ ಅಹಮದ್ ರಜ್ವೀ ರವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.