ಬೆಂಗಳೂರು: ಕೋವಿಡ್ 19 ಕೊರೋಣ ವೈರಸ್ ತಡೆಕಟ್ಟುವ ಉದ್ದೇಶದಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಶಾಲೆ, ಮದ್ರಸಗಳನ್ನು ತೆರೆಯಲು ವಿಳಂಬವಾಗುತ್ತಿದ್ದು ಶಾಲಾ ಮತ್ತು ಮದ್ರಸ ಶಿಕ್ಷಕರು ಜೀವನೋಪಾಯಕ್ಕಾಗಿ ಪರದಾಡುವಂತಾಗಿದೆ. ಎಲ್ಲಾ ವಿಭಾಗದ ಕೆಲಸ ಕಾರ್ಯಗಳು ಮತ್ತೆ ಪ್ರಾರಂಭವಾಗಿದ್ದರೂ ಶಿಕ್ಷಕರಿಗೆ ದುಡಿಮೆಯೂ ಇಲ್ಲ, ಸಂಸ್ಥೆಯಲ್ಲಿ ಸಂಬಳವು ಸಿಗದೇ ಇರುವುದರಿಂದ ಮದ್ರಸದಲ್ಲಿ ಮತ್ತು ಖಾಸಗಿ ಶಾಲೆಗಳಲ್ಲಿ ಬೋಧನೆ ಮಾಡುವ ಶಿಕ್ಷಕರು ಕಂಗಾಲಾಗಿದ್ದಾರೆ.
ಸರಕಾರ ಹಲವು ವಿಭಾಗದ ಜನರಿಗೆ ಲಾಕ್ ಡೌನ್ ಸಂದರ್ಭದಲ್ಲಿ ಸಹಾಧನ ನೀಡಿದ್ದರು ಮಕ್ಕಳ ಭವಿಷ್ಯವನ್ನು ರೂಪಿಸುವ, ಸುಸಂಸ್ಕೃತರನ್ನಾಗಿ ಮಾಡುವ ಶಿಕ್ಷಕರ ಬಗ್ಗೆ ಯಾವುದೇ ಕಾಳಜಿ ವಹಿಸದೇ ಇರುವುದು ಖೇದಕರ. ಈ ನಿಟ್ಟಿನಲ್ಲಿ ಎಸ್ಸೆಸ್ಸೆಫ್ ಕರ್ನಾಟಕ ಹೆಲ್ಪ್ ಡೆಸ್ಕ್ ವತಿಯಿಂದ ಸರಕಾರದ ಮತ್ತು ಸಾರ್ವಜನಿಕರ ಗಮನ ಸೆಳೆದು ಪರಿಹಾರಧನ ಬಿಡುಗಡೆ ಮಾಡುವಂತೆ ಟ್ವಿಟರ್ ನಲ್ಲಿ
#SaveMadrasaTeachers
#SavePrivateSchoolTeachers
ಅಭಿಯಾನ ನಡೆಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.