janadhvani

Kannada Online News Paper

ಮಂಗಳೂರು : SKSSF ವಿಖಾಯ ಮಂಗಳೂರು ವಲಯದ ಕರೆಯಮೇರೆಗೆ ವಿಖಾಯ ವಳಚ್ಚಿಲ್ ಶಾಖೆಯ ಕಾರ್ಯಕರ್ತರು ಇಂದು ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರಿ ಯಾತ್ರಿಕರು ಹಾಗೂ ಕೂಲಿ ಕಾರ್ಮಿಕರು ಮತ್ತು ರಸ್ತೆ ಬೀದಿಯಲ್ಲಿ ಇದ್ದಂತಹ ಸುಮಾರು ಮುನ್ನೂರಷ್ಟು ಜನರಿಗೆ ಬಕ್ರೀದ್ ಹಬ್ಬದ ವಿಶೇಷ ಮದ್ಯಾಹ್ನದ ಊಟ ವಿತರಿಸುವ ಮೂಲಕ ಮಾನವೀಯ ಸೇವೆಯನ್ನು ಮಾಡಿದ್ದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಬಕ್ರೀದ್ ನ ಹಬ್ಬದ ಸಡಗರದ ಸಮಯದಲ್ಲೂ ಇನ್ನೂಬ್ಬರ ಹಸಿವನ್ನು ನೀಗಿಸಲು ಇನ್ನೊಬ್ಬರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದ ಯುವಪಡೆಯ ಸಮಾಜಮುಖಿ ಕಾರ್ಯ ನಿಜಕ್ಕೂ ಪ್ರಶಂಶನೀಯ, ಈ ಮಹತ್ಕಾರ್ಯಕ್ಕೆ ಸಹಾಯ ಸಹಕಾರ ನೀಡಿದ SKSSF ವಿಖಾಯ ವಳಚ್ಚಿಲ್ ಯೂನಿಟ್ ನ ನಿಷ್ಠಾವಂತ ಕಾರ್ಯಕರ್ತರಿಗೂ ಹಾಗೂ ಕೈ ಜೋಡಿಸಿದ SKSSF ವಿಖಾಯ ಕುದ್ರೋಳಿ ಯೂನಿಟ್ ನ ಕಾರ್ಯಕರ್ತರಿಗೆ ವಳಚ್ಚಿಲ್ ಶಾಖಾ ಸದಸ್ಯರು ಧನ್ಯವಾದ ಸಲ್ಲಿಸಿದ್ದಾರೆ.

error: Content is protected !!
%d bloggers like this: