ಸಿಂಗಪೂರ್: ಕೊರೊನಾ ವೈರಸ್ ಶೀಘ್ರದಲ್ಲಿಯೇ ಭಾರತ ಸೇರಿ ಹಲವು ರಾಷ್ಟ್ರಗಳಲ್ಲಿ ಅಂತ್ಯವಾಗಲಿದೆ ಎಂದು ಸಿಂಗಪೂರ್ ತಂತ್ರಜ್ಞಾನ ಮತ್ತು ವಿನ್ಯಾಸ ವಿಶ್ವವಿದ್ಯಾಲಯದ (SUTD)ಯ ಸಂಶೋಧಕರು ಹೇಳಿದ್ದಾರೆ. ಕೃತಕ ಬುದ್ಧಮತ್ತೆ ಆಧಾರಿತ ದತ್ತಾಂಶ ವಿಶ್ಲೇಷಣೆಯಿಂದ ಹಲವು ರಾಷ್ಟ್ರಗಳಲ್ಲಿ ಮೇ ತಿಂಗಳಲ್ಲಿ ಕೊರೊನಾ ವೈರಸ್ ಅಂತ್ಯ ಕಾಣಲಿದೆ ಎಂದಿದ್ದಾರೆ.
ಎಸ್‌ಯುಟಿಡಿಯ ಸಂಶೋಧಕರು ಈ ಸಂಶೋಧನೆಗೆ ಎಸ್‌ಐಆರ್ (ಶಂಕಿತ-ಸೋಂಕಿತ-ಗುಣಮುಖ) ಮಾದರಿಯನ್ನು ಉಪಯೋಗಿಸಿದ್ದು, ವಿವಿಧ ದೇಶಗಳಲ್ಲಿ ಕೊರೊನಾ ಅಂತ್ಯವಾಗುವ ಪ್ರಮುಖ ದಿನಗಳನ್ನು ದತ್ತಾಂಶ ಆಧಾರದಲ್ಲಿ ಹೇಳುತ್ತಾ ಸಾಗಿದ್ದಾರೆ.
ಕೊರೊನಾ ವೈರಸ್ ಭಾರತದಲ್ಲಿ ಮೇ 21ಕ್ಕೆ ಶೇ.97ರಷ್ಟು ಅಂತ್ಯವಾಗಲಿದೆ ಎಂದು ಎಸ್‌ಯುಟಿಡಿ ಅಧ್ಯಯನ ಭವಿಷ್ಯ ನುಡಿದಿದೆ. ಎಸ್‌ಐಆರ್ ಮಾದರಿಯಲ್ಲಿ ವಿಶ್ವದ ದತ್ತಾಂಶವನ್ನು ಬಳಸಿಕೊಂಡು, ರೋಗ ಯಾವ ರೀತಿ ಜಾಗತಿಕವಾಗಿ ಹರಡಿದೆ ಎಂಬ ಆಧಾರದ ಮೇಲೆ ಎಸ್‌ಯುಟಿಡಿ ಸಂಶೋಧಕರು ಈ ಭವಿಷ್ಯವನ್ನು ನುಡಿದಿದ್ದಾರೆ. ಅದಲ್ಲದೇ ಈ ಭವಿಷ್ಯ ಕೇವಲ ಶೈಕ್ಷಣಿಕ ಮತ್ತು ಸಂಶೋಧನೆಗೆ ಮಾತ್ರ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಭಾರತ ಸರಕಾರವು ಮೇ 16ರವರೆಗೆ ಲಾಕ್‌ಡೌನ್‌ನ್ನು ವಿಸ್ತರಿಸಿದರೆ, ಭಾರತ ಕೊರೊನಾ ಮುಕ್ತ ಆಗಲಿದೆ ಎಂದು ಹೇಳಿತ್ತು. ಆದರೆ, ಭಾರತದಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಭಾನುವಾರ ಒಂದೇ ದಿನ ಹತ್ತಿರತ್ತಿರ 2000 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಇನ್ನು, ಎಸ್‌ಯುಟಿಡಿ ಸಂಶೋಧಕರ ಪ್ರಕಾರ ವಿಶ್ವದಲ್ಲಿ ಕೊರೊನಾ ವೈರಸ್ ಶೇ.97ರಷ್ಟು ಮೇ 29ಕ್ಕೆ ಕಡಿಮೆಯಾಗಲಿದ್ದು, ಡಿಸೆಂಬರ್ 8ಕ್ಕೆ ಸಂಪೂರ್ಣ ತೊಲಗಲಿದೆ ಎಂದು ಎಐ ಭವಿಷ್ಯ ನುಡಿದುದ್ದಾರೆ. ಯುಎಸ್‌ನಲ್ಲಿ ಮೇ 11, ಇಟಲಿಯಲ್ಲಿ ಮೇ 7, ಇರಾನ್‌ನಲ್ಲಿ ಮೇ 10, ಟರ್ಕಿ ಮೇ 15, ಇಂಗ್ಲೆಂಡ್ ಮೇ 9, ಸ್ಪೇನ್ ಮೇ 1, ಫ್ರಾನ್ಸ್ ಮೇ 3, ಜರ್ಮನಿ ಏಪ್ರಿಲ್ 30 ಹಾಗೂ ಕೆನಡಾ ಮೇ 16ರಂದು ಶೇ.97 ರಷ್ಟು ಕೊರೊನಾ ಕಡಿಮೆಯಾಗಲಿದೆ ಎಂದಿದ್ದಾರೆ.















ಇನ್ನಷ್ಟು ಸುದ್ದಿಗಳು
ಇರಾನ್-ಯುಎಸ್ ಕದನ ವಿರಾಮ: ಡೊನಾಲ್ಡ್ ಟ್ರಂಪ್ ಘೋಷಣೆ- ಇರಾನ್ನಿಂದಲೂ ದೃಢೀಕರಣ
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
“ಬೆಲೆ ಏರಿಕೆ ನನಗೆ ಇಷ್ಟ”-ಇರಾನ್ ಯುದ್ಧದ ಕಾರಣದಿಂದ ಉಂಟಾದ ಬೆಲೆ ಏರಿಕೆಯ ಬಗ್ಗೆ ಟ್ರಂಪ್ ವಿವಾದಾತ್ಮಕ ಹೇಳಿಕೆ
’60 ದಿನಗಳಲ್ಲಿ ಹೊಸ ಕೆಲಸ ಹುಡುಕಿ, ಇಲ್ಲದಿದ್ದರೆ ದೇಶ ತೊರೆಯಿರಿ’- ಭಾರತೀಯ ಉದ್ಯೋಗಿಗಳಿಗೆ ಆತಂಕ
ಗಲ್ಫ್ ನಾಯಕರ ವಿನಂತಿಗೆ ಮನ್ನಣೆ ; ಇರಾನ್ ಮೇಲಿನ ದಾಳಿ ತಾತ್ಕಾಲಿಕ ರದ್ದು- ಟ್ರಂಪ್
‘ಯುದ್ಧ ಕೊನೆಗೊಳಿಸುವುದಕ್ಕೆ ಆದ್ಯತೆ ನೀಡಬೇಕು’- ಅಮೆರಿಕದ 14 ಅಂಶಗಳ ಪ್ರಸ್ತಾವನೆಗೆ ಇರಾನ್ ಪ್ರತಿಕ್ರಿಯೆ
ಕೊಲೆ ಬೆದರಿಕೆ, ದಂಗೆಯ ಸಾಧ್ಯತೆ; ನಿವಾಸ ಬಿಟ್ಟು ಹೊರಬಾರದ ಪುಟಿನ್- ಭದ್ರತಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ
ಇರಾಕ್ನ ನೂತನ ಪ್ರಧಾನ ಮಂತ್ರಿಯಾಗಿ ಉದ್ಯಮಿ ಅಲಿ ಅಲ್-ಝೈದಿ ಆಯ್ಕೆ- ದೇಶದ ರಾಜಕೀಯದಲ್ಲಿ ಹೊಸ ಯುಗ?
ಅಮೆರಿಕಕ್ಕೆ ಇರಾನ್ನಿಂದ ‘ಬಿಗ್ ಡೀಲ್’: ಹೋರ್ಮುಜ್ ಜಲಸಂಧಿ ತೆರೆಯಲು ಸಿದ್ಧ, ಆದರೆ ಒಂದು ಷರತ್ತು!
ಟ್ರಂಪ್ ಔತಣಕೂಟದಲ್ಲಿ ಶೂಟೌಟ್: ನಾಸಾ ಫೆಲೋಶಿಪ್ ಪಡೆದ ಎಂಜಿನಿಯರ್ ಬಂಧನ