janadhvani

Kannada Online News Paper

ಜೂನ್‌ 1 ರಿಂದ ವಿಶೇಷ ರೈಲುಗಳ ಸೇವೆ ಆರಂಭ- ರಿಸರ್ವೇಷನ್ ಕೌಂಟರ್ ಗೆ ಚಾಲನೆ

ನವದೆಹಲಿ: ಲಾಕ್ ಡೌನ್ನಿಂದ ಸ್ಥಗಿತವಾಗಿದ್ದ ಪ್ರಯಾಣಿಕ ರೈಲುಗಳ ಪೈಕಿ ವಿಶೇಷ ರೈಲುಗಳ ಓಡಾಟ ಶೀಘ್ರವೇ ಜನತೆಯ ಸೇವೆಗೆ ಲಭ್ಯವಾಗಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.ಜೂನ್‌ 1 ರಿಂದ ಎಸಿ ರಹಿತ 200 ವಿಶೇಷ ರೈಲುಗಳ ಸೇವೆ ಆರಂಭವಾಗಲಿದೆ.

ರಿಸರ್ವೇಷನ್ ಕೌಂಟರ್‍ ಆರಂಭ


ದಾವಣಗೆರೆ: ಜೂನ್ 1ರಿಂದ ಆರಂಭವಾಗುವ 100 ಜೋಡಿ ರೈಲುಗಳಿಗೆ ದಾವಣಗೆರೆಯ ಸೇರಿ ಮೈಸೂರು, ಶಿವಮೊಗ್ಗ ಟೌನ್ ಮತ್ತು ಹಾಸನ ನಿಲ್ದಾಣಗಳ ರಿಸರ್ವೇಷನ್ ಕೌಂಟರ್‍ಗಳನ್ನು ಕಾಯ್ದಿರಿಸಿದ ಟಿಕೆಟ್ ಬುಕ್ಕಿಂಗ್ ಸೇವೆ ಶುಕ್ರವಾರದಿಂದ ಆರಂಭವಾಗಿದೆ.

ರಿಸರ್ವೇಷನ್ ಕೌಂಟರ್‍ಗಳನ್ನು ಹಂತ ಹಂತವಾಗಿ ತೆರೆಯಲು ರೈಲ್ವೆಯು ನಿರ್ಧರಿಸಿದ್ದು, ಮೊದಲಿಗೆ ಪ್ರಮುಖ ನಿಲ್ದಾಣಗಳಲ್ಲಿನ ಕೌಂಟರ್‍ಗಳನ್ನು ತೆರೆಯಲಾಗಿದೆ. ಲಾಕ್‍ಡೌನ್ ಸಂದರ್ಭದಲ್ಲಿ ರದ್ದುಪಡಿಸಲಾಗಿದ್ದ ರೈಲು ಗಾಡಿಗಳಲ್ಲಿ ಟಿಕೆಟ್ ಹೊಂದಿದ್ದ ಪ್ರಯಾಣಿಕರ ಹಣ ಮರುಪಾವತಿಯ ಸೌಲಭ್ಯವನ್ನು ಸಹ ಈ ಕೌಂಟರ್‍ಗಳಲ್ಲಿ ಮೇ 25ರಿಂದ ಪಡೆಯಬಹುದು.

ರಾಜ್ಯದಲ್ಲಿ 2 ಜೋಡಿ ಅಂತರ್ ಜಿಲ್ಲಾ ರೈಲುಗಳು ಬೆಂಗಳೂರಿನಿಂದ ಬೆಳಗಾವಿಗೆ (ವಾರದಲ್ಲಿ ಮೂರು ದಿನ) ಎಕ್ಸ್‌ಪ್ರೆಸ್ ವಿಶೇಷ ರೈಲು ಮತ್ತು ಬೆಂಗಳೂರಿನಿಂದ ಮೈಸೂರಿಗೆ (ಭಾನುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ) ಎಕ್ಸ್‌ಪ್ರೆಸ್‌ ವಿಶೇಷ ರೈಲು ಪ್ರಾರಂಭಿಸಲಾಗಿದೆ.

ಅಂತರ ಕಾಯ್ದುಕೊಳ್ಳುವುದು ಮತ್ತು ಇತರೆ ನಿಗದಿತ ಕೋವಿಡ್ -19 ಕ್ರಮ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಬುಕ್ಕಿಂಗ್‌ ಕಚೇರಿಗಳು ಸೇರಿ ರೈಲ್ವೆಯ ಆವರಣದಲ್ಲಿ ಸ್ವಚ್ಚತೆ, ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಗ್ರಾಹಕರಲ್ಲಿ ರೈಲ್ವೆ ಇಲಾಖೆ ಕೋರಲಾಗಿದೆ ಎಂದು ನೈರುತ್ಯ ರೈಲ್ವೆ ವಿಭಾಗ, ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com