janadhvani

Kannada Online News Paper

ಗುರುಪುರ: ಗುಡ್ಡ ಕುಸಿತ ಸ್ಥಳಕ್ಕೆ SYS ಜಿಲ್ಲಾ ನಾಯಕರ ಭೇಟಿ

ಗುರುಪುರ: ಇಲ್ಲಿನ ಬಂಗ್ಲಗುಡ್ಡೆ ಎಂಬಲ್ಲಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಸ್ಥಳವನ್ನು ಸುನ್ನೀ ಯುವಜನ ಸಂಘ ದಕ್ಷಿಣ ಕನ್ನಡ ಸಮಿತಿ ನಾಯಕರು ಸಂದರ್ಶಿಸಿದರು.

ಘಟನಾ ಸ್ಥಳವನ್ನು ವೀಕ್ಷಿಸಿದ ನಾಯಕರು ತೀವ್ರ ದುಃಖ ವ್ಯಕ್ತಪಡಿಸಿ, ಕುಸಿತಗೊಂಡ ಸ್ಥಳದಲ್ಲಿ SYS ಟೀಂ ಇಸಾಬ ಹಾಗೂ SSF Q ಟೀಂ ತಂಡ ಎರಡನೇ ದಿನ ಕೂಡಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದು ಇವರ ಸೇವೆ ಶ್ಲಾಘನೀಯವಾಗಿದೆ ಎಂದು ಜಿಲ್ಲಾಧ್ಯಕ್ಷ ಸಿ.ಎಚ್. ಮುಹಮ್ಮದ್ ಅಲಿ ಸಖಾಫಿ ತಿಳಿಸಿದರು.

ಮೃತಪಟ್ಟ ಮಕ್ಕಳ ಪೋಷಕರು ಮತ್ತು ಇತರ ಸಂತ್ರಸ್ತರನ್ನು ಭೇಟಿಯಾಗಿ, ಸಂತಾಪ ವ್ಯಕ್ತ ಪಡಿಸಿದರು. ಸಂತ್ರಸ್ತರ ಪುನರ್ವಸತಿ ಮತ್ತಿತರ ಅಗತ್ಯ ನೆರವು ನೀಡಲು ಎಲ್ಲರೂ ಮುಂದೆ ಬರಬೇಕೆಂದು ಜಿಲ್ಲಾ ನಾಯಕರು ಜನರಲ್ಲಿ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ SYS ದ.ಕ. ಜಿಲ್ಲಾ WEST ZONE ಅಧ್ಯಕ್ಷ ಸಿ.ಎಚ್. ಮುಹಮ್ಮದಲಿ ಸಖಾಫಿ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್, ಉಪಾಧ್ಯಕ್ಷರಾದ ಎನ್.ಎಸ್ ಉಮರ್ ಮಾಸ್ಟರ್, ಬದ್ರುದ್ದೀನ್ ಅಝ್ಹರಿ ಕೈಕಂಬ, ಟೀಂ ಇಸಾಬ ಜಿಲ್ಲಾ ಕಾರ್ಯದರ್ಶಿ ಎಂ.ಕೆ.ಎಂ. ಇಸ್ಮಾಯಿಲ್ ಕಿನ್ಯ, ಜಿಲ್ಲಾ ಸದಸ್ಯ ಬಿ.ಎಚ್. ಇಸ್ಮಾಯಿಲ್ ಕೆ.ಸಿ.ರೋಡು, ಎಸ್.ಎಂ.ಎ ಕೈಕಂಬ ರೀಜನಲ್ ಅಧ್ಯಕ್ಷ ಅಬ್ದುಲ್ ಅಝೀಝ್, SYS ಕೈಕಂಬ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಬಶೀರ್, SYS ಬಂಗ್ಳೆಗುಡ್ಡೆ ಬ್ರಾಂಚ್ ಅಧ್ಯಕ್ಷ ಅಬ್ದುಲ್ ಅಝೀಝ್ ಬಂಗ್ಲೆಗುಡ್ಡೆ, ಬಂಗ್ಲೆಗುಡ್ಡೆ ಜಮಾತ್ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಮದ್, SSF ಮೂಡಬಿದ್ರೆ ಡಿವಿಷನ್ ಅಧ್ಯಕ್ಷ ರಿಯಾಝ್ ಸಅದಿ ಗುರುಪುರ, ಮರ್ಕಝ್ ವಿಂಗ್ ಬಂಗ್ಲಗುಡ್ಡೆ ಅಧ್ಯಕ್ಷ ಆಬಿದ್ ಅಲಿ ಹಾಗೂ SYS ಮತ್ತು SSF ಕಾರ್ಯಕರ್ತರು ಉಪಸ್ಥಿತರಿದ್ದರು.