janadhvani

Kannada Online News Paper

ಎಲ್ಲಾ ವೀಸಾ ವಿನಾಯ್ತಿ ಕಾನೂನು ರದ್ದು- ದಂಡ ವಿಧಿಸಲು ಅನುಮೋದನೆ

ಅಬುಧಾಬಿ: ಕೋವಿಡ್ ಹಿನ್ನೆಲೆಯಲ್ಲಿ ತರಲಾಗಿದ್ದ ವೀಸಾ ಕಾನೂನಿನ ಬದಲಾವಣೆಗಳನ್ನು ಯುಎಇ ತಿದ್ದುಪಡಿ ಘೋಷಿಸಿದೆ.ಜುಲೈ 12 ರಿಂದ ವೀಸಾ ಸಂಬಂಧಿತ ಶುಲ್ಕ ಮತ್ತು ದಂಡ ವಿಧಿಸಲು ಸಂಪುಟ ಅನುಮೋದನೆ ನೀಡಿದೆ.

ಆರು ತಿಂಗಳಿಗಿಂತ ಹೆಚ್ಚು ಕಾಲ ದೇಶದಿಂದ ಹೊರಗಿರುವ ಯುಎಇ ನಿವಾಸ ವಿಸಾ ಹೊಂದಿರುವವರಿಗೆ ಹಿಂದಿರುಗಲು ಮತ್ತು ಅವರ ದಾಖಲೆಗಳನ್ನು ಸರಿಪಡಿಸಲು ಗ್ರೇಸ್ ಅವಧಿಯನ್ನು ನೀಡಲಾಗುವುದು.

ಕೋವಿಡ್ ಆತಂಕದಿಂದ ಮುಕ್ತಿ ಹೊಂದಿ, ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಕಾರಣ ವೀಸಾ ನಿಯಮಗಳಲ್ಲಿ ಘೋಷಿಸಲಾದ ಬದಲಾವಣೆಗಳನ್ನು ತಿದ್ದುಪಡಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಜನ್ಶಿಪ್ ಟ್ವೀಟ್ ಮಾಡಿದ್ದು, ವಲಸಿಗರ ನಿವಾಸ ವೀಸಾಗಳು, ಪ್ರವೇಶ ಪರವಾನಗಿಗಳು ಮತ್ತು ಗುರುತಿನ ಚೀಟಿಗಳಿಗೆ ಸಂಬಂಧಿಸಿದಂತೆ ಘೋಷಿಸಲಾದ ಎಲ್ಲಾ ನಿರ್ಧಾರಗಳನ್ನು ನಾಳೆಯಿಂದ ರದ್ದು ಗೊಳಿಸಲಾಗುವುದು.

ಮಾರ್ಚ್ 1 ರೊಳಗೆ ತಮ್ಮ ವೀಸಾ ಅವಧಿ ಮುಗಿದು ದೇಶದಿಂದ ಹೊರಗಿರುವ ವಲಸಿಗರಿಗೆ ಮತ್ತು ಆರು ತಿಂಗಳಿಗಿಂತ ಹೆಚ್ಚು ಕಾಲ ಯುಎಇ ಹೊರಗೆ ಉಳಿದುಕೊಂಡಿರುವವರಿಗೆ ಗ್ರೇಸ್ ಪೀರಿಯಡ್ ಅವಕಾಶ ನೀಡಲಾಗುವುದು.

ಉಭಯ ದೇಶಗಳ ನಡುವೆ ವಿಮಾನಯಾನ ಪ್ರಾರಂಭವನ್ನು ಆಧರಿಸಿ ಗ್ರೇಸ್ ಅವಧಿ ನಿರ್ಧರಿಸಲಾಗುವುದು. ಈ ಅವಧಿಯಲ್ಲಿ ಹಿಂದಿರುಗಿದವರಿಗೆ ದಂಡಗಳು ಅನ್ವಯಿಸುವುದಿಲ್ಲ. ಆದಾಗ್ಯೂ, ಇತರ ಅಡ್ಮಿನಿಸ್ಟ್ರೇಟ್ ಶುಲ್ಕಗಳು ಮತ್ತು ದಂಡಗಳು ಜುಲೈ 11 ರಿಂದ ಜಾರಿಗೆ ಬರಲಿವೆ.

ದೇಶದಲ್ಲಿರುವ ನಿವಾಸಿಗಳಿಗೆ ದಾಖಲೆಗಳನ್ನು ಸರಿಪಡಿಸಲು ಮೂರು ತಿಂಗಳು ಮತ್ತು ಆರು ತಿಂಗಳಿಗಿಂತ ಕಡಿಮೆ ದೇಶದ ಹೊರಗಿರುವವರಿಗೆ ಒಂದು ತಿಂಗಳು ದಾಖಲೆಗಳನ್ನು ಸರಿಪಡಿಸಲು ಗ್ರೇಸ್ ಅವಧಿ ನೀಡಲಾಗುವುದು.

ಹೊಸ ತಿದ್ದುಪಡಿ, ಡಿಸೆಂಬರ್ ವರೆಗೆ ವೀಸಾಗಳನ್ನು ವಿಸ್ತರಿಸಿರುವ ಸಂದರ್ಶಕ ವಿಸಾ ಹೊಂದಿರುವವರಿಗೆ ಅನ್ವಯವಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

error: Content is protected !! Not allowed copy content from janadhvani.com