janadhvani

Kannada Online News Paper

ಪ್ರಯಾಣಿಕರಿಲ್ಲ- ಮುಂಬೈ ಮತ್ತು ಚೆನ್ನೈ ವಿಮಾನ ರದ್ದು

ಮಂಗಳೂರು: ಪ್ರಯಾಣಿಕರ ಕೊರತೆ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ಮುಂಬೈ ಮತ್ತು ಚೆನ್ನೈ ವಿಮಾನ ಹಾರಾಟ ರದ್ದು ಮಾಡಲಾಗಿದೆ.

ಸೋಮವಾರ ಮಂಗಳೂರು ಮತ್ತು ಬೆಂಗಳೂರು ನಡುವೆ ಮಾತ್ರ ವಿಮಾನ ಸಂಚಾರ ನಡೆಯಲಿದ್ದು, ಹಗಲಿನಲ್ಲಿ ಮಂಗಳೂರು-ಬೆಂಗಳೂರು ಮಧ್ಯೆ ವಿಮಾನ ಸಂಚಾರ ಮಾಡುವುದಿಲ್ಲ. ಬೆಂಗಳೂರಿಗೆ ರಾತ್ರಿ 7.35ಕ್ಕೆ ಇಂಡಿಗೋ ವಿಮಾನ, ರಾತ್ರಿ 9.50ಕ್ಕೆ ಸ್ಪೈಸ್ ಜೆಟ್ ವಿಮಾನ ಪ್ರಯಾಣ ಮಾಡಲಿದೆ.

ಸೋಮವಾರ ಒಟ್ಟು ಆರು ವಿಮಾನಗಳು ನಿಗದಿ ಮಾಡಲಾಗಿತ್ತು. ಆದರೆ, ಪ್ರಯಾಣಿಕರ ಕೊರತೆ ಮತ್ತು ತಾಂತ್ರಿಕ ಕಾರಣಗಳಿಂದಾಗಿ ನಾಲ್ಕು ವಿಮಾನ ಹಾರಾಟ ರದ್ದು ಮಾಡಲಾಗಿದ್ದು, ಕೇವಲ ಬೆಂಗಳೂರಿಗೆ ವಿಮಾನ ಸಂಚರಿಸಲಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ಎಸ್‌ಜಿ 1035/ ಎಸ್‌ಜಿ 1027- ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ಆಗಮನ ಹಾಗೂ 10.20ಕ್ಕೆ ನಿರ್ಗಮಿಸಬೇಕಾಗಿದ್ದ ಯಾನ ರದ್ದು ಗೊಂಡಿದೆ. ಮುಂಬೈನಿಂದ ಬೆಳಗ್ಗೆ 8.35ಕ್ಕೆ ಆಗಮನ ಹಾಗೂ 9.05ಕ್ಕೆ ನಿರ್ಗಮನಕ್ಕೆ ನಿಗದಿಯಾಗಿದ್ದ ಎಸ್‌ಜಿ356/ಎಸ್‌ಜಿ 353 ವಿಮಾನ ಹಾರಾಟವೂ ರದ್ದುಗೊಂಡಿದೆ. ಇದೇ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿಗದಿಯಾಗಿದ್ದ ಇಂಡಿಗೋದ ಮುಂಬೈ ವಿಮಾನ 6ಇ5327/6ಇ5328 ಹಾರಾಟವೂ ರದ್ದು ಗೊಂಡಿದೆ. ಸ್ಪೈಸ್ ಜೆಟ್‌ನಿಂದ ಸಂಜೆಯ ಬೆಂಗಳೂರಿನ ವಿಮಾನ ಹಾರಾಟದ ಕುರಿತಂತೆ ಸದ್ಯ ಕಾರ್ಯ ನಿರ್ವಹಿಸಲಿವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !! Not allowed copy content from janadhvani.com