janadhvani

Kannada Online News Paper

ಬದ್ರಿಯಾ ಗಲ್ಫ್ ಅಸೋಸಿಯೇಷನ್ ಶನಿವಾರಸಂತೆ: ನಿತ್ಯೋಪಯೋಗಿ ಕಿಟ್ ವಿತರಣೆ

ಶನಿವಾರಸಂತೆ: ಬದ್ರಿಯಾ ಗಲ್ಫ್ ಅಸೋಸಿಯೇಷನ್ ವತಿಯಿಂದ ಶನಿವಾರಸಂತೆ ಹೋಬಳಿಯ ಗುಂಡುರಾವ್ ಬಡಾವಣೆ ಯಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದವರಿಗೆ ಕಿಟ್ ವಿತರಿಸಲಾಯಿತು.

COVID-19 ಪರಿಣಾಮವಾಗಿ, ಕಳೆದ 24 ದಿನಗಳಿಂದ ಗ್ರಾಮ ಸೀಲ್ಡೌನ್ ಆದ ಕಾರಣದಿಂದ ಸಂಕಷ್ಟದಲ್ಲಿ ಸಿಲುಕಿದ್ದ ಗುಂಡುರಾವ್ ಬಡಾವಣೆಯ ಗ್ರಾಮಸ್ಥರಿಗೆ, ಶನಿವಾರಸಂತೆಯ ಅನಿವಾಸಿ ಯುವಕರ ತಂಡದ ಕ್ಷಿಪ್ರ ಕಾರ್ಯಾಚರಣೆಯ ಪರಿಣಾಮವಾಗಿ ಇಂದು ಗ್ರಾಮದ ಹಿರಿಯ ಮುಖಂಡರಾದ ಶೇಕಬ್ಬಾ ಹಾಜಿ ಹಾಗೂ ಹಸೈನಾರ್ ಉಸ್ತಾದ್ ರವರ ನೇತೃತ್ವದಲ್ಲಿ ನೊಂದ ಕುಟುಂಬಗಳಿಗೆ ನಿತ್ಯೋಪಯೋಗಿ ವಸ್ತುಗಳ ಕಿಟ್ ಒದಗಿಸಿಕೊಡಲಾಯಿತು.

ಬದ್ರಿಯಾ ಗಲ್ಫ್ ಅಸೋಸಿಯೇಷನ್ ಶನಿವಾರಸಂತೆ, ಅನಿವಾಸಿ ಯುವಕರ ತಂಡದ ಈ ನಿಸ್ವಾರ್ಥ ಸೇವೆಗೆ ಬಹಳ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ಮತ ಭೇದ ಮರೆತು ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಯುವಕರ ತಂಡದ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಿ, ಇನ್ನೊಬ್ಬರಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದ್ದಾರೆ.

error: Content is protected !! Not allowed copy content from janadhvani.com