janadhvani

Kannada Online News Paper

ಇಂದಿನಿಂದ ಈದುಲ್ ಫಿತ್ವ್’ರ್ ಹಬ್ಬ ಪ್ರಯುಕ್ತ 12 ದಿನಗಳ ರಜೆ

ದೋಹಾ: ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಕತಾರ್‌ ನಲ್ಲಿ ಈದುಲ್ ಫಿತ್ವ್ರ್ ಹಬ್ಬ ಪ್ರಯುಕ್ತ ರಜೆ ಘೋಷಿಸಲಾಗಿದೆ.

ಮೇ 19 ರ ಮಂಗಳವಾರದಿಂದ ಮೇ 28 ರ ಗುರುವಾರ ವರೆಗೆ ರಜಾದಿನಗಳಾಗಿದ್ದು,ಸರ್ಕಾರಿ ನೌಕರರಿಗೆ ವಾರಾಂತ್ಯದ ರಜಾದಿನಗಳು ಸೇರಿ ಮೇ 31 ರಂದು ಕೆಲಸ ಪುನರಾರಂಭಗೊಳ್ಳಲಿದೆ. ಇದರೊಂದಿಗೆ ಅವರಿಗೆ ಒಟ್ಟು 12 ದಿನಗಳ ರಜೆ ಲಭ್ಯವಾಗಿದೆ.

ಇದು ವಿವಿಧ ಸಚಿವಾಲಯಗಳು ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಅನ್ವಯಿಸುತ್ತದೆ.

ಕತಾರ್ ಬ್ಯಾಂಕ್ ನ ಈದ್ ಪ್ರಯುಕ್ತ ರಜೆ ಹಾಗೂ ಕೆಲಸ ದಿನಗಳ ಕುರಿತು ಸೆಂಟ್ರಲ್ ಬ್ಯಾಂಕ್ ಆಫ್ ಕತಾರ್ ಪ್ರತ್ಯೇಕವಾಗಿ ಪ್ರಕಟಿಸಲಿದೆ.

error: Content is protected !! Not allowed copy content from janadhvani.com