janadhvani

Kannada Online News Paper

ಸೌದಿ:ಇಂದಿನಿಂದ ಕರ್ಫ್ಯೂ ಸಡಿಲಿಕೆ- ಪಾಸ್ ಇಲ್ಲದೆ ಹೊರಡಲು ಅವಕಾಶ

ರಿಯಾದ್,ಏ.26: ಸೌದಿ ಅರೇಬಿಯಾದಲ್ಲಿ, 24 ಗಂಟೆಗಳ ಕರ್ಫ್ಯೂವನ್ನು ಕೇವಲ ಮೆಕ್ಕಾ ನಗರಕ್ಕೆ ಮಾತ್ರ ಸೀಮಿತ ಗೊಳಿಸಲಾಗಿದೆ. ಮಕ್ಕಾ ಹೊರತುಪಡಿಸಿ ದೇಶದ ಎಲ್ಲಾ ಭಾಗಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಯಾವುದೇ ಕರ್ಫ್ಯೂ ಇರುವುದಿಲ್ಲ ಎಂದು ಎರಡೂ ಹರಂಗಳ ಉಸ್ತುವಾರಿ, ದೊರೆ ಸಲ್ಮಾನ್ ರಾಜರು ಘೋಷಿಸಿದ್ದಾರೆ.

ರಂಝಾನ್ ಪ್ರಯುಕ್ತ ಕರ್ಫ್ಯೂ ಸಡಿಲಿಕೆಯು ಇಂದಿನಿಂದ ಜಾರಿಗೆ ಬಂದಿದೆ. ಮೇ 13 ರವರೆಗೆ ಇದು ಮುಂದುವರಿಯಲಿದೆ.ಏಪ್ರಿಲ್ 29 ರಿಂದ, ವಾಣಿಜ್ಯ ಸಂಸ್ಥೆಗಳಿಗೆ ಷರತ್ತುಗಳೊಂದಿಗೆ ತೆರೆಯಲು ಅವಕಾಶ ನೀಡಲಾಗಿದೆ.

ಮಾಲ್‌ಗಳು, ಸಣ್ಣ ಮತ್ತು ಸಗಟು ಸಂಸ್ಥೆಗಳು ತೆರೆದಿರುತ್ತದೆ. ಕ್ಷೌರಿಕ ಅಂಗಡಿಗಳು, ಸಲೂನ್‌ಗಳು, ಜಿಮ್‌ಗಳು, ಉದ್ಯಾನವನಗಳು ಮತ್ತು ಸಿನೆಮಾ ಥಿಯೇಟರ್ ಗಳಿಗೆ ನಿಷೇಧ ಮುಂದುವರಿಯಲಿದೆ.

ಹೋಟೆಲ್‌ಗಳು ಮತ್ತು ಆಹಾರ ಸಂಸ್ಥೆಗಳಿಂದ ಪಾರ್ಸೆಲ್‌ಗಳನ್ನು ಪಡೆಯಲು ಮಾತ್ರ ಅವಕಾಶವಿದೆ. ಗುತ್ತಿಗೆ ಸಂಸ್ಥೆಗಳು ಏಪ್ರಿಲ್ 29 ರಿಂದ ಪೂರ್ಣ ಸಮಯ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಐದು ಜನರಿಗಿಂತ ಹೆಚ್ಚಿನ ಗುಂಪು ಸೇರುವ ಎಲ್ಲಾ ಕಾರ್ಯಕ್ರಮಗಳ ನಿರ್ಬಂಧ ಮುಂದುವರಿಯಲಿವೆ.

ಅಂಗಡಿಗಳು ಮತ್ತು ಸಂಸ್ಥೆಗಳು ಸಾಮಾಜಿಕ ಅಂತರಗಳನ್ನು ಪಾಲಿಸಿ, ಸಮನ್ವಯ ರಕ್ಷಣೆಯನ್ನು ಖಾತ್ರಿಪಡಿಸಿಕೊಳ್ಳುವುದರ ಮೂಲಕ ಮಾತ್ರ ಕಾರ್ಯನಿರ್ವಹಿಸ ಬೇಕು. ಉಲ್ಲಂಘನೆಗೆ ದಂಡ ವಿಧಿಸಲಾಗುತ್ತದೆ.

ಪ್ರಸ್ತುತ ಕರ್ಫ್ಯೂ ಅನ್ನು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಸಡಿಲಿಸಲಾಗಿತ್ತು, ಆದರೆ ಈ ಸಮಯದಲ್ಲಿ ವಾಹನಗಳಿಗೆ ಪಾಸ್ ನೀಡಬೇಕಾಗಿತ್ತು. ಇನ್ಮುಂದೆ ಮೇ.13 ರ ತನಕ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಪಾಸ್ ರಹಿತವಾಗಿ ವಾಹನಗಳನ್ನು ಇಳಿಸಬಹುದು. ಕೋವಿಡ್ ಹರಡುವ ಭೀತಿಯಿರುವ ಕಾರಣ ಮುನ್ನೆಚ್ಚರಿಕೆಯಿಲ್ಲದೆ ಯಾರೂ ಮನೆಯಿಂದ ಹೊರಡಬಾರದೆಂದು ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.

error: Content is protected !! Not allowed copy content from janadhvani.com