janadhvani

Kannada Online News Paper

ಇಂಡಿಯಾ ಮತ್ತು ಭಾರತ- ಖಾಯಂ ಹೆಸರು ಕುರಿತು ಇಂದು ಸುಪ್ರೀಂ ನಿರ್ಧಾರ

ನವದೆಹಲಿ: ನಮ್ಮ ದೇಶಕ್ಕೆ ಎರಡು ಹೆಸರಿದೆ. ಇಂಡಿಯಾ ಮತ್ತು ಭಾರತ ಎಂದು ಎರಡೂ ಪದಗಳು ಸದ್ಯಕ್ಕೆ ಬಳಕೆಯಲ್ಲಿದೆ. ಆದರೆ ಇದೀಗ ಭಾರತ ಎಂಬ ಒಂದೇ ಹೆಸರು ಖಾಯಂಗೊಳಿಸುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಲಾಗಿತ್ತು.

ಈ ಬಗ್ಗೆ ಸುಪ್ರೀಂಕೋರ್ಟ್ ಇಂದು ನಿರ್ಧಾರ ಪ್ರಕಟಿಸುವ ಸಾಧ‍್ಯತೆಯಿದೆ. ಸಂವಿಧಾನದಲ್ಲಿ ಎರಡೂ ಹೆಸರುಗಳ ಉಲ್ಲೇಖವಿದೆ. ಆದರೆ ಭಾರತ ಎಂಬುದನ್ನೇ ಖಾಯಂಗೊಳಿಸಬೇಕೆಂದು ಸುಪ್ರೀಂಕೋರ್ಟ್ ಗೆ ಸಲ್ಲಿಸಲಾದ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಬ್ರಿಟಿಷರು ನೀಡಿದ್ದ ಇಂಡಿಯಾ ಬದಲಿಗೆ ಭಾರತ ಎಂದೇ ಖಾಯಂಗೊಳಿಸಬೇಕೆಂದು ಅರ್ಜಿಯಲ್ಲಿ ಬೇಡಿಕೆಯಿಡಲಾಗಿದೆ. ದೆಹಲಿಯ ನಿವಾಸಿಯೊಬ್ಬರು ಈ ಸಂಬಂಧ ಕೋರ್ಟ್ ಮೊರೆ ಹೋಗಿದ್ದರು.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!