ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಒಂದೇ ದಿವಸ 994 ಕೊರೋನಾ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು 1694 ಪಾಸಿಟಿವ್ ಪತ್ತೆಯಾಗಿದ್ದು ಜನತೆಯನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ.
ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ತಲಾ 97 ಪಾಸಿಟಿವ್, ಉಡುಪಿ ಮತ್ತು ಕೊಡಗು 16 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. ರಾಜ್ಯದಲ್ಲಿ ನಿನ್ನೆ ಸಾಯಂಕಾಲ 5 ರಿಂದ ಇಂದು 5 ರವರೆಗೆ ಒಟ್ಟು 21 ಮರಣ ಸಂಭವಿಸಿದ್ದು ದ ಕ ಜಿಲ್ಲೆಯಲ್ಲಿ ಸಾಯಂಕಾಲದ ಬಳಿಕ ಒಂದು ಮರಣ ಸಂಭವಿಸಿದೆ.
ರಾಜ್ಯದಲ್ಲಿ ಒಟ್ಟು 19,710 ಸೋಂಕಿತರು ಪತ್ತೆಯಾಗಿದ್ದು ಇದರಲ್ಲಿ 8805 ಮಂದಿ ಪೂರ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 10,608 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಯಲ್ಲಿದ್ದಾರೆ.