janadhvani

Kannada Online News Paper

ಸೌದಿಯಲ್ಲಿರುವವರಿಗೆ ಮಾತ್ರ ಹಜ್ ನಿರ್ವಹಿಸಲು ಅವಕಾಶ- ಹಜ್ ಸಚಿವಾಲಯ

ರಿಯಾದ್ – ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಸೀಮಿತ ಸಂಖ್ಯೆಯ ವಿದೇಶೀಯರು ಮತ್ತು ಮೂಲ ನಿವಾಸಿಗಳಿಗೆ ಈ ವರ್ಷದ ಹಜ್ ಕರ್ಮ ನಿರ್ವಹಿಸಲು ಅವಕಾಶ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಹಜ್ ಮತ್ತು ಉಮ್ರಾ ಸಚಿವಾಲಯ ಸೋಮವಾರ ಈ ತೀರ್ಮಾನವನ್ನು ಪ್ರಕಟಿಸಿದ್ದಾಗಿ ಸೌದಿ ಗಝಟ್ ವರದಿಮಾಡಿದೆ. “ಕರೋನವೈರಸ್ ಸಾಂಕ್ರಾಮಿಕ ರೋಗದ ಮುಂದುವರಿಕೆ ಮತ್ತು ಜನದಟ್ಟಣೆ ಇರುವ ಸ್ಥಳಗಳಲ್ಲಿ ಸೋಂಕು ಹರಡುವ ಅಪಾಯದ ಬೆಳಕಿನಲ್ಲಿ, ಈ ವರ್ಷದ ಹಜ್(1441 ಹೆಚ್ / ಕ್ರಿ.ಶ 2020)ಈಗಾಗಲೇ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ವಿವಿಧ ರಾಷ್ಟ್ರೀಯತೆಗಳ ಯಾತ್ರಾರ್ಥಿಗಳು ಮತ್ತು ಸ್ಥಳೀಯರು ನಿರ್ವಹಿಸುವಂತೆ ನಿರ್ಧರಿಸಲಾಗಿದೆ.

ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಅಪಾಯಗಳಿಂದ ಮತ್ತು ಇಸ್ಲಾಂ ಧರ್ಮದ ಬೋಧನೆಗಳಿಗೆ ಅನುಗುಣವಾಗಿ, ಸಾರ್ವಜನಿಕ ಆರೋಗ್ಯವನ್ನು ಸಂರಕ್ಷಿಸುವ ದೃಷ್ಟಿಕೋನದಿಂದ ಸುರಕ್ಷಿತ ರೀತಿಯಲ್ಲಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

error: Content is protected !! Not allowed copy content from janadhvani.com