janadhvani

Kannada Online News Paper

ಝಾಕಿರ್ ನಾಯ್ಕ್‌ ಗಡೀಪಾರಿಗೆ ಮಲೇಷ್ಯಾ ಸರ್ಕಾರಕ್ಕೆ ಭಾರತ ಮನವಿ

ನವದೆಹಲಿ: ಸಲಫಿ ಪ್ರಚಾರಕರೂ, ಭಾಷಣಗಾರರೂ ಆಗಿರುವ ಝಾಕಿರ್ ನಾಯ್ಕ್‌ ರನ್ನು ಗಡೀಪಾರು ಮಾಡುವಂತೆ ಮಲೇಷ್ಯಾ ಸರ್ಕಾರಕ್ಕೆ ಭಾರತ ಅಧಿಕೃತವಾಗಿ ಮನವಿ ಮಾಡಿಕೊಂಡಿದೆ.

ಭಾರತದಲ್ಲಿ ಝಾಕಿರ್ ನಾಯ್ಕ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಅವರನ್ನು ಹಸ್ತಾಂತರಿಸುವಂತೆ ಮಲೇಷ್ಯಾ ಸರ್ಕಾರಕ್ಕೆ ಅದೀಕೃವಾಗಿ ಮನವಿ ಮಾಡಿಕೊಳ್ಳಲಾಗಿದೆ.

ಭಯೋತ್ಪಾದನೆಗೆ ಪ್ರಚೋದನೆ, ಭ್ರಷ್ಟಾಚಾರ, ಕೋಮುಭಾವನೆ ಕೆರಳಿಸುವ ಭಾಷಣ ಹೀಗೆ ಝಾಕಿರ್ ನಾಯ್ಕ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳ ವಿಚಾರಣೆಗಾಗಿ ಹಸ್ತಾಂತರಿಸುವಂತೆ ಭಾರತ ಕೋರಿದೆ.

ಈ ಹಿಂದೆ ಝಾಕಿರ್ ನಾಯ್ಕ್ ರನ್ನು ಹಸ್ತಾಂತರಿಸುವಂತೆ ಭಾರತದ ವಿನಂತಿ ಪತ್ರ ಕಳುಹಿಸಿದರೆ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಮಲೇಷ್ಯಾ ಹೇಳಿತ್ತು. ಇದೀಗ ಭಾರತ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಭಾರತ ಅಧಿಕೃತವಾಗಿ ಮನವಿ ಮಾಡಿಕೊಂಡಿದ್ದು, ವಿವಾದಾತ್ಮಕ ಸಲಫಿ ಪ್ರಚಾರಕ ಭಾರತಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ.