ಕರಾಚಿಯಲ್ಲಿ ವಿಮಾನ ಪತನ- 73 ಮಂದಿ ಮೃತ್ಯು

ಕರಾಚಿ: 98 ಪ್ರಯಾಣಿಕರು ಹಾಗೂ 8 ಸಿಬ್ಬಂದಿಗಳನ್ನು ಹೊತ್ತ ವಿಮಾನ ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗೋ ಕೆಲ ನಿಮಿಷಗಳ ಮುನ್ನ ಅಪಘಾತಕ್ಕೀಡಾಗಿದ್ದು, ಕನಿಷ್ಠ 73 ಮಂದಿ ಮೃತಪಟ್ಟಿದ್ದಾಗಿ ವರದಿಯಾಗಿದೆ.

ಲಾಹೋರ್‌ನಿಂದ 99 ಪ್ರಯಾಣಿಕರನ್ನು ಹೊತ್ತು ಕರಾಚಿಗೆ ಆಗಮಿಸುತ್ತಿದ್ದ ವಿಮಾನ 8303, ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಅನ್ನುವಷ್ಟರಲ್ಲೇ ದುರಂತ ಸಂಭವಿಸಿದೆ.

ವಿಮಾನ ನಿಲ್ದಾಣದ ಲ್ಯಾಡಿಂಗ್ ಸನಿಹ ರೆಸಿಡೆನ್ಶಿಯಲ್ ವಲಯವಿದೆ. ಇಲ್ಲಿ ಹಲವು ಮನೆಗಳು ಹಾಗೂ ನಿವಾಸಿಗಳಿದ್ದಾರೆ. ವಿಮಾನ ಪತನದಿಂದ ಇದೀಗ ಇಲ್ಲಿನ ಕೆಲ ಮನೆಗಳು ಹೊತ್ತಿ ಉರಿದಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದೆ.

ಮಂಗಳೂರು ದುರಂತದ ಕಹಿ ನೆನಪು


ಮೇ 22, 2010ರಂದು ಮಂಗಳೂರು ವಿಮಾನ ದುರಂತ ಸಂಭವಿಸಿ 158 ಮಂದಿ ಮೃತಪಟ್ಟಿದ್ದರು. ಈ ದುರಂತ ನಡೆದು ಇಂದಿಗೆ 10 ವರ್ಷಗಳಾಗಿವೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!