ರಿಯಾದ್: ಸೌದಿ ಅರೇಬಿಯಾದಲ್ಲಿ ಪೆಟ್ರೋಲ್ ಬೆಲೆ ಭಾರೀ ಇಳಿಕೆಯಾಗಿದೆ. ಗ್ಯಾಸೊಲಿನ್ 91 ರ ಬೆಲೆ ಪ್ರತಿ ಲೀಟರಿಗೆ 1.31 ರಿಯಾಲಿನಿಂದ 0.67 ರಿಯಾಲಿಗೆ ಇಳಿಕೆಯಾದರೆ, ಗ್ಯಾಸೊಲಿನ್ 95 ರ ಬೆಲೆ ಪ್ರತಿ ಲೀಟರಿಗೆ 1.47 ರಿಂದ 0.82 ರಿಯಾಲ್ ಗೆ ಇಳಿಕೆಯಾಗಿದೆ.
ಕಚ್ಚಾ ತೈಲ ಬೆಲೆ ಸೋಮವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೀವ್ರವಾಗಿ ಕುಸಿದಿರುವುದೇ ಬೆಲೆ ಇಳಿಕೆಗೆ ಕಾರಣ. ಮುಂದಿನ ತಿಂಗಳು 10 ರವರೆಗೆ ಇದೇ ಬೆಲೆಯಲ್ಲೆ ಮಾರಾಟ ಮುಂದುವರಿಯಲಿದೆ. ಪ್ರತಿ ತಿಂಗಳು, ಸೌದಿ ಅರಾಮ್ಕೊ ಬೆಲೆಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸರಿಹೊಂದಿಸಲಾಗುತ್ತದೆ.